ಕೇವಲ 631 ಖಾತೆಗಳಿಗೆ 59 ಸಾವಿರ ಕೋಟಿ ರೂ. ಜಮಾ!

ಕೃಷಿ ಸಾಲ ದೊರಕಿದ್ದು ಯಾರಿಗೆ?!

ಅಂಬಾನಿಯ ರಿಲಯನ್ಸ್‌ಗೂ ಪಾಲು!

ಒಂದು ಅಗ್ರೊ-ಬ್ಯುಸಿನೆಸ್ ಕಂಪೆನಿಗೆ 100 ಕೋಟಿ ರೂ. ಸಾಲ ಕೊಡಲು ಬ್ಯಾಂಕುಗಳಿಗೆ ಯಾವುದೇ ತೊಂದರೆಯಿಲ್ಲ! ಆದರೆ ಇದೇ ಮೊತ್ತವನ್ನು 200-250 ಸಣ್ಣ ಮತ್ತು ಮಧ್ಯಮ ರೈತ ಕುಟುಂಬಗಳಿಗೆ ನೀಡಲು ಬ್ಯಾಂಕುಗಳಿಗೆ ಆಸಕ್ತಿಯಿಲ್ಲ! ಕಾರ್ಪೊರೇಟ್‌ಗಳ ಪರವಾಗಿಯೇ ಇರುವ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ತನ್ನ ಶೇ. 18 ಕೃಷಿ ಸಾಲದ ಗುರಿಯನ್ನು ತಲುಪಿ, ಕೈ ತೊಳೆದುಕೊಂಡು ಬಿಡುತ್ತದೆ.

2016ರಲ್ಲಿ ಸಾರ್ವಜನಿಕ ಬ್ಯಾಂಕ್‌ಗಳು 58,561 ಕೋಟಿ ರೂ. ಕೃಷಿ ಸಾಲವನ್ನು ಕೇವಲ 631 ಅಕೌಂಟ್‌ಗಳಿಗೆ ವರ್ಗಾಯಿಸಿವೆ. ಪ್ರತೀ ಖಾತೆಗೆ ಸರಾಸರಿ 95 ಕೋಟಿ ರೂ. ಕೃಷಿ ಸಾಲವನ್ನು ವರ್ಗಾಯಿಸುವ ಮೂಲಕ ಲಕ್ಷಾಂತರ ರೈತರಿಗೆ ಮೋಸ ಎಸಗಲಾಗಿದೆ.

‘ದ ವೈರ್’ ಪೋರ್ಟಲ್ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಸಂಬಂಧಿಸಿ, ರಿಸರ್ವ್ ಬ್ಯಾಂಕ್ ಈ ಮಾಹಿತಿ ಒದಗಿಸಿದೆ. 2015, 2014ರ ಸಾಲಿನಲ್ಲೂ ಕೃಷಿ ಸಾಲವನ್ನು 100, 200 ಕೋಟಿಗಳ ಲೆಕ್ಕದಲ್ಲಿ ಅಂಬಾನಿ ಮುಂತಾದ ಮೋದಿ ಹಿಂಬಾಲಕರ ಕಂಪೆನಿಗಳಿಗೆ ವರ್ಗಾಯಿಸುತ್ತಾ ಬರಲಾಗಿದೆ. ಯುಪಿಎ ಆಡಳಿತದ ಅವಧಿಯಲ್ಲೂ ಕೃಷಿ ಸಾಲ ಕಂಪೆನಿಗಳ ಪಾಲಾಗುತ್ತ ಬಂದಿತ್ತು. ಈಗ ‘ಚೌಕಿದಾರ್’ ಆಡಳಿತದಲ್ಲೂ ಮಣ್ಣಿನ ವಾಸನೆಯನ್ನೇ ಗ್ರಹಿಸದ ಬಂಡವಾಳಶಾಹಿಗಳ ಅಕೌಂಟಿಗೆ ಹಾಕಲಾಗುತ್ತಿದೆ. ರೈತ್ ಕಾ ನಾಮ್, ದೇಶ ಕೊ ಪಂಗನಾಮ್! ಇತರ ಸಾಮಾನ್ಯ ಸಾಲಗಳಿಗಿಂತ ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲಗಳನ್ನು ಒದಗಿಸಲಾಗುತ್ತಿದ್ದು, ಮಧ್ಯಮ ಮತ್ತು ಸಣ್ಣ ರೈತರಿಗೆ ನೆರವು ನೀಡುವ ಉದ್ದೇಶ ಹೊಂದಲಾಗಿದೆ. ಸದ್ಯ ಕೃಷಿ ಸಾಲವನ್ನು ಶೇ. 4ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ.
ರೈತ ಸ್ವರಾಜ್ಯ ವೇದಿಕೆಯ ಸಂಸ್ಥಾಪಕ ಕಿರಣ ಕುಮಾರ್ ವಿಸ್ಸಾರ ಅಧ್ಯಯನದ ಪ್ರಕಾರ, ಹಲವಾರು ಕಾರ್ಪೊರೇಟ್ ಕಂಪೆನಿಗಳು ಅಗ್ರೊ-ಬ್ಯುಸಿನೆಸ್ ವ್ಯವಹಾರದಲ್ಲಿ ನಿರತವಾಗಿದ್ದು, ಅವು ರೈತರಿಗೆ ಸಲ್ಲಬೇಕಾದ ಕೃಷಿ ಸಾಲವನ್ನು ಲಪಟಾಯಿಸುತ್ತಿವೆ. ಅಂಬಾನಿಯ ರಿಲಯನ್ಸ್ ಫ್ರೆಶ್ ಕಂಪೆನಿ ಅಗ್ರೊ-ಬ್ಯುಸಿನೆಸ್ ವ್ಯವಹಾರ ನಡೆಸುತ್ತಿದ್ದು, ಗೋಡೌನ್‌ಗಳ ನಿರ್ಮಾಣದಂತಹ ಕೃಷಿಯೇತರ ಕೆಲಸಗಳಿಗಾಗಿ ಅಪಾರ ಮೊತ್ತದ ಕೃಷಿ ಸಾಲವನ್ನು ಕಡಿಮೆಬಡ್ಡಿ ದರದಲ್ಲಿ ಪಡೆಯುತ್ತಿವೆೆ. ಕೇಂದ್ರ ಸರಕಾರ ಮಾತ್ರ ರೈತರಿಗೆ 2016ರಲ್ಲಿ 59 ಸಾವಿರ ಕೋಟಿ ರೂ. ಸಾಲ ಒದಗಿಸಿದ್ದಾಗಿ ಸುಳ್ಳು ಹೇಳುತ್ತ ಬಂದಿದೆ.
ಎಲ್ಲ ಬ್ಯಾಂಕ್‌ಗಳು ತಮ್ಮ ಆದಾಯದ ನಿರ್ದಿಷ್ಟ ಮೊತ್ತವನ್ನು ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳಿಗೆ ಸಾಲದ ರೂಪದಲ್ಲಿ ನೀಡಬೇಕೆಂದು ಆರ್‌ಬಿಐ ನಿಯಮ ರೂಪಿಸಿದೆ. ಇದನ್ನು ಆದ್ಯತಾ ವಲಯ ಸಾಲ ಎನ್ನಲಾಗುತ್ತಿದ್ದು, ಇದರಲ್ಲಿ ಶೇ.18ರಷ್ಟನ್ನು ಕೃಷಿ ಸಾಲಗಳಿಗೆ ವಿನಿಯೋಗಿಸಬೇಕು. ಆದರೆ ಕೃಷಿಯ ಜೊತೆಗೆ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಈ ವಿಭಾಗಕ್ಕೆ ಸೇರಿಸಲಾಗಿದೆ. ಇದರ ಲಾಭ ಪಡೆಯುತ್ತಿರುವ ದೈತ್ಯ ಅಗ್ರೊ-ಬ್ಯುಸಿನೆಸ್ ಕಂಪೆನಿಗಳು ರೈತರ ಸಾಲವನ್ನು ಕಬಳಿಸುತ್ತಿವೆ.
ತಮ್ಮ ಸಂಪನ್ಮೂಲಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಮತ್ತು ಕೃಷಿ ಸಾಲದ ಪೂರೈಕೆಯನ್ನು ದಾಖಲೆಗಳಲ್ಲಿ ತೋರಿಸಲು ಬ್ಯಾಂಕ್‌ಗಳು ಕಾರ್ಪೊರೇಟ್ ಕಂಪೆನಿಗಳೊಂದಿಗೆ ಶಾಮೀಲಾಗಿ ರೈತರನ್ನು ವಂಚಿಸುತ್ತಿವೆ.
ಖ್ಯಾತ ಕೃಷಿ-ಆರ್ಥಿಕ ತಜ್ಞ ದೇವಿಂದರ್ ಶರ್ಮಾ ಮೊದಲಿನಿಂದಲೂ ಈ ಬಗ್ಗೆ ಎಚ್ಚರಿಸುತ್ತ ಬಂದಿದ್ದರೂ ಯಾವ ಸರಕಾರವೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ., ‘‘ಗೋಡೌನ್, ಶೈತ್ಯಾಗಾರದಂತಹ ಕಮರ್ಷಿಯಲ್ ಸಂಕೀರ್ಣಗಳನ್ನು ನಿರ್ಮಿಸುವುದು ಅದು ಹೇಗೆ ಕೃಷಿ ಚಟುವಟಿಕೆ ಆಗುತ್ತದೆ? ಮೊದಲು ಆರ್‌ಬಿಐ ನಿಯಮಗಳಿಗೆ ತಿದ್ದುಪಡಿ ತರಬೇಕಾಗಿದೆ’’ ಎಂದು ಶರ್ಮಾ ಆಕ್ಷೇಪ ವ್ಯಕ್ತಪಡಿಸುತ್ತಾರೆ.
ಒಂದು ಅಗ್ರೊ-ಬ್ಯುಸಿನೆಸ್ ಕಂಪೆನಿಗೆ 100 ಕೋಟಿ ರೂ. ಸಾಲ ಕೊಡಲು ಬ್ಯಾಂಕುಗಳಿಗೆ ಯಾವುದೇ ತೊಂದರೆಯಿಲ್ಲ! ಆದರೆ ಇದೇ ಮೊತ್ತವನ್ನು 200-250 ಸಣ್ಣ ಮತ್ತು ಮಧ್ಯಮ ರೈತ ಕುಟುಂಬಗಳಿಗೆ ನೀಡಲು ಬ್ಯಾಂಕುಗಳಿಗೆ ಆಸಕ್ತಿಯಿಲ್ಲ! ಕಾರ್ಪೊರೇಟ್‌ಗಳ ಪರವಾಗಿಯೇ ಇರುವ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ತನ್ನ ಶೇ. 18 ಕೃಷಿ ಸಾಲದ ಗುರಿಯನ್ನು ತಲುಪಿ, ಕೈ ತೊಳೆದುಕೊಂಡು ಬಿಡುತ್ತದೆ.
2014-15ರಲ್ಲಿ 8 ಲಕ್ಷ ಕೋಟಿ ರೂ.ಗಳನ್ನು ಈಗಿನ ಎನ್‌ಡಿಎ ಸರಕಾರ ಬ್ಯಾಂಕುಗಳ ಮೂಲಕ ವಿತರಿಸಿದೆ. 2017-18ರಲ್ಲಿ ಈ ಮೊತ್ತ 11 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಆರ್‌ಬಿಐ ನೀಡಿರುವ ಅಂಕಿಅಂಶಗಳ ಪ್ರಕಾರ ಈ ಕೃಷಿಸಾಲವೆಲ್ಲ ಅಗ್ರೊ-ಬ್ಯುಸಿನೆಸ್ ಹೆಸರಿನ ಕಳ್ಳ ಖದೀಮ ಕಂಪೆನಿಗಳ ಪಾಲಾಗಿದೆ. ಯಾವ್ಯಾವ ಕಂಪೆನಿಗಳಿಗೆ ಎಷ್ಟೆಷ್ಟು ಕೃಷಿ ಸಾಲ ಕೊಡಲಾಗಿದೆ ಎಂಬ ಮಾಹಿತಿಯನ್ನು ನೀಡಲು ಆರ್‌ಬಿಐ ಮತ್ತು ಬ್ಯಾಂಕುಗಳು ನಿರಾಕರಿಸುತ್ತಿವೆ. ಮುಂಬೈ ನಗರದ ಎಸ್‌ಬಿಐ ಶಾಖೆಯೊಂದು 2016ರಲ್ಲಿ 29 ಕೋಟಿ ರೂ. ಕೃಷಿ ಸಾಲವನ್ನು ಕೇವಲ ಮೂರು ಖಾತೆಗಳಿಗೆ ವರ್ಗಾಯಿಸಿದೆ ಎಂಬ ಮಾಹಿತಿ ನೀಡಿದೆ.
2015ರಲ್ಲಿ 52,143 ಕೋಟಿ ರೂ.ಗಳನ್ನು 604 ಖಾತೆಗಳಿಗೆ (ತಲಾ ಸರಾಸರಿ 86.33 ಕೋಟಿ ರೂ.), 2014ರಲ್ಲಿ 61 ಸಾವಿರ ಕೋಟಿ ರೂ.ಗಳನ್ನು ಮತ್ತೆ 669 ಕಂಪೆನಿ ಖಾತೆಗಳಿಗೆ ತಲಾ 91.5 ಕೋಟಿ ರೂ.ಗಳಂತೆ ವಿತರಿಸಲಾಗಿದೆ. ಯುಪಿಎ ಸರಕಾರದ ಎರಡನೇ ಬಾರಿಯ ಅವಧಿಯುದ್ದಕ್ಕೂ ಇವೇ 600 ಚಿಲ್ಲರೆ ಕಂಪೆನಿಗಳು ಕಡಿಮೆ ದರದಲ್ಲಿ ರೈತರ ಹೆಸರಲ್ಲಿ ಕೃಷಿ ಸಾಲವನ್ನು ಕಬಳಿಸುತ್ತ ತಮ್ಮ ಸಾಮ್ರಾಜ್ಯಗಳನ್ನು ವಿಸ್ತರಿಸುತ್ತ ನಡೆದಿವೆ.
ಒಂದು ಕಡೆ ಕೃಷಿ ಸಾಲವನ್ನು ಮನ್ನಾ ಮಾಡಲು ಸಾಧ್ಯವೇ ಇಲ್ಲ ಎಂದು ಆರ್ಥಿಕ ಶಿಸ್ತಿನ ಬಗ್ಗೆ ಮಾತಾಡುವ ಮೋದಿ, ಜೇಟ್ಲಿಯವರು ತಮ್ಮ ಹಿಂಬಾಲಕ ಉದ್ಯಮಿಗಳಿಗೆ ಬ್ಯಾಂಕುಗಳನ್ನು ಒತ್ತೆ ಇಟ್ಟಂತೆ ಕಾಣುತ್ತಿದೆ. ಹೀಗಿರುವಾಗ ಅಂಬಾನಿ-ಅದಾನಿಗಳು ‘ಅಚ್ಛೇ ದಿನ್’ ಎಂದು ಸಂಭ್ರಮಿಸದೆ ಇನ್ನೇನು ಮಾಡಿಯಾರು?
ಕೃಪೆ: thewire.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top