ಸೂಪರ್ ಬಗ್ ಗಳಿಗೆ ಗತಿ ಕಾಣಿಸಲೇಬೇಕು | Vartha Bharati- ವಾರ್ತಾ ಭಾರತಿ

ಸೂಪರ್ ಬಗ್ ಗಳಿಗೆ ಗತಿ ಕಾಣಿಸಲೇಬೇಕು

ಎಎಂಆರ್ ಸಮಸ್ಯೆಗಳು ಭಾರತದಂತೆ ಅಮೆರಿಕದಲ್ಲೂ ತೀವ್ರವಾಗಿಯೇ ಇದೆ. ಅಮೆರಿಕದಲ್ಲಿ ಪ್ರತಿ ವರ್ಷ ಸುಮಾರು 28 ಲಕ್ಷ ಕೇಸ್‌ಗಳು ನಮೂದಾಗುತ್ತಿದ್ದು ಆ್ಯಂಟಿ ಬಯಾಟಿಕ್‌ಗಳ ಬಳಕೆಯಲ್ಲೂ ಈ ದೇಶ ಅಗ್ರಸ್ಥಾನದಲ್ಲೇ ಇದೆ. ಭಾರತದಲ್ಲೂ ಪರಿಸ್ಥಿತಿ ಬಹುತೇಕ ಹೀಗೆ. ಇಲ್ಲಿ ಕೂಡಾ ಇತರ ದೇಶಗಳೆಲ್ಲದರ ಜೊತೆಗೆ ಹೋಲಿಸಿದರೂ ಸರಾಸರಿ ಆ್ಯಂಟಿ ಬಯಾಟಿಕ್‌ಗಳ ಬಳಕೆ ಹೆಚ್ಚೇ. ಹಾಗಾಗಿ ಎರಡು ದೇಶಗಳಿಗೂ ಈ ಪರಿಸ್ಥಿತಿ ಒಂದು ಕಠಿಣವಾದ ಸವಾಲೇ. ಎರಡು ದೇಶಗಳೂ ತಂತಮ್ಮ ಶಕ್ತಿ ಸಾಮರ್ಥ್ಯಗಳನ್ನು ಸೇರಿಸಿ ಬಳಸಿದರಷ್ಟೇ ಈ ಸಮಸ್ಯೆ ಪರಿಹಾರಕ್ಕೆ ಒಂದು ಮಾರ್ಗ ಲಭಿಸುವ ಸಾಧ್ಯತೆ ಇದೆ.

ಬೂಜು ಹಿಡಿದ ಒಂದು ಪರಂಗಿಕಾಯಿ ಲಕ್ಷಾಂತರ ಜನರ ಪ್ರಾಣ ಉಳಿಸುತ್ತದೆ ಎಂದು ಯಾರು ಭಾವಿಸಿದ್ದರು? ಆದರೆ ವಿಶ್ವದಲ್ಲೇ ಮೊದಲ ಆ್ಯಂಟಿ ಬಯಾಟಿಕ್ ಪೆನ್ಸಿಲಿನ್ ಮಾಡಿದ ಕೆಲಸ ಖಂಡಿತ ಅದೇ! ಬ್ರಿಟಿಷ್ ವಿಜ್ಞಾನಿ ಅಲೆಗ್ಸಾಂಡರ್ ಫ್ಲೆಮಿಂಗ್ ಪೆನ್ಸಿಲಿನ್ 1928ರಲ್ಲೇ ಕಂಡು ಕೊಂಡಿದ್ದಾಗ್ಯೂ... 1942ರಲ್ಲಿ ಒಂದು ಪರಂಗಿ ಕಾಯಿಗೆ ಹಿಡಿದ ಬೂಜಿನೊಳಗಿಂದ ಇದನ್ನು ಬೇರ್ಪಡಿಸಿ ಯದ್ವಾತದ್ವಾ ತಯಾರು ಮಾಡಿದುದರಿಂದ ಎರಡನೇ ವಿಶ್ವ ಸಮರದಲ್ಲಿ ಸಾವಿರಾರು ಮಂದಿ ಸೈನಿಕರ ಪ್ರಾಣಗಳು ಉಳಿದವು. ಮೊದಲ ವಿಶ್ವ ಸಮರದ ಮಾದರಿಯಲ್ಲಿ ಗಾಯಗಳಿಗಿಂತ ಸಾಂಕ್ರಾಮಿಕ ವ್ಯಾಧಿಗಳ ಕಾರಣದಿಂದ ಹೆಚ್ಚಿನ ಸಾವುಗಳು ಸಂಭವಿಸದಂತೆ ಅಡ್ಡಿಯಾಗಿ ನಿಂತಿದ್ದು ಈ ಅದ್ಭುತ ಔಷಧ. ಅಷ್ಟೇ ಅಲ್ಲ...

ನ್ಯುಮೋನಿಯಾ, ಚರ್ಮ ರೋಗಗಳ ಸಮಸ್ಯೆ ಗಣನೀಯವಾಗಿ ಕಡಿಮೆಯಾದವು. ಸಾಂಕ್ರಾಮಿಕ ರೋಗಗಳ ಮೇಲೆ ಮನುಷ್ಯ ವಿಜಯ ಸಾಧಿಸಿ ಬಿಟ್ಟನು ಎಂದೂ, ಆರೋಗ್ಯ ರಂಗದಲ್ಲಿ ಹೊಚ್ಚ ಹೊಸ ಯುಗ ಮೊದಲಾಗಿದೆ ಎಂದೂ, ಬಹಳ ಮಂದಿ ಅಂದಾಜು ಮಾಡಿದರು ಕೂಡಾ. ಪೆನ್ಸಿಲಿನ್ ಬಲ ಕಡಿಮೆಯಾಗಿ ಹೋಯಿತು ಎಂದು ಸುದ್ದಿಯಾಗುತ್ತಿರುವಾಗ ಹೊಸ ಹೊಸ ಆ್ಯಂಟಿ ಬಯಾಟಿಕ್‌ಗಳ ಸಂಶೋಧನೆಯೊಂದಿಗೆ ಆ ಸಮಸ್ಯೆಯನ್ನು ಎದುರಿಸಬಲ್ಲವರಾದೆವು. ಆ ಧೈರ್ಯದಿಂದಲೇ ಇರಬೇಕು 1985ರಲ್ಲಿ ಅಮೆರಿಕ ಸಾಂಕ್ರಾಮಿಕ ರೋಗಗಳ ಸೊಸೈಟಿ ವಾರ್ಷಿಕ ಸಮಾವೇಶದಲ್ಲೂ ಈ ಅಂಟು ವ್ಯಾಧಿಗಳಿಗೆ ಸಂಬಂಧಿಸಿದ ತಜ್ಞರ ಅಗತ್ಯ ಏನೆಂಬ ಪ್ರಶ್ನೆ ಸಹ ಚರ್ಚೆಗೆ ಬಂದಿತು.

ಪ್ರಾಣ ಉಳಿಸಿದ ಔಷಧಗಳು ಕೆಲಸ ಮಾಡವು

ಆದರೆ... 35 ವರ್ಷಗಳಲ್ಲೇ ಪರಿಸ್ಥಿತಿಗಳು ಬದಲಾಗಿ ಹೋಗಿದೆ. ಒಂದೊಮ್ಮೆ ಪ್ರಾಣ ಉಳಿಸಿದ ಔಷಧಗಳು ಸ್ವಲ್ಪವೂ ಕೆಲಸ ಮಾಡುವುದಿಲ್ಲ ಎಂಬ ಹೊಸ ವಾಸ್ತವ ಕಣ್ಣು ಮುಂದೆ ನಿಂತಿತು. ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟನ್ಸ್... ಚುಟುಕಾಗಿ ಎಎಂಆರ್ (ಸೂಕ್ಷ್ಮ ಜೀವಿಗಳು ಪೆನ್ಸಿಲಿನ್‌ನಂತಹ ಔಷಧಗಳನ್ನು ತಡೆದುಕೊಳ್ಳಬಲ್ಲವಾಗುವುದು) ಎನ್ನುವುದು ಆರೋಗ್ಯ ರೀತ್ಯಾ ವಿಶ್ವ ಎದುರಿಸುತ್ತಿರುವ ಹತ್ತು ಅತಿ ದೊಡ್ಡ ಅಪಾಯಗಳಲ್ಲಿ ಒಂದೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದು ಪರಿಸ್ಥಿತಿಯ ತೀವ್ರತೆಗೆ ಕನ್ನಡಿ ಹಿಡಿಯುತ್ತದೆ. ಈ ಸೂಪರ್ ಬಗ್‌ಗಳು (ಎಎಂಆರ್) ಈಗಾಗಲೇ ಪ್ರತಿ ವರ್ಷ 2,14,000 ಮಂದಿ ಶಿಶುಗಳನ್ನು ಬಲಿಪಡೆಯುತ್ತಿದ್ದು ದೊಡ್ಡವರನ್ನೂ ಕಬಳಿಸಲಾರವು ಎಂಬ ಗ್ಯಾರಂಟಿ ಏನೂ ಇಲ್ಲ. ಕಿರಿಯರು, ಹಿರಿಯರು, ಸ್ತ್ರೀ, ಪುರುಷ ವ್ಯತ್ಯಾಸ ಇಲ್ಲದೇ ಎಲ್ಲರೂ ಈ ಸೂಪರ್‌ಬಗ್ ಮಹಾಮಾರಿಯ ಬಾಯಿಗೆ ಬೀಳುವ ಸಾಧ್ಯತೆ ಇದೆ. ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೆ ಹೋದರೆ ಸಣ್ಣಪುಟ್ಟ ಇನ್‌ಫೆಕ್ಷನ್‌ಗಳಿಗೇ ಪ್ರಾಣ ಕಳೆದುಕೊಂಡ ಪ್ರಾಚೀನ ಕಾಲಕ್ಕೆ ಹಿಂದಿರುಗುವ ಅಪಾಯ ಹೊಂಚು ಹಾಕುತ್ತಿದೆ.

ಸರಳವಾಗಿ ಹೇಳಬೇಕೆಂದರೆ... ನಮ್ಮ ಆ್ಯಂಟಿ ಬಯಾಟಿಕ್‌ಗಳು ಎಂದೇ ಅತ್ಯಮೂಲ್ಯವಾದ ಸಂಪನ್ಮೂಲಗಳನ್ನು ತುಂಬಾ ಅಜಾಗ್ರತೆಯಿಂದ ಬಳಸುತ್ತಿದ್ದೇವೆ ಎಂದೇ ಹೇಳಬೇಕು. ಅಗತ್ಯ ಇದ್ದರೂ ಇಲ್ಲದೇ ಹೋದರೂ ಯದ್ವಾತದ್ವಾ ಬಳಸುವುದನ್ನು ನಾವು ನೋಡುತ್ತಲೇ ಇದ್ದೇವೆ. ಅಗತ್ಯ ಇದ್ದರೂ ಇಲ್ಲದೇ ಹೋದರೂ ಹೀಗೆ ಬಳಸುವುದಕ್ಕೂ ಕೆಲವು ಊಹಾಪೋಹಾಗಳೇ ಕಾರಣ. ವೈರಸ್‌ಗಳ ಮೇಲೆ ಆ್ಯಂಟಿ ಬಯಾಟಿಕ್‌ಗಳ ಪ್ರಭಾವ ಇರದು ಎಂಬುದು ವಾಸ್ತವ ಆಗಿರುವಾಗ, ಅವುಗಳಿಂದ ಬರುವ ಕಾಯಿಲೆಗಳಿಗೆ ಔಷಧ ಬಳಸುವುದು ಇಂತಹದ್ದೇ ಅವಿವೇಕ. ಇಂತಹ ಊಹಾಪೋಹಾಗಳ ಕಾರಣದಿಂದಲೇ ಆ್ಯಂಟಿ ಬಯಾಟಿಕ್‌ಗಳನ್ನು ಅನುಚಿತವಾಗಿ ಬಳಸುವುದು, ಹೆಚ್ಚಾಗಿ ಬಳಸುವುದು ನಡೆಯುತ್ತಿದೆ. ಪ್ರಸ್ತುತ ನಾವು ಬಳಸುತ್ತಿರುವ ಆ್ಯಂಟಿ ಬಯಾಟಿಕ್‌ಗಳಲ್ಲಿ ಅರ್ಧವಷ್ಟೇ ಅಗತ್ಯ ಎಂದು ಅಂತರ್‌ರಾಷ್ಟ್ರೀಯ ಮಟ್ಟದ ಅಧ್ಯಯನಗಳು ಹೇಳುತ್ತಿವೆ. ಪ್ರಾಣಿಗಳಿಗೂ ಈ ಔಷಧಗಳನ್ನು ನೀಡುವುದರ ಮೂಲಕ ತುಂಬಾ ನಷ್ಟವಾಗುತ್ತಿದೆ. ಆ್ಯಂಟಿ ಬಯಾಟಿಕ್ ಔಷಧಗಳ ಪ್ರಭಾವವನ್ನು ಕಾಪಾಡಿಕೊಂಡರೆ ಲಕ್ಷಾಂತರ ಮಂದಿಯ ಪ್ರಾಣಿ ರಕ್ಷಿಸಿಕೊಳ್ಳಬಹುದೆಂದು, ಬಹುಮಟ್ಟಿಗೆ ಮಾನವನ ಆಹಾರವಾಗಿ ಬಳಸಲ್ಪಡುವ ಜೀವಿಗಳಿಗೆ ಬಳಸುವುದು ಆತಂಕಕಾರಿ ಅಂಶ. ಅಲ್ಲದೆ ಇನ್‌ಫೆಕ್ಷನ್‌ಗಳಿಗೆ ಚಿಕಿತ್ಸೆಯಾಗಿ ಬಳಸಿಕೊಳ್ಳುವುದಲ್ಲದೆ, ಈ ಜೀವಿಗಳು ವೇಗವಾಗಿ ಬೆಳೆಯಬೇಕೆಂಬ ದುರಾಲೋಚನೆಯಿಂದ ಈ ಔಷಧಗಳ ಬಳಸುವುದು ಕೂಡಾ ಅಪಾಯಕಾರಿ. ನಲವತ್ತು ವರ್ಷಗಳಿಂದ ಹೊಸ ಆ್ಯಂಟಿ ಬಯಾಟಿಕ್ ಔಷಧಗಳೇನೂ ಬಾರದಿರುವ ಹಿನ್ನೆಲೆಯಲ್ಲಿ ಈ ಅಂಶಕ್ಕೆ ಪ್ರಾಧಾನ್ಯ ಹೆಚ್ಚುತ್ತದೆ.

ಕೈ ಸೇರಿಸಬೇಕಾದ ಸಮಯವಿದು

ಎಎಂಆರ್ ಸಮಸ್ಯೆಗಳು ಭಾರತದಂತೆ ಅಮೆರಿಕದಲ್ಲೂ ತೀವ್ರವಾಗಿಯೇ ಇದೆ. ಅಮೆರಿಕದಲ್ಲಿ ಪ್ರತಿ ವರ್ಷ ಸುಮಾರು 28 ಲಕ್ಷ ಕೇಸ್‌ಗಳು ನಮೂದಾಗುತ್ತಿದ್ದು ಆ್ಯಂಟಿ ಬಯಾಟಿಕ್‌ಗಳ ಬಳಕೆಯಲ್ಲೂ ಈ ದೇಶ ಅಗ್ರಸ್ಥಾನದಲ್ಲೇ ಇದೆ. ಭಾರತದಲ್ಲೂ ಪರಿಸ್ಥಿತಿ ಬಹುತೇಕ ಹೀಗೆ. ಇಲ್ಲಿ ಕೂಡಾ ಇತರ ದೇಶಗಳೆಲ್ಲದರ ಜೊತೆಗೆ ಹೋಲಿಸಿದರೂ ಸರಾಸರಿ ಆ್ಯಂಟಿ ಬಯಾಟಿಕ್‌ಗಳ ಬಳಕೆ ಹೆಚ್ಚೇ. ಹಾಗಾಗಿ ಎರಡು ದೇಶಗಳಿಗೂ ಈ ಪರಿಸ್ಥಿತಿ ಒಂದು ಕಠಿಣವಾದ ಸವಾಲೇ. ಎರಡು ದೇಶಗಳೂ ತಂತಮ್ಮ ಶಕ್ತಿ ಸಾಮರ್ಥ್ಯಗಳನ್ನು ಸೇರಿಸಿ ಬಳಸಿದರಷ್ಟೇ ಈ ಸಮಸ್ಯೆ ಪರಿಹಾರಕ್ಕೆ ಒಂದು ಮಾರ್ಗ ಲಭಿಸುವ ಸಾಧ್ಯತೆ ಇದೆ. ಸಾಂಕ್ರಾಮಿಕ ರೋಗಗಳ ಪರ್ಯವೇಕ್ಷಣ, ಹೊಸ ಹೊಸ ಔಷಧಗಳನ್ನು ಸಂಶೋಧಿಸುವುದರಲ್ಲಿ ಅಮೆರಿಕ ಮುಂಚೂಣಿಯಲ್ಲಿದ್ದರೆ ಭಾರತಕ್ಕೆ ಅದರ ಫಾರ್ಮಾ ರಂಗ, ಬಲಿಷ್ಠವಾದ ಪ್ರಜಾರೋಗ್ಯ ವ್ಯವಸ್ಥೆಯೇ ಬಲಗಳು. ಇವುಗಳ ನೆರವಿನಿಂದ ಎಎಂಆರ್ ಸಮಸ್ಯೆಯನ್ನು ಎದುರಿಸುವುದಕ್ಕೆ ಭಾರತ, ಅಮೆರಿಕಗಳು ಈಗಾಗಲೇ ಬೇರೆ ಬೇರೆ ದಾರಿಗಳಲ್ಲಿ ಕೆಲಸ ಮಾಡುತ್ತಿವೆ.

ಆಸ್ಪತ್ರೆಗಳಲ್ಲಿ ಇನ್‌ಫೆಕ್ಷನ್‌ಗಳನ್ನು ನಿಯಂತ್ರಿಸುವುದು, ಎಎಂಆರ್ ಇನ್‌ಫೆಕ್ಷನ್‌ಗಳಿಗೋಸ್ಕರ ನಿತ್ಯವೂ ಪರಿಶೀಲಿಸುತ್ತಿರುವ ವ್ಯವಸ್ಥೆಗಳ ಏರ್ಪಾಟು, ಈ ರಂಗದಲ್ಲಿ ಹೊಸ ಹೊಸ ಸಂಶೋಧನೆಗಳ ಮಾಡುವ ವಿಜ್ಞಾನಿಗಳಿಗೆ ಉತ್ತೇಜನ, ಹೊಸ ಆ್ಯಂಟಿ ಮೈಕ್ರೋ ಬಿಯಲ್ಸ್ ಅಭಿವೃದ್ಧಿಗೆ ಆರ್ಥಿಕ ನೆರವು ಇವುಗಳಲ್ಲಿ ಉದಾಹರಣೆಗೆ ಕೆಲವು. ಎಎಂಆರ್ ಸಮಸ್ಯೆ ಮೇಲೆ ಸಂಶೋಧನೆ ಮಾಡುವುದಕ್ಕೆ ವಿಧಾನ ರೂಪ ಕಲ್ಪನೆಗೆ ಇತ್ತೀಚೆಗೆ ಕೋಲ್ಕತಾದಲ್ಲಿ ಒಂದು ಹೊಸ ಕೇಂದ್ರ ಸ್ಥಾಪಿತವಾಗಿದೆ. ಈ ಕೇಂದ್ರದ ಉದ್ಘಾಟನಾ ಸಂದರ್ಭದಲ್ಲಿ ಎಎಂಆರ್ ವಿರುದ್ಧದ ಹೋರಾಟದಲ್ಲಿ ಅಮೆರಿಕ ಸದಾ ಭಾರತಕ್ಕೆ ಸಹಕರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದೆ. ಆರೋಗ್ಯ, ಕುಟುಂಬ ಕಲ್ಯಾಣ ಸಚಿವಾಲಯಗಳೊಂದಿಗೆ, ಭಾರತೀಯ ವೈದ್ಯ ಸಂಶೋಧನಾ ಸಮಾಖ್ಯ, ಬಯೋ ಟೆಕ್ನಾಲಜಿ ಡಿಪಾರ್ಟ್‌ಮೆಂಟ್‌ನೊಂದಿಗೆ ಸೇರಿ ಕೆಲಸ ಮಾಡುವುದು ಮುಂದುವರಿಸುತ್ತೇವೆಂದು ಸಹಾ ಹೇಳಿದ್ದೆ.

ನೀವು ಮಾಡಬೇಕಾದದ್ದು ಇದು...

ಆ್ಯಂಟಿ ಬಯಾಟಿಕ್ ಔಷಧಗಳನ್ನು ತಡೆದುಕೊಳ್ಳಬಲ್ಲ ಸೂಕ್ಷ್ಮಜೀವಿಗಳನ್ನು ಎದುರಿಸುವುದಕ್ಕೆ ಸರಕಾರಗಳು ಮಾತ್ರವೇ ಕೆಲಸ ಮಾಡಿದರೆ ಸಾಕಾಗದು. ಸರಕಾರಗಳು ವ್ಯವಸ್ಥೆಯ ಮಟ್ಟದಲ್ಲಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಲೇ ಇರುತ್ತವೆ. ಪ್ರಜೆಗಳೆಲ್ಲರೂ ವೈಯಕ್ತಿಕ ಮಟ್ಟದಲ್ಲೂ ತಮ್ಮದೇ ರೀತಿಯಲ್ಲಿ ಸಹಕರಿಸಿದರಷ್ಟೇ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಇರುತ್ತದೆ. ಆ್ಯಂಟಿ ಬಯಾಟಿಕ್‌ಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ವ್ಯಕ್ತಿಗತವಾಗಿ ನಾವು ಮಾಡಬಲ್ಲ ಅತಿ ಚಿಕ್ಕ ಕೆಲಸ. ಅಷ್ಟೇ ಅಲ್ಲ ಇನ್‌ಫೆಕ್ಷನ್ ಹರಡದ ಹಾಗೆ ವ್ಯಕ್ತಿಗತ ಸ್ವಚ್ಛತೆಗೆ ಆದ್ಯತೆ ನೀಡುವುದೂ ಮುಖ್ಯವೇ. ಅಗತ್ಯ ಆದಾಗಲೆಲ್ಲಾ ಕೈಗಳ ಶುಭ್ರಗೊಳಿಸಿಕೊಳ್ಳುವುದು ಕೆಮ್ಮು ಬಂದರೆ ಕೈ ಅಡ್ಡ ಇಟ್ಟುಕೊಳ್ಳುವುದು, ಅನಾರೋಗ್ಯದಿಂದ ಇದ್ದಾಗ ಮನೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳುವುದರಂಥಹವು ಮಾಡಿದರೆ ಸಾಕು ಸಮಸ್ಯೆ ಮತ್ತಷ್ಟು ಬಲಿಯದಂತೆ ನೋಡಿಕೊಳ್ಳಬಹುದು.

ಮತ್ತೊಂದು ಕಡೆ ವೈದ್ಯರು, ಇತರ ಆರೋಗ್ಯ ಕಾರ್ಯಕರ್ತರು ಸಹ ತಮ್ಮದೇ ಆದ ರೀತಿಯಲ್ಲಿ ಎಎಂಆರ್ ನಿರೋಧಕ್ಕೆ ನೆರವಾಗಬಹುದು. ಇನ್‌ಫೆಕ್ಷನ್‌ಗಳನ್ನು ನಿಯಂತ್ರಿಸುವ ವಿಷಯದಲ್ಲಿ ಎಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಇವುಗಳಲ್ಲಿ ಒಂದಾದರೆ... ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿ ಅಧಿಕೃತತೆ ಹೊಂದಿದ ಚಿಕಿತ್ಸೆಯ ಮಾರ್ಗದರ್ಶಕಗಳನ್ನು ಮಾತ್ರವೇ ಅನುಸರಿಸುವುದು ಮತ್ತೊಂದು. ಅಗತ್ಯ ಇಲ್ಲದೇ ಹೋದರೂ ಆ್ಯಂಟಿ ಬಯಾಟಿಕ್‌ಗಳನ್ನು ತೆಗೆದುಕೊಳ್ಳಬೇಕೆಂದು ಬರೆದು ಕೊಡುವುದನ್ನು ಸಾಧ್ಯವಾಗುವ ಮಟ್ಟಿಗೆ ಕಡಿಮೆ ಮಾಡಬೇಕಾಗಿದೆ.

ಕೆಲವು ರೀತಿಯ ಸಾಂಕ್ರಾಮಿಕ ರೋಗಗಳನ್ನು ಎದುರಿಸುವುದಕ್ಕೆ ಈಗಾಗಲೇ ಕೆಲವು ವ್ಯಾಕ್ಸಿನೇಶನ್‌ಗಳು ಲಭ್ಯ ಇವೆ. ಇವನ್ನು ಎಲ್ಲರೂ ಬಳಸುವಂತೆ ಮಾಡುವುದರ ಮೂಲಕ ಆ್ಯಂಟಿ ಬಯಾಟಿಕ್‌ಗಳ ಬಳಕೆಯನ್ನು ಗಣನೀಯ ಮಟ್ಟದಲ್ಲಿ ತಗ್ಗಿಸಬಹುದು. ಪಶುಗಳ ವಿಷಯದಲ್ಲೂ ಇದೇ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗಿರುತ್ತದೆ. ಮುಂದಾಗಿಯೇ ಹೇಳಿದಂತೆ ಪಶುಗಳಲ್ಲಿ ಸೋಂಕುಗಳನ್ನು ತಗ್ಗಿಸುವುದಕ್ಕೆ ಮಾತ್ರವೇ ಆ್ಯಂಟಿ ಬಯಾಟಿಕ್‌ಗಳ ಬಳಸಬೇಕು. ಇದು ಸಹ ಪಶುವೈದ್ಯರ ಮೇಲ್ವಿಚಾರಣೆಯಲ್ಲೇ ನಡೆಯಬೇಕು. ಯಾವುದೇ ಸಂದರ್ಭದಲ್ಲಿ ಅವು ವೇಗವಾಗಿ ಪುಷ್ಟಗೊಳ್ಳುತ್ತವೆ ಎಂದೋ, ಇಳುವರಿ ಹೆಚ್ಚಾಗುತ್ತದೆ ಎಂದೋ ಬಳಸಲೇಬಾರದು. ಇಂತಹ ಕ್ರಮಗಳಿಂದ ಪ್ರತಿಕೂಲ ಫಲಿತಾಂಶಗಳೇ ಹೆಚ್ಚು ಎಂಬುದನ್ನು ಗುರುತಿಸಬೇಕು. ಫಾರ್ಮಾ ರಂಗ ಸಂಶೋಧನೆಗಳನ್ನು ತೀವ್ರಗೊಳಿಸಿ ಹೊಸ ಆ್ಯಂಟಿ ಬಯಾಟಿಕ್‌ಗಳನ್ನು ಸಂಶೋಧಿಸಬಲ್ಲವಾದರೆ ಸಮಸ್ಯೆಯನ್ನು ಮತ್ತಷ್ಟು ವೇಗವಾಗಿ ಪರಿಹರಿಸಬಲ್ಲ ಸಾಧ್ಯತೆ ಇರುತ್ತದೆ. ಸಮಯ ಮೀರಿ ಹೋದ ಆ್ಯಂಟಿ ಬಯಾಟಿಕ್‌ಗಳನ್ನು ಸೂಕ್ತ ರೀತಿಯಲ್ಲಿ ನಾಶಪಡಿಸುವುದು ಸಹ ಮುಖ್ಯ.

ಎಎಂಆರ್ ಸಮಸ್ಯೆಯನ್ನು ವ್ಯಕ್ತಿಗತವಾಗಿಯಷ್ಟೇ ಅಲ್ಲ... ಎಲ್ಲರೂ ಸಾಮೂಹಿಕವಾಗಿ ಎದುರಿಸಬೇಕಾಗಿರುತ್ತದೆ. ಈ ಅಂಶದಲ್ಲಿ ಭಾರತ-ಅಮೆರಿಕಗಳ ಮಧ್ಯೆ ಸಹಕಾರ ಎರಡು ದೇಶಗಳ ಸಂಬಂಧಕ್ಕೆ ಸಂಕೇತವಾಗಿರಬೇಕು. ಕೈ ಕೈ ಸೇರಿಸಿದರೆ ಏನು ಮಾಡಬಲ್ಲೆವೆಂದು ನಿರೂಪಿಸುವ ಸಮಯ ಇದು. ಇದು ನಮ್ಮ ಎರಡು ದೇಶಗಳಿಗೋಸ್ಕರವಷ್ಟೇ ಅಲ್ಲ... ಇಡೀ ಜಗತ್ತಿಗಾಗಿ ಕೂಡಾ!

ಕೃಪೆ: ಸಾಕ್ಷಿ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top