ಎಸೆಸೆಲ್ಸಿ ಪರೀಕ್ಷೆ ಬರೆಯುವ ಮುನ್ನ... | Vartha Bharati- ವಾರ್ತಾ ಭಾರತಿ

ಎಸೆಸೆಲ್ಸಿ ಪರೀಕ್ಷೆ ಬರೆಯುವ ಮುನ್ನ...

ಭಾಗ-2

2020ನೇ ಸಾಲಿನ ಎಸೆಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಈ ನಿಟ್ಟಿನಲ್ಲಿ ಪರೀಕ್ಷೆಯನ್ನೆದುರಿಸುವ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗಾಗಿ ಕೆಲವೊಂದು ಮಾಹಿತಿಗಳು ಇಲ್ಲಿವೆ.

ವಿದ್ಯಾರ್ಥಿಗಳಿಗೆ ಸಲಹೆ:

1. ಪರೀಕ್ಷಾ ಸಮಯದಲ್ಲಿ ಇತರ ಯಾವುದೇ ಕೌಟುಂಬಿಕ ಸಮಸ್ಯೆಗಳಿಗೆ ಗಮನ ಕೊಡಬಾರದು.

2. ಶಿಕ್ಷಕರು ನೀಡಿದ ಅಥವಾ ತಾವೇ ಸಿದ್ಧಪಡಿಸಿದ ನೋಟ್ಸ್ ಅನ್ನು ಪ್ರತಿದಿನ ಅವಲೋಕಿಸಿ ಮನನ ಮಾಡಿಕೊಳ್ಳಬೇಕು.

3. ಕಾಲದ ಮಿತಿಯೊಳಗೆ ಉತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಹಾಗೂ ಮನಸ್ಸಿಗೆ ಬಂದ ಅನುಮಾನಗಳನ್ನು ಸಕಾಲದಲ್ಲಿ ಪರಿಹರಿಸಿಕೊಳ್ಳಬೇಕು.

4. ಸಂಭವನೀಯ ಪ್ರಶ್ನೆಗಳನ್ನು ಸ್ವತಃ ತಯಾರು ಮಾಡಿ ಅಥವಾ ಶಿಕ್ಷಕರ ನೆರವಿನಿಂದ ಬರೆದು ಉತ್ತರಗಳನ್ನು ಅಭ್ಯಸಿಸಬೇಕು ಹಾಗೂ ಪ್ರತಿ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ನಿಖರವಾದ ಉತ್ತರವನ್ನೇ ಬರೆಯಬೇಕು.

5. ಪ್ರಶ್ನೆಗಳ ಅಂಕಕ್ಕೆ ತಕ್ಕ ಉತ್ತರ ಬರೆಯಬೇಕು. ಕೈ ಬರಹ ಸ್ಪಷ್ಟವಾಗಿರಬೇಕು. ಚಿತ್ರಗಳನ್ನು ಅಂದವಾಗಿ ಬರೆದು ಭಾಗಗಳನ್ನು ಗುರುತಿಸಬೇಕು. ಉತ್ತರ ಪತ್ರಿಕೆಗಳಲ್ಲಿ ಚಿತ್ತು ಮಾಡುವುದು, ಬಣ್ಣ ಬಣ್ಣದ ಶಾಯಿ ಬಳಸುವುದು ಸರಿಯಲ್ಲ.

ವಿದ್ಯಾರ್ಥಿಗಳಿಗೆ ನೆನಪಿರಬೇಕಾದ ಅಂಶಗಳು

1. ಪರೀಕ್ಷಾ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಬಯಲು ವದಂತಿಗೆ ಗಮನ ನೀಡಬೇಡಿ.

2. ಪರೀಕ್ಷೆಗಳಲ್ಲಿ ನಕಲು ಮಾಡಿದ್ದಕ್ಕೆ 3 ತಿಂಗಳ ಕಾರಾಗೃಹ ವಾಸ ಹಾಗೂ ಒಂದು ಸಾವಿರ ರೂಪಾಯಿಗಳ ಜುಲ್ಮಾನೆಗೆ ಕಾನೂನಿನಲ್ಲಿ ಅವಕಾಶವಿದೆ.

3. ಪರೀಕ್ಷೆಗಳಲ್ಲಿ ಇತರರಂತೆ ನಟಿಸಿ ಹಾಜರಾಗಿದ್ದರೆ 1 ವರ್ಷದ ಕಾರಾಗೃಹ ವಾಸ ಹಾಗೂ 5 ಸಾವಿರ ರೂ.ಗಳ ಜುಲ್ಮಾನೆ ವಿಧಿಸಬಹುದು.

4. ಪರೀಕ್ಷೆಗೆ ಸಂಬಂಧಿಸಿದ ಅಂಕಗಳನ್ನು ವಿದ್ಯಾರ್ಥಿಗಳು ಮಾಹಿತಿ ಹಕ್ಕು ಪಡೆದುಕೊಳ್ಳಲು ನ್ಯಾಯಾಲಯದ ಆದೇಶವಿದೆ.

5. ಪರೀಕ್ಷೆಯಲ್ಲಿ ಬರೆದ ಉತ್ತರ ವ್ಯತ್ಯಾಸಗೊಳಿಸಿದರೆ ಯಾವುದೇ ವ್ಯಕ್ತಿಗೂ ಸಹ ಒಂದು ವರ್ಷ ಕಾರಾಗೃಹ ವಾಸ, 5 ಸಾವಿರ ರೂ. ಜುಲ್ಮಾನೆ ವಿಧಿಸಬಹುದು.

6. ಪ್ರವೇಶ ಪತ್ರದ ಜೆರಾಕ್ಸ್‌ನ್ನು ವಿದ್ಯಾರ್ಥಿಗಳು ಇಟ್ಟುಕೊಂಡಿರಬೇಕು. ಪ್ರವೇಶಪತ್ರ ಕಳೆದು ಹೋದರೆ ಪರೀಕ್ಷಾ ಕೇಂದ್ರದಲ್ಲಿ ಡೂಪ್ಲಿಕೇಟ್ ಹಾಲ್ಟಿಕೇಟ್ ಪಡೆಯಲು ಅವಕಾಶವಿದೆ.

8. ಶಾಲೆಯಲ್ಲಿ ವಿದ್ಯಾರ್ಥಿಗಳು ಅವ್ಯವಹಾರ ಮಾಡಿ ಸಿಕ್ಕರೆ ಆ ವಿದ್ಯಾರ್ಥಿ ಹೆಸರನ್ನು, ಆ ಶಾಲೆಯ ಹೆಸರನ್ನು ಅದೇ ದಿನ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಪ್ರಕಟವಾಗುತ್ತದೆ. ಆದ್ದರಿಂದ ಶಾಲೆಯ ಕೀರ್ತಿ, ಅಪಕೀರ್ತಿ, ಗೌರವಕ್ಕೆ ಮೂಲ ಕಾರಣ ಶಾಲಾ ವ್ಯವಸ್ಥೆ, ವಿದ್ಯಾರ್ಥಿಯ ನೈತಿಕ, ಪ್ರಾಮಾಣಿಕ ಹೊಣೆಗಾರಿಕೆಯಾಗಿದೆ.

ನಿಮಗೆ ತಿಳಿದಿರಲಿ

♦ ನಿಮ್ಮ ಒತ್ತಡಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಿ.

♦ ಯಾವ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಇದೆ.

♦ ಒಮ್ಮೆ ನಿಮ್ಮ ನಿರೀಕ್ಷೆಯಲ್ಲಿ ವಿಫಲರಾದರೆ ಅದೇ ಕೊನೆ ಎಂದು ಎಂದೂ ಭಾವಿಸಬೇಡಿ.

♦ ಸೋಲೇ ಗೆಲುವಿಗೆ ಸೋಪಾನ ಎಂಬುದನ್ನು ನೆನಪಿಡಿ.

♦ ಸೋತಾಗ ನಕಾರಾತ್ಮಕ ಭಾವನೆಗೊಳಗಾಗಬೇಡಿ.

♦ ಸಕಾರಾತ್ಮಕವಾಗಿ ಸವಾಲನ್ನು ಎದುರಿಸಲು ಧೈರ್ಯ ತಂದುಕೊಳ್ಳಿ.

♦ ಪೋಷಕರ ನಿರೀಕ್ಷೆಗಳು ಹೆಚ್ಚೆಂದು ಎನಿಸಿದರೆ ಅವರಿಗೆ ತಿಳಿಸಿ.

♦ ಒಮ್ಮೆ ಪೋಷಕರು ಬೈದರೆ ಅದು ಅವಮಾನವೆಂದಣಿಸದೆ ಅದರ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಿ.

♦ ಜೀವನದಲ್ಲಿ ಕೌಶಲಗಳು, ಹವ್ಯಾಸಗಳು ಅವಶ್ಯ. ಅವಕ್ಕೆ ವೇಳೆ ಕೊಡಿ.

♦ ಆತ್ಮೀಯ ಸ್ನೇಹಿತರೊಂದಿಗೆ ಚರ್ಚಿಸಿ, ಚಟಗಳಿಗೆ ಬಲಿಯಾಗಬೇಡಿ.

ಪೋಷಕರೇ ಗಮನಿಸಿ

► ನಿಮ್ಮ ಮಗು ನಿಮ್ಮ ಸ್ನೇಹಿತ.

► ಮಗುವಿನ ಸಾಮರ್ಥ್ಯ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

► ಮಕ್ಕಳೊಂದಿಗೆ ವ್ಯವಹಾರಿತನ ಬೇಡ.

► ನಿಮ್ಮ ನಿರೀಕ್ಷೆ ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿರಲಿ.

► ಬೇರೆ ಮಕ್ಕಳೊಂದಿಗೆ, ಸಹೋದರ, ಸಹೋದರಿಯರೊಂದಿಗೆ ಹೋಲಿಕೆ ಮಾಡುವುದು ಉಚಿತವಲ್ಲ.

► ಮಕ್ಕಳಲ್ಲಿ ಕೆಲವಾದರೂ ಹವ್ಯಾಸಗಳನ್ನು ಕಲಿಯಲು ಅನುವು ಮಾಡಿಕೊಡಿ

► ಮಕ್ಕಳ ಅನಿಸಿಕೆಗಳನ್ನು ಆಲಿಸಿ, ಸ್ಪಂದಿಸಿ.

► ಮಕ್ಕಳು ವಿಫಲರಾದಾಗ ಟೀಕಿಸದೇ ಅವರಿಗೆ ಧೈರ್ಯ ತುಂಬಿ.

► ಮುಂದೆ ನಡೆಯಲು ಪ್ರೋತ್ಸಾಹಿಸಿ. ನಿಮ್ಮ ಸಹಾಯ ಹಸ್ತ ನೀಡಿ.

► ಮಕ್ಕಳೊಂದಿಗಿನ ಅನುಭವಕ್ಕೆ, ಸಕಾರಾತ್ಮಕವಾದ ಮಾರ್ಗದರ್ಶನ, ಸ್ನೇಹಪರತೆ ಎಂದಿಗೂ ಅವರನ್ನು ಆತ್ಮಹತ್ಯಾ ಆಲೋಚನೆಗೆ ತಳ್ಳದು.

ಪೋಷಕರ ಜವಾಬ್ದಾರಿ

♦ ಮಕ್ಕಳನ್ನು ಏಕಾಂಗಿಯಾಗಿರಲು (ಒಂಟಿತನದ ಭಾವನೆ ಬೆಳೆಯಲು) ಬಿಡಬೇಡಿ.

♦ ಹೆಚ್ಚಿನ ಸಮಯ ಟಿವಿ ಹಾಗೂ ಇಂಟರ್‌ನೆಟ್‌ಗಳ ಮುಂದೆ ಕಳೆಯಲು ಬಿಡುವುದು ಬೇಡ.

♦ ಆಫೀಸಿನ ಒತ್ತಡ, ಕೋಪಗಳನ್ನು ಮಕ್ಕಳ ಮೇಲೆ ಹೇರಬೇಡಿ.

♦ ಮಕ್ಕಳ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿ.

♦ ಮಕ್ಕಳಲ್ಲಿ ಆದಷ್ಟು ಮಟ್ಟಿಗೆ ಆತ್ಮವಿಶ್ವಾಸ ಮೂಡಿಸಲು ಪ್ರಯತ್ನಪಡಿ.

♦ ಹೊರಗಿನ ಆಹಾರ ಅದರಲ್ಲೂ ಬೇಕರಿ ಪದಾರ್ಥಗಳನ್ನು, ಹೆಚ್ಚಿನ ಪ್ರಮಾಣದಲ್ಲಿ ಪ್ರಿಸರ್ವೆಟಿವ್ ಬಳಸಿರುವ ತಿನಿಸುಗಳನ್ನು ಮಕ್ಕಳಿಗೆ ನಿತ್ಯ ನೀಡಬೇಡಿ.

♦ ಕುಟುಂಬದ ಇತರ ಸದಸ್ಯರೊಂದಿಗೆ ಮಕ್ಕಳನ್ನು ಮುಕ್ತವಾಗಿ ಬೆರೆಯಲು ಬಿಡಿ.

♦ ಸೂಕ್ಷ್ಮ ಮಾತುಗಳಲ್ಲಿ ಮತ್ತು ಒಳ್ಳೆಯ ರೀತಿಯಿಂದಲೇ ಮಕ್ಕಳಲ್ಲಿ ಉತ್ತರದಾಯಿತ್ವ ಬೆಳೆಸಿಕೊಳ್ಳುವುದನ್ನು ರೂಢಿಸಿ.

♦ ಮಕ್ಕಳು ಯಾರ ಜೊತೆ ಬೆರೆಯುತ್ತಾರೆ, ಏನು ನೋಡುತ್ತಾರೆ (ಟಿವಿ, ಕಂಪ್ಯೂಟರ್‌ನಲ್ಲಿ) ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top