ಬಡವರ ತೆರಿಗೆ ಪಾಲು ಏರಿಕೆ! ಕಾರ್ಪೊರೇಟ್ ಪಾಲು ಇಳಿಕೆ!!

ತೈಲ ಬೆಲೆ ಇಳಿಸಲು ಮಾರ್ಗವಿಲ್ಲವೇ?

ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ಸಾಧ್ಯವೇ ಇಲ್ಲವೆಂದು ಕಡ್ಡಿ ಮುರಿದಂತೆ ಹೇಳಿದೆ. ಮೋದಿ ಪರ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಭಕ್ತರು ಇದೆಲ್ಲ ಅಂತರ್‌ರಾಷ್ಟ್ರೀಯ ವಿದ್ಯಮಾನ ಎಂದೋ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಸಂಗ್ರಹವನ್ನು ಬಡವರ ಉದ್ಧಾರದ ಯೋಜನೆಗಳಿಗೆ ಬಳಸಲಾಗುತ್ತದೆ ಎಂದೋ ಕೇಂದ್ರ ಸರಕಾರದ ಬಾಲಂಗೋಚಿಗಳಂತೆ ಅರಚುತ್ತಿದ್ದಾರೆ.
 ವಾಸ್ತವದಲ್ಲಿ, ಮೋದಿ ಸರಕಾರದ ನೀತಿ ಹೇಗಿದೆ ಎಂದರೆ, ಬಡವರು ಮತ್ತು ಮಧ್ಯಮ ವರ್ಗದವರ ಮೇಲಿನ ತೆರಿಗೆ ಪ್ರಮಾಣ ಏರಿಸುತ್ತಲೇ, ಕಾರ್ಪೊರೇಟ್ ತೆರಿಗೆ ಪ್ರಮಾಣವನ್ನು ಇಳಿಸುತ್ತ ಬರಲಾಗಿದೆ. ಆರ್ಥಿಕ ತಜ್ಞ ಪ್ರಸೇನ್‌ಜಿತ್ ಬೋಸ್ ಕೇಂದ್ರ ಸರಕಾರದ ಈ ವರ್ಗ ತಾರತಮ್ಯವನ್ನು ಸರಳ ಭಾಷೆೆಯಲ್ಲಿ ತೆರೆದಿಟ್ಟಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ದರಗಳು ಅಭೂತಪೂರ್ವ ಮಟ್ಟಕ್ಕೆ ಏರಿದ ಪರಿಣಾಮ ಸಾಮಾನ್ಯ ಜನರಲ್ಲಿ ದೊಡ್ಡಮಟ್ಟದ ಅಸಹನೆ ಭುಗಿಲೆದ್ದಿದೆ ಮತ್ತು ಈ ಕಾರಣಕ್ಕಾಗಿ ವಿರೋಧ ಪಕ್ಷಗಳಿಂದ ಭಾರತ್ ಬಂದ್ ಕೂಡ ನಡೆದಿದೆ. ದಿಲ್ಲಿಯಲ್ಲಿ ಪೆಟ್ರೋಲ್ ದರ ಈಗ 80 ರೂ., ಡೀಸೆಲ್ ದರ 72 ರೂ. ದಾಟಿವೆ. ಆಯಾರಾಜ್ಯ ಸರಕಾರಗಳ ವ್ಯಾಟ್ ಪ್ರಮಾಣ ಆಧರಿಸಿ ಉಳಿದ ನಗರ, ಪಟ್ಟಣಗಳಲ್ಲೂ ದರ ಏರಿಕೆಯಾಗಿದೆ. (ನಗರ ಎಂದು ಕರೆಸಿಕೊಳ್ಳುವ ಗದಗಿನಂತಹ ಅರೆ-ನಗರದಲ್ಲಿ ಇವತ್ತು ಪೆಟ್ರೋಲ್‌ದರ 83.83 ರೂ, ಡೀಸೆಲ್‌ದರ 75.63 ರೂ!)

ಈ ಪರಿಸ್ಥಿತಿಯ ಕುರಿತು ನರೇಂದ್ರ ಮೋದಿಯ ಸರಕಾರದ ವಕ್ತಾರರು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.ಇದಕ್ಕಾಗಿ ಅವರು, ಜಾಗತಿಕ ಕಚ್ಚಾ ತೈಲದ ಬೆಲೆ ಮತ್ತು ರೂಪಾಯಿಯ ಅಪವೌಲ್ಯದ ಕಡೆಗೆ ಬೆಟ್ಟು ತೋರಿಸುತ್ತಿದ್ದಾರೆ. ಆದರೆ ಇದೊಂದು ಕುಂಟು ನೆಪ. ಏಶ್ಯಾದ ನೆರೆಹೊರೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಭಾರತದಲ್ಲಿನ ದರಗಳಿಗಿಂತ ತುಂಬ ಕಡಿಮೆ ಇವೆ.

ಸೆಪ್ಟಂಬರ್ ಒಂದರಂದು ಏಶ್ಯಾದ ವಿವಿಧ ದೇಶಗಳಲ್ಲಿನ
ಪೆಟ್ರೋಲ್, ಡೀಸೆಲ್ ದರಗಳು (ಭಾರತೀಯ ರೂ.ನಲ್ಲಿ)

 ಪೆಟ್ರೋಲ್‌                  ಡೀಸೆಲ್‌

ಭಾರತ(ದಿಲ್ಲಿ)           78.6870.42

ಪಾಕಿಸ್ತಾನ            53.5561.47

ಬಾಂಗ್ಲಾ               73.4855.54

ಶ್ರೀಲಂಕಾ            63.9652.05

ನೇಪಾಳ                    69.9459.86

(ಮೂಲ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ)

ಭಾರತದಲ್ಲೇಕೆ ಪೆಟ್ರೋಲ್ ಮತ್ತು ಡೀಸೆಲ್‌ಗಳ ಚಿಲ್ಲರೆ ಮಾರಾಟದರ ಹೆಚ್ಚಿದೆ?

 ಈ ಪದಾರ್ಥಗಳ ಮೇಲೆ ಕೇಂದ್ರ ಸರಕಾರದ ಎಕ್ಸೈಸ್‌ಡ್ಯೂಟಿ (ಅಬಕಾರಿ ಸುಂಕ) ಮತ್ತು ರಾಜ್ಯಗಳ ವ್ಯಾಟ್ ಅತಿಯಾಗಿರುವುದೇ ಈ ಪರಿಸ್ಥಿತಿಗೆ ಕಾರಣ. ಕೇಂದ್ರ ಸರಕಾರವು ಪ್ರತೀ ಲೀಟರ್ ಪೆಟ್ರೋಲ್‌ಗೆ 19.48 ರೂ., ಡೀಸೆಲ್‌ಗೆ 15.33 ರೂ. ಎಕ್ಸೈಸ್ ಡ್ಯೂಟಿ ಸಂಗ್ರಹಿಸಿದರೆ, ರಾಜ್ಯ ಸರಕಾರಗಳು ವ್ಯಾಟ್ ಮತ್ತು ಇತರ ತೆರಿಗೆ ಹೇರುತ್ತಿವೆ. ಪೆಟ್ರೋಲ್ ವಿಷಯದಲ್ಲಿ ಪರೋಕ್ಷ ತೆರಿಗೆಯ ದರವು (ಎಕ್ಸೈಸ್‌ಡ್ಯೂಟಿ ಮತ್ತು ವ್ಯಾಟ್ ಸೇರಿ) ಶೇ.100ನ್ನು ದಾಟಿದ್ದರೆ, ಡೀಸೆಲ್ ವಿಷಯದಲ್ಲಿ ಶೇ. 70ನ್ನು ದಾಟಿದೆ. ಈ ತೆರಿಗೆಗಳನ್ನು ಬಿಟ್ಟು ನೋಡಿದರೆ, (ಇವತ್ತಿನ ಅಂತರ್‌ರಾಷ್ಟ್ರೀಯ ಕಚ್ಚಾ ತೈಲದರವನ್ನು ಪರಿಗಣಿಸಿದಾಗಲೂ) ಪೆಟ್ರೋಲ್ ಮತ್ತು ಡೀಸೆಲ್‌ಗಳ ದರ 40ರೂ.ಗಳ ಆಸುಪಾಸಿನಲ್ಲಿರಬೇಕು.
ಕೋಷ್ಟಕ 2ರಲ್ಲಿ, ಯುಪಿಎ-2 ಸರಕಾರ ಮತ್ತು ಮೋದಿ ಆಡಳಿತ ಅವಧಿಯ ವಾರ್ಷಿಕ ಒಟ್ಟು ತೆರಿಗೆ ಆದಾಯಗಳನ್ನು ನೀಡಲಾಗಿದೆ. ಜೊತೆಗೆ ಪ್ರಮುಖ ತೆರಿಗೆ ಮೂಲಗಳನ್ನು ವಿಭಾಗವಾರು, ಅಂದರೆ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ, ಕಾರ್ಪೊರೇಟ್ ತೆರಿಗೆ ಮತ್ತು ಆದಾಯ ತೆರಿಗೆ ಎಂದು ವಿಭಾಗಿಸಿ ನೀಡಲಾಗಿದೆ. ಕೋಷ್ಟಕ-2ನ್ನು ಆಧರಿಸಿ, ಒಟ್ಟು ತೆರಿಗೆ ಆದಾಯದಲ್ಲಿ ಈ ಮೂರು ಪ್ರಮುಖ ತೆರಿಗೆಗಳ ಪಾಲು (ಶೇರ್) ಎಷ್ಟು ಎಂಬುದನ್ನು ಲೆಕ್ಕ ಹಾಕಿ, ಕೋಷ್ಟಕ-3ರಲ್ಲಿ ನೀಡಲಾಗಿದೆ.
ಕೋಷ್ಟಕ-3 ತೋರಿಸುವಂತೆ ಎನ್‌ಡಿಎ (ಮೋದಿ) ಸರಕಾರದ ಈ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯ ಮೇಲೆ ಸರಕಾರದ ಅವಲಂಬನೆ ಗಣನೀಯವಾಗಿ ಏರುತ್ತ ಬಂದಿದೆ. 2009-10 ಮತ್ತು 2013-14ರ ಐದು ವರ್ಷಗಳ ಅವಧಿ (ಯುಪಿಎ-2 ಸರಕಾರ)ಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆಯ ಪಾಲು ಸರಾಸರಿ ಶೇ. 8.8ರಷ್ಟಿತ್ತು. 2014-18ರ ಅವಧಿಯಲ್ಲಿ (ಮೋದಿ ಸರಕಾರ) ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆಯ ಪಾಲು ಸರಾಸರಿ ಶೇ.12.5ಕ್ಕೆ ಏರಿದೆ. ಇದೇ ವೇಳೆ ಯುಪಿಎ-2 ಅವಧಿಯಲ್ಲಿ ಸರಾಸರಿ ಶೇ. 36.5ರಷ್ಟು ಇದ್ದ ಕಾರ್ಪೊರೇಟ್ ತೆರಿಗೆ ಪಾಲು ಮೋದಿ ಅವಧಿಯಲ್ಲಿ ಶೇ.30.2ಕ್ಕೆ ಇಳಿದಿದೆ. ಅಂದರೆ ಯುಪಿಎ ಅವಧಿಯಲ್ಲಿ ಸರಾಸರಿ ಶೇ.19ರಷ್ಟಿದ್ದ ಆದಾಯ ತೆರಿಗೆ ಪಾಲು ಮೋದಿ ಅವಧಿಯಲ್ಲಿ ಶೇ. 21ಕ್ಕೆ ಏರಿದೆ.


ಇದು ತೆರಿಗೆ ಸಂಗ್ರಹ ನೀತಿ, ಕಾರ್ಯತಂತ್ರಗಳಲ್ಲಿ ಮೋದಿ ಸರಕಾರ ಅನುಸರಿಸುತ್ತಿರುವ ವರ್ಗ ತಾರತಮ್ಯವನ್ನು ತೋರಿಸುತ್ತದೆ. ದೊಡ್ಡ ಕಾರ್ಪೊರೇಟ್ ಕಂಪೆನಿಗಳ ತೆರಿಗೆ ಪಾಲು ಗಣನೀಯವಾಗಿ ಇಳಿಯುತ್ತಾ ಬಂದಿದ್ದರೆ, ಪೆಟ್ರೋಲಿಯಂ ಉತ್ಪನ್ನಗಳ ಗ್ರಾಹಕರು ಮತ್ತು ತೆರಿಗೆ ಪಾವತಿದಾರರ ತೆರಿಗೆ ಪಾಲು ಏರಿದೆ. ಬಡವರು ಮತ್ತು ಮಧ್ಯಮ ವರ್ಗದವರ ವೆಚ್ಚದಲ್ಲಿ ಕಾರ್ಪೊರೇಟ್ ವಿಭಾಗವು ಲಾಭಗಳನ್ನು ಪಡೆಯುತ್ತಿದೆ. ಅಂದರೆ ಬಡವರು, ಮಧ್ಯಮ ವರ್ಗಗಳನ್ನು ಶೋಷಿಸಿ, ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡುತ್ತಿದೆ ಮೋದಿ ಸರಕಾರ. ಸಾಮಾಜಿಕವಾಗಿ ಅಕ್ರಮ ಮತ್ತು ಅನ್ಯಾಯಯುತವಾಗಿರುವ ಈ ಮಾದರಿಯ ಆದಾಯ ಕ್ರೋಡೀಕರಣದ ನೀತಿಯನ್ನು ಈಗಿನಿಂದಲೇ ತ್ಯಜಿಸುವುದು ಅತ್ಯಗತ್ಯವಾಗಿದೆ
ಸೀಮೆ ಎಣ್ಣೆ ಮತ್ತು ಅಡುಗೆ ಅನಿಲಗಳ ತರಹ ಪೆಟ್ರೋಲಿಯಂ ಮತ್ತು ಡೀಸೆಲ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕಾಗಿದೆ. ಜಿಎಸ್‌ಟಿಯ ಗರಿಷ್ಠ ಸ್ಲಾಬ್ ಶೇ.28ರಷ್ಟು ತೆರಿಗೆ ವಿಧಿಸಿದರೂ ಕೂಡ, ಪೆಟ್ರೋಲ್, ಡೀಸೆಲ್‌ಗಳು ಲೀಟರ್‌ಗೆ 55 ರೂ. ದಾಟಲಾರವು. ಇದರಿಂದಾಗುವ ಸರಕಾರದ ಆದಾಯ ನಷ್ಟವನ್ನು ಕಾರ್ಪೊರೇಟ್ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಮತ್ತು ಕಾರ್ಪೊರೇಟ್ ತೆರಿಗೆ ವಿನಾಯಿತಿಗಳನ್ನು ರದ್ದು ಮಾಡುವ ಮೂಲಕ ಸರಿದೂಗಿಸಬಹುದು. ಬಜೆಟ್‌ನ ಅಂಕಿಅಂಶದ ಪ್ರಕಾರವೇ, ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಕಾರ್ಪೊರೇಟ್ ಕಂಪೆನಿಗಳಿಗೆ ನೀಡಿದ ತೆರಿಗೆ-ಪ್ರೋತ್ಸಾಹ (ಟ್ಯಾಕ್ಸ್-ಇನ್ಸೆಂಟಿವ್ಸ್)ಗಳಿಂದ ಪ್ರತೀ ವರ್ಷ 85 ಸಾವಿರ ಕೋಟಿ ರೂ. (ಈ ಎರಡು ವರ್ಷಗಳಲ್ಲಿ ಒಟ್ಟು 1 ಲಕ್ಷ 70 ಸಾವಿರ ಕೋಟಿ ರೂ.) ಆದಾಯ ಖೋತಾ ಆಗಿದೆ. ಆದಾಯ ಸಂಗ್ರಹದಲ್ಲಿ ಕಾರ್ಪೊರೇಟ್‌ಗಳ ಪರವಾದ ನೀತಿಯನ್ನು ಮೊದಲು ಸರಿಪಡಿಸಿಕೊಳ್ಳಬೇಕಿದೆ.

(ಕೃಪೆ: thewire.in)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top