ಫೇಸ್‌ಬುಕ್ ಪ್ರಭುತ್ವ ವಿರೋಧಿ ವಿಷಯಗಳನ್ನೇ ನಿರ್ಬಂಧಿಸುತ್ತಿದೆಯೇ? | Vartha Bharati- ವಾರ್ತಾ ಭಾರತಿ

---

ಫೇಸ್‌ಬುಕ್ ಪ್ರಭುತ್ವ ವಿರೋಧಿ ವಿಷಯಗಳನ್ನೇ ನಿರ್ಬಂಧಿಸುತ್ತಿದೆಯೇ?

ಭಾಗ-2

ರಿಯಲ್ ನೇಮ್ ಪಾಲಿಸಿಯ ವಿರುದ್ಧ ಅಭಿಯಾನದ ಬಳಿಕ ಪ್ರೊಫೈಲ್‌ಗಳ ಬಗ್ಗೆ ನಿರ್ಧರಿಸಲು ಫೇಸ್‌ಬುಕ್ ನಗ್ನತೆ ಮತ್ತು ಹಿಂಸೆ ಹೀಗೆ ವಿವಿಧ ಮಾನದಂಡಗಳ ಬಳಕೆಯನ್ನು ಆರಂಭಿಸಿತ್ತು. ಆದರೆ ಪ್ರೊಫೈಲ್‌ಗಳನ್ನು ಅಮಾನತುಗೊಳಿಸಿದಾಗ ಇವ್ಯಾವುದೂ ಮಾನದಂಡಗಳು ಈ ಕ್ರಮಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ಕೃಷ್ಣನ್ ಎದುರಿಸಿದಂತಹ ಲಿಂಗಾಧಾರಿತ ಹಿಂಸೆಯನ್ನು ನಾನು ನಿರಂತರವಾಗಿ ವರದಿ ಮಾಡಿದಾಗಲೂ ಒಂದೂ ಪ್ರೊಫೈಲ್‌ಗೆ ಧಕ್ಕೆಯಾಗಿರಲಿಲ್ಲ. ಆದರೆ ಮೋದಿ ವಿರೋಧಿ ಟೀಕಾಕಾರರಿಗಾಗಿ ‘ಆರೇಂಜ್ ಮಂಕಿ‘ಯಂತಹ ಸರಳ ವಿಶೇಷಣವು ಫೇಸ್‌ಬುಕ್ ರಾಡಾರ್‌ನಡಿ ಚಾಲ್ತಿಗೆ ಬಂದಿತ್ತು. ರಾಜೀವ ತ್ಯಾಗಿಯವರ ಪ್ರಕರಣವನ್ನೇ ತೆಗೆದುಕೊಳ್ಳಿ... ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭಾವಿ ವ್ಯಕ್ತಿ, ಅಂಕಣಕಾರ ಮತ್ತು ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿ ತ್ಯಾಗಿಯವರನ್ನು 2016 ಮತ್ತು 2018ರಲ್ಲಿ ಎರಡು ಬಾರಿ ಫೇಸ್‌ಬುಕ್‌ನಿಂದ ಅಮಾನತುಗೊಳಿಸಲಾಗಿತ್ತು. ಮೋದಿ ಸರಕಾರದ ವಿರುದ್ಧ ಕಟುಟೀಕೆಗಳಿಂದಾಗಿ ಅವರ ಪೋಸ್ಟ್‌ಗಳು ಜನಪ್ರಿಯವಾಗಿದ್ದವು. ಬಲಪಂಥೀಯನಂತೆ ಕಂಡು ಬಂದಿದ್ದ ಪ್ರೊಫೈಲ್‌ವೊಂದನ್ನು ಟೀಕಿಸಿದ್ದಕ್ಕಾಗಿ 2018 ಆ.24ರಂದು ಅವರನ್ನು 30 ದಿನಗಳ ಅವಧಿಗೆ ಅಮಾನತುಗೊಳಿಸಲಾಗಿತ್ತು. ‘‘ನೀವು ಆರೇಂಜ್ ಮಂಕಿಯನ್ನು ನಿಮ್ಮ ಡಿಪಿಯನ್ನಾಗಿ ಏಕೆ ಬಳಸುತ್ತಿದ್ದೀರಿ? ಬಹಳ ಹಿಂದೆಯೇ ನಾವು ಮಂಗಗಳಿಂದ ರೂಪುಗೊಂಡಿದ್ದೇವೆ’’ ಎಂದು ತಾನು ತನ್ನ ಪುಟದ ಡಿಸ್ಕಷನ್ ಥ್ರೆಡ್‌ನಲ್ಲಿ ಬರೆದಿದ್ದೆ ಎಂದು ನನಗೆ ಮೇಲ್ ಮೂಲಕ ತಿಳಿಸಿದ್ದ ತ್ಯಾಗಿ, ಇಂತಹ ಹೇಳಿಕೆಯು ನನ್ನನ್ನು 30 ದಿನಗಳ ಅವಧಿಗೆ ಅಮಾನತುಗೊಳಿಸುವಷ್ಟು ಯಾವ ಸಮುದಾಯ ಮಾನದಂಡವನ್ನು ಉಲ್ಲಂಘಿಸಿತ್ತು ಎನ್ನುವುದನ್ನು ಊಹಿಸಲೂ ತನಗೆ ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದರು. ನಾನು ಈ ಬಗ್ಗೆ ಫೇಸ್‌ಬುಕ್‌ನ್ನು ಸಂಪರ್ಕಿಸಿದ್ದರೂ ಅದು ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ನಾನು ಹಸ್ತಕ್ಷೇಪ ಮಾಡಿದ್ದ ಪ್ರತಿಯೊಂದು ಅಮಾನತು ಸಂಬಂಧಿ ಸಂವಹನಕ್ಕೂ ಅದು ಹೀಗೆಯೇ ಮಾಡಿತ್ತು. ಆ.31ರಂದು ತ್ಯಾಗಿಯವರ ಪ್ರೊಫೈಲ್ ಮರುಸ್ಥಾಪನೆಗೊಂಡಿತ್ತು.

ಸ್ವತಂತ್ರ ಮಾಧ್ಯಮ ಸಂಸ್ಥೆಗಳು, ವಿಶೇಷವಾಗಿ ಸ್ಟಾರ್ಟ್-ಅಪ್‌ಗಳೂ ಫೇಸಬುಕ್‌ನಿಂದ ಇಂತಹುದೇ ಅನುಭವಕ್ಕೊಳಗಾಗಿರುವಂತಿದೆ. ನನ್ನ ಬಳಿಗೆ ಬಂದ ಪ್ರಕರಣಗಳಲ್ಲಿ ಫೇಸ್‌ಬುಕ್ ತನ್ನ ಜಾಹೀರಾತು ಸ್ಥಳಗಳ ಮಾರಾಟವನ್ನು ಕುದುರಿಸಿಕೊಳ್ಳಲು ಇವುಗಳೊಂದಿಗೆ ಸಂಪರ್ಕ ಹೊಂದಿತ್ತು ಮತ್ತು ವಿಶಾಲ ತಲುಪುವಿಕೆ ಹಾಗೂ ಪ್ರಚಾರದ ಭರವಸೆ ನೀಡಿ ತನ್ನ ವೇದಿಕೆಯಲ್ಲಿ ಜಾಹೀರಾತುಗಳನ್ನು ನೀಡುವಂತೆ ಅವುಗಳನ್ನು ಆಹ್ವಾನಿಸಿತ್ತು. ಆದರೆ ಈ ಮಾಧ್ಯಮಗಳು ಹಾಲಿ ಸರಕಾರದ ತಾಳಕ್ಕನುಗುಣವಾಗಿ ಕುಣಿಯದಿದ್ದಾಗ ಅವುಗಳ ಪ್ರೊಫೈಲ್‌ಗಳು ಆಗಾಗ್ಗೆ ಅಮಾನತುಗೊಳ್ಳುತ್ತಿದ್ದವು. ಇಂತಹ ಸಂದರ್ಭಗಳಲ್ಲಿ ಫೇಸ್‌ಬುಕ್ ನೀಡುವ ಕಾರಣಗಳು ಅಸ್ಪಷ್ಟವಾಗಿರುತ್ತಿದ್ದವು. ಅದರ ಈ ನಡೆ ಸ್ವತಂತ್ರ ಮಾಧ್ಯಮಗಳು ತನ್ನ ಬೇಡಿಕೆಗಳಿಗೆ ಮಣಿಯುವಂತೆ ಮಾಡುವ ಮತ್ತು ಅವುಗಳ ಮೇಲೆ ಮೇಲುಗೈ ಸಾಧಿಸುವ ಪ್ರಯತ್ನವಾಗಿತ್ತೆಂದು ಯಾರೂ ಅಂದಾಜಿಸಬಹುದು. ನನ್ನನ್ನು ಸಂಪರ್ಕಿಸಿದ್ದ ಕೆಲವು ಇಂತಹ ಮಾಧ್ಯಮಗಳಲ್ಲಿ ಕನ್ನಡ ದೈನಿಕ ‘ವಾರ್ತಾಭಾರತಿ’ ಮತ್ತು ಕೆಲವು ಪತ್ರಕರ್ತರು ಆರಂಭಿಸಿದ್ದ ಮುಕ್ತ ಸುದ್ದಿ ಜಾಲತಾಣ ‘ಬಿಫಸ್ಟ್ ಡಾಟ್ ಇನ್’ ಫೇಸ್‌ಬುಕ್‌ನಿಂದ ಅಮಾನತಿಗೊಳಗಾಗಿದ್ದವು. ತಮ್ಮ ಪ್ರೊಫೈಲ್‌ಗಳು ಅಮಾನತುಗೊಂಡಿದ್ದರಿಂದ ಮತ್ತು ಇದರಿಂದಾಗಿ ಯಾವುದೇ ಜಾಹೀರಾತು ವೀಕ್ಷಕರನ್ನು ಪಡೆಯಲಾಗದೆ ಜಾಹೀರಾತುಗಳಿಗಾಗಿ ತಾವು ವ್ಯಯಿಸಿದ್ದ ಹಣವನ್ನೂ ಅವು ಕಳೆದುಕೊಂಡಿದ್ದವು.
  ವಾರ್ತಾಭಾರತಿಯು ಮೋದಿ ಆಡಳಿತದ ಬಗ್ಗೆ ವಿಮರ್ಶಾತ್ಮಕ ವರದಿಗಳನ್ನು ಆಗಾಗ ಪ್ರಕಟಿಸುತ್ತಿತ್ತು ಮತ್ತು 2017ರಲ್ಲಿ ಅದು ಫೇಸ್‌ಬುಕ್‌ನಿಂದ ಬಹಳಷ್ಟು ತೊಂದರೆಗಳನ್ನು ಅನುಭವಿಸಿತ್ತು. 2017 ಜೂನ್ 26ರಂದು ಮೊದಲ ಬಾರಿಗೆ ವಾರ್ತಾಭಾರತಿಯ ಫೇಸ್‌ಬುಕ್ ಪೇಜ್‌ನ್ನು ಬ್ಲಾಕ್ ಮಾಡಲಾಗಿತ್ತು. ಎರಡು ದಿನಗಳ ಬಳಿಕ ನಿಷೇಧವನ್ನು ಹಿಂದೆಗೆದುಕೊಳ್ಳಲಾಗಿತ್ತು. ಈ ಹಿಂದಿನ ಎಲ್ಲ ಪ್ರಕರಣಗಳಂತೆ ಇಲ್ಲಿಯೂ ಅಮಾನತಿಗೆ ಯಾವುದೇ ವಿವರಣೆಯನ್ನು ನೀಡಲಾಗಿರಲಿಲ್ಲ. ಆದರೆ 2017 ಜುಲೈ 10ರಂದು ವಾರ್ತಾಭಾರತಿ ಪೇಜ್‌ನ್ನು ಮತ್ತೊಮ್ಮೆ ನಿಷೇಧಿಸಲಾಯಿತು. ಪತ್ರಿಕೆಯ ಸಂಪಾದಕರು ಅದೇ ದಿನ ಫೇಸ್‌ಬುಕ್ ಇಂಡಿಯಾವನ್ನು ಸಂಪರ್ಕಿಸಿದ್ದರಾದರೂ ಯಾವುದೇ ಉತ್ತರ ದೊರಕಿರಲಿಲ್ಲ. ಆಗ ನಾನು ಈ ವಿಷಯವನ್ನು ಅಮೆರಿಕದಲ್ಲಿರುವ ಫೇಸ್‌ಬುಕ್ ಕಚೇರಿಯ ಗಮನಕ್ಕೆ ತಂದೆ. ಆನಂತರ ಅಮಾನತನ್ನು ಹಿಂದೆಗೆದುಕೊಳ್ಳಲಾಯಿತು.
ಇದೇ ರೀತಿ ಬಿಜೆಪಿಯನ್ನು ಆಗಾಗ್ಗೆ ಟೀಕಿಸುವ ಬಿಫಸ್ಟ್ ಡಾಟ್ ಇನ್ ಅನ್ನೂ 2018 ಜನವರಿಯಲ್ಲಿ ಅಮಾನತುಗೊಳಿಸಲಾಗಿತ್ತು. ಬಿಫಸ್ಟ್‌ನ ಫೇಸ್‌ಬುಕ್ ಖಾತೆಯನ್ನು ಮರುಸ್ಥಾಪಿಸಲು ನೆರವಾಗಲು ನನ್ನ ಹೆಸರನ್ನು ವಾರ್ತಾಭಾರತಿಯ ಮುಹಮ್ಮದ್ ಎಂ. ಅವರು ಪ್ರಸ್ತಾಪಿಸಿದ್ದರು. ‘‘ಫೇಸ್‌ಬುಕ್ ಯಾವುದೇ ಕಾರಣವನ್ನು ನೀಡದೇ ದಿಢೀರ್ ಆಗಿ ನಮ್ಮ ಫೇಸ್‌ಬುಕ್ ಪೇಜ್‌ನ್ನು ತೆಗೆದುಹಾಕಿದೆ. ನಾವೀಗ ಅಸಹಾಯಕರಾಗಿದ್ದೇವೆ ಮತ್ತು ನಮ್ಮ ಫೇಸ್‌ಬುಕ್ ಪೇಜ್‌ನ್ನು ಮತ್ತೆ ಪಡೆಯಲು ನಮಗೆ ನಿಮ್ಮ ಮಾರ್ಗದರ್ಶನ ಬೇಕು’’ ಎಂದು ಬಿಫಸ್ಟ್‌ನ ಆಲ್ವಿನ್ ಮೆಂಡೋನ್ಸಾ ನನಗೆ ಬರೆದಿದ್ದರು. ಬಿಫಸ್ಟ್ ಡಾಟ್ ಇನ್‌ನ ಸೋದರಿ ಜಾಲತಾಣ ‘ಬಿಫಸ್ಟ್‌ಕನ್ನಡ’ ಕೂಡ ಇದೇ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅದರ ಫೇಸ್‌ಬುಕ್ ಪೇಜ್‌ನ್ನು ಸಹ ತೆಗೆದುಹಾಕಲಾಗಿತ್ತು. ಆದರೆ 2018, ಜನವರಿ 2ರಂದು ಫೇಸ್‌ಬುಕ್ ಯಾವುದೇ ವಿವರಣೆಗಳನ್ನು ನೀಡದೆ ಎರಡೂ ಪೇಜ್‌ಗಳನ್ನು ದಿಢೀರ್ ಆಗಿ ಮರುಸ್ಥಾಪಿಸಿತ್ತು.
ಎಪ್ರಿಲ್, 2018ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗಳಿಗೆ ಒಂದು ತಿಂಗಳು ಮೊದಲು ಹೆಚ್ಚಿನವರು ಕರ್ನಾಟಕದವರೇ ಆಗಿದ್ದ 5.12 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದ ‘ಫೇಕು ಎಕ್ಸ್‌ಪ್ರೆಸ್’ ಫೇಸ್‌ಬುಕ್ ಪುಟವನ್ನೂ ತೆಗೆಯಲಾಗಿತ್ತು. 2018,ಎ.21ರಂದು ಫೇಕು ಎಕ್ಸ್‌ಪ್ರೆಸ್‌ನ ಮಾಲಕರಿಂದ ಇ-ಮೇಲ್‌ನ್ನು ನಾನು ಸ್ವೀಕರಿಸಿದ್ದೆ. ಅಶ್ಲೀಲ ವಿಷಯವನ್ನು ಶೇರ್ ಮಾಡಿಕೊಂಡಿದ್ದಕ್ಕಾಗಿ ಪೇಜ್‌ನ ಪ್ರಕಟಣೆಯನ್ನು ತಡೆಹಿಡಿಯಲಾಗಿದೆ ಎಂದು 2018, ಎಪ್ರಿಲ್ 18ರಂದು ಪ್ರೊಫೈಲ್ ಅಡ್ಮಿನ್‌ಗೆ ಬಂದಿದ್ದ ಫೇಸ್‌ಬುಕ್ ನೋಟಿಫಿಕೇಷನ್‌ನಲ್ಲಿ ತಿಳಿಸಲಾಗಿತ್ತು.
(ಮುಂದುವರಿಯುವುದು)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top