ಬಿಹಾರದ ಮಹಾ ಕೊಡುಗೆ: ಕನ್ಹಯ್ಯ, ರವೀಶ್ | Vartha Bharati- ವಾರ್ತಾ ಭಾರತಿ

---

ಬಿಹಾರದ ಮಹಾ ಕೊಡುಗೆ: ಕನ್ಹಯ್ಯ, ರವೀಶ್

ಬಿಹಾರದ ಈ ಇಬ್ಬರು ವ್ಯಕ್ತಿಗಳು ಸ್ಪಷ್ಟತೆಯುಳ್ಳ ವ್ಯಕ್ತಿಗಳಾಗಿದ್ದಾರೆಯೇ ಹೊರತು ಮಿಥ್ಯಾವಾದಿಗಳಲ್ಲ, ಬದಲಿಗೆ ದಿಟ್ಟತನವುಳ್ಳವರು. ತಮ್ಮ ವೈಯಕ್ತಿಕ ಹಿನ್ನಡೆಗಳ ಹೊರತಾಗಿಯೂ, ಅವರು ಉಚ್ಚರಿಸುವ ಪ್ರತಿ ಪದದಲ್ಲೂ ಮಾನವೀಯತೆ ಹಾಗೂ ಧೈರ್ಯವು ಪ್ರಜ್ವಲಿಸುತ್ತಿದೆ. ಹೀಗಾಗಿ ಈ ಚುನಾವಣಾ ಋತುವಿನಲ್ಲಿ ನಾನು ಬಿಹಾರಕ್ಕೆ ಸೇರಿದವಳಾಗಿರುವುದು ಒಂದು ಸಣ್ಣ ಅದ್ಭುತವೆನಿಸುತ್ತದೆ.

ನಾನು ಹುಟ್ಟಿದ್ದು ಕೋಲ್ಕತಾದಲ್ಲಿ, ಆದರೆ ಈ ಚುನಾವಣಾ ಋತುವಿನಲ್ಲಿ, ನನ್ನ ಹೃದಯ ಹಾಗೂ ಬುದ್ಧಿ ಎರಡೂ ಬಿಹಾರದ ಜೊತೆ ಸೇರ್ಪಡೆಗೊಂಡಿದೆ. ಈ ರಾಜ್ಯವು ನಮಗೆ ಕನ್ಹಯ್ಯಿ ಕುಮಾರ್‌ರಂತಹವರನ್ನು ನೀಡಿದೆ ಹಾಗೂ ಬಹಳ ಸಮಯದ ಹಿಂದೆಯೇ ಅದು ನಮಗೆ ರವೀಶ್ ಕುಮಾರ್(ಟಿವಿ ಪತ್ರಕರ್ತ)ರನ್ನು ತೋರಿಸಿಕೊಟ್ಟಿದೆ. ಹಸಿಹಸಿ ಸುಳ್ಳುಗಳು ಹಾಗೂ ಅಪಪ್ರಚಾರದಿಂದ ಕೂಡಿದ ಈ ಜಗತ್ತಿನಲ್ಲಿ ಈ ಎರಡೂ ಅಸಂಭಾವ್ಯ ನಾಯಕರು ಬಿಹಾರದಲ್ಲಿ ಹೇಗೆ ಉದಯಿಸಿದರು. ಕಡುಬಡತನ, ಅನಕ್ಷರತೆ ಸೇರಿದಂತೆ ಹಲವಾರು ಪಿಡುಗುಗಳಿಂದ ಬಾಧಿತವಾಗಿರುವ ರಾಜ್ಯವಿದು. ‘ಬಿಮಾರು’ ರಾಜ್ಯಗಳ ಸಾಲಿಗೆ ಸೇರ್ಪಡೆಗೊಂಡಿದ್ದರೂ, ಕ್ರಾಂತಿಕಾರಿಗಳನ್ನು ಸೃಷ್ಟಿಸಿದ ಬಿಹಾರದ ಇತಿಹಾಸವನ್ನು ಮರೆಯಲು ಯಾರಿಗೆ ತಾನೇ ಸಾಧ್ಯ?. ಹೀಗೆ ಬಿಹಾರವು ವಿವಿಧ ವಿರೋಧಾಭಾಸಗಳಿಂದ ಕೂಡಿದ ರಾಜ್ಯವಾಗಿದೆ.
ಹೀಗಿದ್ದೂ ಬಿಹಾರದಲ್ಲಿ ಏನಾದರೂ ಬದಲಾವಣೆಯಾಗಿದೆಯೇ?. ಮಕ್ಕಳ ಆಶ್ರಮಗಳಲ್ಲಿ ನಡೆದ ಘೋರ ಘಟನೆಗಳು, ಮಧ್ಯಾಹ್ನದೂಟ ಹಾಗೂ ನಿತ್ಯದ ಆಹಾರ ಸೇವನೆ ಬಳಿಕ ಶಾಲಾ ಮಕ್ಕಳ ಮೃತ್ಯು ಹೀಗೆ ಎಲ್ಲಾ ರೀತಿಯ ಕೆಟ್ಟ ಕಾರಣಗಳಿಂದಾಗಿ ಈ ರಾಜ್ಯವು ಸದಾ ಸುದ್ದಿಯಲ್ಲಿರುತ್ತದೆ. ಆದರೆ ಈ ಚುನಾವಣಾ ಋತುವಿನಲ್ಲಿ, ಬಿಹಾರವು ಎಲ್ಲಾ ರೀತಿಯಲ್ಲೂ ಒಳ್ಳೆಯ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಆದರೆ ಅದು ಮುಖ್ಯಮಂತ್ರಿ ನಿತೀಶ್‌ರಿಂದಾಗಿ ಅಲ್ಲ.
 ಮೊದಲಿಗೆ ಕನ್ಹಯ್ಯ ಕುಮಾರ್ ವಿಷಯಕ್ಕೆ ಬರೋಣ. ವಿದ್ಯಾರ್ಥಿ ನಾಯಕನಾಗಿ ಬೆಳೆದು, ಇದೀಗ ರಾಜಕಾರಣಿಯಾಗಿ ರೂಪುಗೊಂಡಿರುವ ಈತ, ಭಾರತೀಯ ಚುನಾವಣೆಯಲ್ಲಿ ಹೊಸ ಬದಲಾವಣೆಯನ್ನು ತಂದಿದ್ದಾರೆ. ಅವರು ಎಡಪಕ್ಷದ ಟಿಕೆಟ್‌ನೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಗಮನಾರ್ಹವಾದುದೇನೆಂದರೆ, ಕನ್ಹಯ್ಯಾ ಅವರು, ಚುನಾವಣಾ ವೆಚ್ಚಕ್ಕೆ ಚುನಾವಣಾ ಆಯೋಗವು ವಿಧಿಸಿರುವ ಗರಿಷ್ಠ ಮಿತಿಯಾದ 70 ಲಕ್ಷ ರೂ.ಗಳನ್ನು ಸಾರ್ವಜನಿಕ ದೇಣಿಗೆಯ ಮೂಲಕ ಸಂಗ್ರಹಿಸಿದ್ದಾರೆ. ಭಾರತದಲ್ಲಿ ಚುನಾವಣಾ ಋತುವಿನಲ್ಲಿ ರಾಜಕಾರಣಿಗಳು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿರುವಾಗ, ಕನ್ಹಯ್ಯಿ ಅವರ ಈ ಸಾಧನೆ ಸಣ್ಣದೇನೂ ಅಲ್ಲ.
 ಈ ರೀತಿಯ ದಿಟ್ಟತನವನ್ನು ಕನ್ಹಯ್ಯ ಅವರು ಹೇಗೆ ಪಡೆದರು?. ಇದೊಂದು ವಾಕ್ಚಾತುರ್ಯದೊಂದಿಗೆ ಕೇಳುವ ಪ್ರಶ್ನೆಯಾಗಿರದೆ, ನಿಖರತೆಯಿಂದ ಕೂಡಿದುದಾಗಿದೆ. ಬೇಗುಸರಾಯ್ ಕ್ಷೇತ್ರದ ಬೀದಿ ಬದಿಗಳಲ್ಲಿ ಹಾಗೂ ಹಳ್ಳಿಯ ಸಮುದಾಯ ಭವನಗಳಲ್ಲಿ, ಕೊರಳಿನಲ್ಲಿ ಸೇವಂತಿಗೆ ಮಾಲೆ ಧರಿಸಿ, ಭಾಷಣ ಮಾಡುವ ಇವರು, ಇತ್ತೀಚಿನ ವರ್ಷಗಳಲ್ಲಿ ಇತರ ಯಾವುದೇ ಭಾರತೀಯ ರಾಜಕಾರಣಿಯು ಅಪರೂಪವಾಗಿ ಹೇಳುವಂತಹ ವಿಷಯಗಳನ್ನು ಮತದಾರರಿಗೆ ತಿಳಿಸುತ್ತಾರೆ.
  ಅಂಗನವಾಡಿ ಕಾರ್ಯಕರ್ತೆಯ ಮಗನಾದ ಕನ್ಹಯ್ಯ ಅವರ ಶಿಕ್ಷಣರಂಗದಲ್ಲಿನ ಹೋರಾಟ ಹಾಗೂ ಸಾಮಾಜಿಕ ಚಲನಶೀಲತೆಯು ಅವರನ್ನು ಜೆಎನ್‌ಯುನಿಂದ ತಿಹಾರ್‌ವರೆಗೆ ಕೊಂಡೊಯ್ಯಿತು. ತನ್ನ ಭಾಷಣಗಳಿಂದಾಗಿ ಅವರು ಸಿಸೆರೊ (ಪುರಾತನ ರೋಮ್ ಸಾಮ್ರಾಜ್ಯದ ಖ್ಯಾತ ವಿದ್ವಾಂಸ, ವಾಗ್ಮಿ ಹಾಗೂ ತತ್ವಜ್ಞಾನಿ. ಈತ ರೋಮ್ ಸಾಮ್ರಾಜ್ಯದ ಅತ್ಯಂತ ಮಹಾನ್ ಭಾಷಣಕಾರ ಹಾಗೂ ಗದ್ಯಸಾಹಿತಿಯಾಗಿ ಜನಪ್ರಿಯತೆ ಪಡೆದಿದ್ದ) ಕೂಡಾ ನಾಚುವಂತೆ ಮಾಡಬಲ್ಲರು. ಕನ್ಹಯ್ಯಿ ಅವರ ಭಾಷಣಗಳಲ್ಲಿ ಓರ್ವ ವಾಗ್ಮಿಗಿರಬೇಕಾದ ಪಾದರಸದಂತಹ ಉತ್ಸಾಹ ಹಾಗೂ ಮೇಧಾವಿತನ, ಹಾಸ್ಯಪ್ರಜ್ಞೆಗಳು ಎದ್ದುಕಾಣುತ್ತವೆ. ಆದಾಗ್ಯೂ, ಕೇವಲ ಚುನಾವಣಾ ಕಾಲಕ್ಕೆ ಬಂದುಹೋಗುವ ಇತರ ಭಾಷಣಕಾರರ ಹಾಗಲ್ಲದೆ ಕನ್ಹಯ್ಯೆ ಅವರಿಗೆ ತಾನು ಏನನ್ನು ಹೇಳುತ್ತೇನೆ ಹಾಗೂ ಯಾವುದರಲ್ಲಿ ನಂಬಿಕೆಯಿಟ್ಟಿದ್ದೇನೆಂಬುದು ಚೆನ್ನಾಗಿ ಅರಿವಿದೆ.


ತಾರತಮ್ಯ ನೀತಿ ಹಾಗೂ ಸರಕಾರದ ದಮವನ್ನು ಚೆನ್ನಾಗಿ ಬಲ್ಲ ಕನ್ಹಯ್ಯಾ ಜೈಲುವಾಸ ಅನುಭವಿಸಿದ್ದಾರೆ. ಅವರು ಅನ್ಯಾಯ ಹಾಗೂ ದಬ್ಬಾಳಿಕೆಯ ಅಗ್ನಿಜ್ವಾಲೆಯನ್ನು ಎದುರಿಸಿದ್ದಾರೆ. ಹೀಗಾಗಿ ಅವರು ನ್ಯಾಯದ ಬಗ್ಗೆ ಮಾತನಾಡುವಾಗ, ಅವರ ಸರಳ ಹಾಗೂ ಶಕ್ತಿಶಾಲಿ ಪದಗಳಲ್ಲಿ ಸತ್ಯದ ವರ್ತುಲವಿದೆ. ಹೆಚ್ಚು ಹೆಚ್ಚು ಧ್ರುವೀಕರಣಗೊಳ್ಳುತ್ತಿರುವ ರಾಜಕಾರಣದಲ್ಲಿ, ಕನ್ಹಯ್ಯಿ ಅವರು ಸಮುದಾಯಗಳು ಹಾಗೂ ಸಾಮೂಹಿಕ ಹೋರಾಟದ ಬಗ್ಗೆ ಮಾತನಾಡುತ್ತಾರೆ. ಇದರ ಜೊತೆಗೆ ತನ್ನನ್ನು ಆವರಿಸಿಕೊಂಡಿರುವ ಭಯ, ಆತಂಕಗಳ ಬಗ್ಗೆಯೂ ಅವರು ಧ್ವನಿಯೆತ್ತುತ್ತಾರೆ. ತಾನು ದೈತ್ಯ ಎದುರಾಳಿಗಳ ವಿರುದ್ಧ ಕಣಕ್ಕಿಳಿದಿರುವೆನೆಂಬ ವಾಸ್ತವಾಂಶ ಅವರಿಗೆ ಅರಿವಿದೆ.
ಆದರೆ ಕನ್ಹಯ್ಯ ಕುಮಾರ್ ಗೆಲ್ಲಲಿ ಅಥವಾ ಸೋಲಲಿ, ಅವರು ಮುನ್ನಡೆಯುತ್ತಲೇ ಇರುತ್ತಾರೆ. ನಾನು ಅವರ ಹೆಜ್ಜೆಗಳನ್ನು ಅನುಸರಿಸ ಬಯಸುತ್ತೇನೆ.

 ಇನ್ನೊಬ್ಬರು ರವೀಶ್ ಕುಮಾರ್. ಕೆಲವು ಸಮಯದಿಂದ ಅವರು ತನ್ನ ಕೆಲಸವನ್ನು ಚೆನ್ನಾಗಿಯೇ ನಿರ್ವಹಿಸುತ್ತಾ ಬಂದಿದ್ದಾರೆ. ತನ್ನ ಮಾಧ್ಯಮ ಸಹವರ್ತಿಗಳಿಗೆ ಅವರು ಕಠಿಣವಾದ ಪೈಪೋಟಿಯನ್ನು ನೀಡುತ್ತಾ ಬಂದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರಿಗೆ ಶತ್ರುಗಳು ಸೃಷ್ಟಿಯಾಗುತ್ತಿರುವುದರಿಂದ ಅವರು ಹೆದರಿದ್ದಾರೆಯೇ ಎಂದು ಪ್ರಶ್ನಿಸಲಾಗಿತ್ತು. ಆದರೆ ಅವರ ಉತ್ತರದಲ್ಲಿನ ಸರಳತೆಯು ಒಂದು ಕ್ಷಣ ನನ್ನ ಉಸಿರಾಟವನ್ನೇ ಸ್ತಬ್ಧಗೊಳಿಸಿತು. ‘‘ನಾನು ಕೂಡಾ ಮನುಷ್ಯನಾಗಿರುವುದರಿಂದ ಸಹಜವಾಗಿಯೇ ನಾನು ಭಯಪಡುತ್ತೇನೆ’’ ಎಂದವರು ಉತ್ತರಿಸಿದ್ದರು.
 ಆದರೆ ಈ ಭಯವು ಅವರನ್ನು ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಲಿಲ್ಲ. ಯಾಕೆಂದರೆೆ ಚುನಾವಣೆಯಲ್ಲಿ ಯಾರಾದರೂ ಗೆಲ್ಲಲಿ ಅಥವಾ ಸೋಲಲಿ, ಸತ್ಯವು ಎಂದಿಗೂ ಸತ್ಯವಾಗಿಯೇ ಉಳಿದುಕೊಳ್ಳುತ್ತದೆ. ಭಾರತದಲ್ಲಿ ಚುನಾವಣೆಗಳನ್ನು ಅಗೋಚರ ಮೂಲದ ಹಣದಿಂದ ಎದುರಿಸಲಾಗುತ್ತಿದೆ ಎಂಬ ಅಂಶವನ್ನು ಗಮನಿಸಿದರೆ, ಮುಲಾಜು ರಹಿತವಾದ ಹಾಗೂ ಅಹಿತಕರವಾದ ಪ್ರಶ್ನೆಗಳನ್ನು ಕೇಳುವುದು ಅವರ ಕೆಲಸದ ಭಾಗವಾಗಿ ಬಿಟ್ಟಿದೆ. ಎಲ್ಲರೂ ತಮ್ಮ ತಮ್ಮ ಕೆಲಸವನ್ನು ಚೆನ್ನಾಗಿ ಮಾಡಬೇಕೆಂದು ರವೀಶ್ ಬಯಸುತ್ತಾರೆ. ಹಾಗೆಯೇ ತನ್ನ ಕೆಲಸವನ್ನು ಕೂಡಾ ತಾನು ಅಚ್ಚುಕಟ್ಟಾಗಿಯೇ ನಿರ್ವಹಿಸಬೇಕೆಂದು ಅವರು ಇಚ್ಛಿಸುತ್ತಾರೆ.
 ತಮ್ಮ ಭೀತಿಯನ್ನು ಬದಿಗೊತ್ತಿರುವ ಈ ಇಬ್ಬರು ವ್ಯಕ್ತಿಗಳ ವಿನೀತವಾದ ಹೋರಾಟವನ್ನು ಕಂಡಾಗ, ಈ ಚುನಾವಣೆಯು ನಮಗೆ ಇಬ್ಬರು ಅದ್ಭುತವಾದ ಹಾಗೂ ಅಸಾಧಾರಣರಾದ ದಿಗ್ಗಜರನ್ನು ನೀಡಿದೆ ಎಂದು ಭಾವಿಸುತ್ತೇನೆ. ಇವರಿಬ್ಬರನ್ನೂ ನಾನು ತಮ್ಮ ಭಾಷೆ ಹಾಗೂ ನೆಲದೊಂದಿಗೆ ಅಳವಾಗಿ ಬೇರೂರಿರುವ ಹಾಗೂ ಇಂಗ್ಲಿಷ್ ಮಾತನಾಡುವ ಮೆಟ್ರೊಪಾಲಿಟನ್ ಸಂಸ್ಕೃತಿಯ ಶ್ರೇಣೀಕೃತ ವ್ಯವಸ್ಥೆಯೊಂದಿಗೆ ಕಡಿಮೆ ಮಟ್ಟದ ನಂಟನ್ನು ಹೊಂದಿರುವ ಪುರುಷರು ಹಾಗೂ ಮಹಿಳೆಯರನ್ನು ಒಳಗೊಂಡಿರುವ ಪ್ರಾದೇಶಿಕ ಕಾಸ್ಮೊಪಾಲಿಟೀಕರಣದ ಅತ್ಯುತ್ತಮ ಉತ್ಪನ್ನಗಳೆಂದು ಭಾವಿಸುತ್ತೇನೆ.
ನಮ್ಮ ಸಂವಿಧಾನದ ವೌಲ್ಯಗಳ ಮೇಲೆ ಗಾಢವಾದ ನಂಬಿಕೆ, ಲಿಂಗ ಸಮಾನತೆಯ ಬಗ್ಗೆ ಅಚಲವಾದ ವಿಶ್ವಾಸ, ಜಾತಿ ಭಾವನೆಗೆ ವಿರೋಧ ಹಾಗೂ ನಮ್ಮ ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಸೇರಿದಂತೆ ಈ ದೇಶದ ಕೆಲವು ಅತ್ಯುತ್ತಮ ಚಿಂತನೆಗಳ ಕುಲುಮೆಯಲ್ಲಿ ಈ ರೀತಿಯ ಕಾಸ್ಮೊಪಾಲಿಟೀಕರಣವು ಉತ್ಪಾದನೆಗೊಂಡಿತು ಹಾಗೂ ರೂಪುಗೊಂಡಿತೆಂದು ನಾನು ಭಾವಿಸುತ್ತೇನೆ.
ಬಿಹಾರದ ಈ ಇಬ್ಬರು ವ್ಯಕ್ತಿಗಳು ಸ್ಪಷ್ಟತೆಯುಳ್ಳ ವ್ಯಕ್ತಿಗಳಾಗಿದ್ದಾರೆಯೇ ಹೊರತು ಮಿಥ್ಯಾವಾದಿಗಳಲ್ಲ, ಬದಲಿಗೆ ದಿಟ್ಟತನವುಳ್ಳವರು. ತಮ್ಮ ವೈಯಕ್ತಿಕ ಹಿನ್ನಡೆಗಳ ಹೊರತಾಗಿಯೂ, ಅವರು ಉಚ್ಚರಿಸುವ ಪ್ರತಿ ಪದದಲ್ಲೂ ಮಾನವೀಯತೆ ಹಾಗೂ ಧೈರ್ಯವು ಪ್ರಜ್ವಲಿಸುತ್ತಿದೆ. ಹೀಗಾಗಿ ಈ ಚುನಾವಣಾ ಋತುವಿನಲ್ಲಿ ನಾನು ಬಿಹಾರಕ್ಕೆ ಸೇರಿದವಳಾಗಿರುವುದು ಒಂದು ಸಣ್ಣ ಅದ್ಭುತವೆನಿಸುತ್ತದೆ.
ಕೃಪೆ: thewire.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top