‘ಸುಪ್ರೀಂ’ ಶಕ್ತಿಹೀನವಾಗುತ್ತಿದೆಯೇ? | Vartha Bharati- ವಾರ್ತಾ ಭಾರತಿ

‘ಸುಪ್ರೀಂ’ ಶಕ್ತಿಹೀನವಾಗುತ್ತಿದೆಯೇ?

ಸಿಎಎ, ಎನ್‌ಪಿಆರ್, ಎನ್‌ಆರ್‌ಸಿ ಎಂಬ ಮೂರು ವಿಧಗಳಲ್ಲಿ ಪ್ರಜೆಗಳನ್ನು ಕಾಡುತ್ತಿರುವ ತಿದ್ದುಪಡಿ ಕಾಯ್ದೆಗಳ ವಿಷಯದಲ್ಲೇ ಅಲ್ಲದೆ ಅದಕ್ಕೆ ಮುನ್ನ ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಪರಿಣಾಮಗಳ ಹಿನ್ನೆಲೆಯಲ್ಲಿ ಇತ್ತೀಚಿನ ಧರ್ಮಪೀಠದಲ್ಲಿನ ಕೆಲವರು ನ್ಯಾಯಾಧೀಶರು ಹೊರಹಾಕಿದ ತೀರ್ಪುಗಳು ಸಹ ಪೌರರಲ್ಲಿ ಅನುಮಾನಗಳಗೆ ದಾರಿ ತೆರೆದಿದೆ. ಅದಕ್ಕೆ ತಕ್ಕಂತೆಯೇ ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್ ಶಾ ಮೇಲೆ ಹೇಳಿದ ಮೂರು ಹಿಂಸಾತ್ಮಕ ಕಾಯ್ದೆಗಳಿಗೆ ಸಮರ್ಥನೆಯಾಗಿ ಮಾಡುತ್ತಿರುವ ಘೋಷಣೆಗಳು ‘ಕುಣಿಯಲಾರದವನಿಗೆ ನೆಲ ಡೊಂಕು’ ಎಂಬ ಗಾದೆಯಂತಿದೆ. ಸುಪ್ರೀಂಕೋರ್ಟ್‌ನ ಕೆಲವು ಧರ್ಮಪೀಠಗಳ ತೀರ್ಪುಗಳ ಮೇಲೆ ‘ನಂಬಿಕೆ’ ಆಳುವವರಿಗೆ ಹೇಗೆ ಉಂಟಾಗುತ್ತಿದೆ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ವಿವರಿಸಿದ ರೀತಿಯೇ ಸಾಕ್ಷಿ.

ಇತ್ತೀಚಿನ ಕಾಲಘಟ್ಟದಲ್ಲಿ ಅದರಲ್ಲೂ ಮುಖ್ಯವಾಗಿ ಬಿಜೆಪಿ ಸರಕಾರ ಏರ್ಪಟ್ಟ ಆನಂತರ ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದ ಅತ್ಯುನ್ನತ ನ್ಯಾಯಾಲಯ (ಸುಪ್ರೀಂ ಕೋರ್ಟ್) ಅನುಸರಿಸುತ್ತಿರುವ ವಿಧಾನಗಳಲ್ಲೂ, ತೀರ್ಪುಗಳಲ್ಲೂ ಕೂಡಾ ದೇಶಪ್ರಜೆಗಳು ಕೆಲವು ಬದಲಾವಣೆಗಳನ್ನು ಪತ್ತೆ ಹಚ್ಚಬಲ್ಲವರಾಗುತ್ತಿದ್ದಾರೆ. ಅನೇಕ ತೀರ್ಪುಗಳ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮೇಲೆ ಇಲ್ಲವೇ ಕೆಲವರು ನ್ಯಾಯಾಧೀಶರ ಮೇಲೆ ಆಳುವವರ ಒತ್ತಡ ಒಂದು ಮಟ್ಟಕ್ಕೆ ಇದೆ ಎಂಬ ಅನುಮಾನಗಳು ಪ್ರಜೆಗಳಲ್ಲಿ ಮೊಳಕೆಯೊಡೆಯುತ್ತಿವೆ.

ಸಿಎಎ, ಎನ್‌ಪಿಆರ್, ಎನ್‌ಆರ್‌ಸಿ ಎಂಬ ಮೂರು ವಿಧಗಳಲ್ಲಿ ಪ್ರಜೆಗಳನ್ನು ಕಾಡುತ್ತಿರುವ ತಿದ್ದುಪಡಿ ಕಾಯ್ದೆಗಳ ವಿಷಯದಲ್ಲೇ ಅಲ್ಲದೆ ಅದಕ್ಕೆ ಮುನ್ನ ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಪರಿಣಾಮಗಳ ಹಿನ್ನೆಲೆಯಲ್ಲಿ ಇತ್ತೀಚಿನ ಧರ್ಮಪೀಠದಲ್ಲಿನ ಕೆಲವರು ನ್ಯಾಯಾಧೀಶರು ಹೊರಹಾಕಿದ ತೀರ್ಪುಗಳು ಸಹ ಪೌರರಲ್ಲಿ ಅನುಮಾನಗಳಗೆ ದಾರಿ ತೆರೆದಿದೆ. ಅದಕ್ಕೆ ತಕ್ಕಂತೆಯೇ ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್ ಶಾ ಮೇಲೆ ಹೇಳಿದ ಮೂರು ಹಿಂಸಾತ್ಮಕ ಕಾಯ್ದೆಗಳಿಗೆ ಸಮರ್ಥನೆಯಾಗಿ ಮಾಡುತ್ತಿರುವ ಘೋಷಣೆಗಳು ‘ಕುಣಿಯಲಾರದವನಿಗೆ ನೆಲ ಡೊಂಕು’ ಎಂಬ ಗಾದೆಯಂತಿದೆ. ಸುಪ್ರೀಂಕೋರ್ಟ್‌ನ ಕೆಲವು ಧರ್ಮಪೀಠಗಳ ತೀರ್ಪುಗಳ ಮೇಲೆ ‘ನಂಬಿಕೆ’ ಆಳುವವರಿಗೆ ಹೇಗೆ ಉಂಟಾಗುತ್ತಿದೆ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ವಿವರಿಸಿದ ರೀತಿಯೇ ಸಾಕ್ಷಿ. ಫೆಬ್ರವರಿ 23, 2020ರಂದು ದೇಶದ ರಾಜಧಾನಿಯಲ್ಲಿ ಆರಂಭವಾದ ಅಂತರ್‌ರಾಷ್ಟ್ರೀಯ ಕಾನೂನು ಸಮ್ಮೇಳನದಲ್ಲಿ ಮೋದಿ ಭಾಷಣ ಮಾಡುತ್ತಾ, ಬದಲಾಗುತ್ತಿರುವ ವಿಶ್ವದಲ್ಲಿ ಕಾನೂನು ವ್ಯವಸ್ಥೆ ಸಹ ಹೇಗೆ ಹೊಂದಿಕೊಂಡು ಹೋಗುತ್ತಿದೆಯೆಂದು ಸೂಕ್ಷ್ಮವಾಗಿ ಹೇಳಿದರು.

ತೀರ್ಪುಗಳನ್ನು ಜನ ಸ್ವಾಗತಿಸುತ್ತಿದ್ದಾರೆಯೇ?

ಮೋದಿ ಮಾತುಗಳಲ್ಲಿ ಹೇಳಬೇಕು ಎಂದರೆ, ದೇಶದಲ್ಲಿನ ಕ್ಲಿಷ್ಟವಾದ ಅಂಶಗಳ ಮೇಲೆ ಇತ್ತೀಚಿನ ಕಾಲದಲ್ಲಿ ಸುಪ್ರೀಂಕೋರ್ಟ್ ಕೊಟ್ಟ ತೀರ್ಪುಗಳು ವಿಶ್ವಾದ್ಯಂತ ಚರ್ಚೆಗೆ ಕಾರಣವಾಗಿದೆ. ತೀರ್ಪು ಹೇಗಿರುತ್ತದೋ ಎಂಬ ಭಯಾತಂಕಗಳು ಮೊದಲು ವ್ಯಕ್ತವಾದರೂ, ಅವನ್ನು ಹಚ್ಚಿಕೊಳ್ಳದೆ ದೇಶದಲ್ಲಿನ ನೂರು ಕೋಟಿ ಪ್ರಜೆಗಳು ನ್ಯಾಯಾಲಯದ ತೀರ್ಪುಗಳನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತಿದ್ದಾರೆಂದು ಮೋದಿ ಹೇಳಿದರು. ಅಯೋಧ್ಯ ವಿವಾದದ ಮೇಲೆ ಹಳ್ಳಿಕಟ್ಟೆ ಪಂಚಾಯಿತಿಯಂತೆ ಕೋರ್ಟ್ ನೀಡಿದ ತೀರ್ಪನ್ನು ಮೋದಿ ಏಕೆ, ಯಾವ ಪರಿಸ್ಥಿತಿಯಲ್ಲಿ ತಲೆ ಮೇಲೆ ಹೊರಬೇಕಾಗಿ ಬಂದಿತೆಂದು ಭಾರತ ಪ್ರಜೆಗಳಿಗೆ ಅರ್ಥವಾಗಿ ಹೋಯಿತು. ‘‘ಭಯಗಳಿದ್ದರೂ ಪ್ರಜೆಗಳು ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ’’ ಎಂಬ ಮೋದಿ ಮಾತುಗಳ ಹಿಂದೆ ಅಂತರ್ಗತವಾಗಿ ಬಚ್ಚಿಡಲಾಗದ ಬೆದರಿಕೆ ಧೋರಣೆ ಇದೆ.

ಅದೇ ವಿಧವಾಗಿ ಜನಜೀವನನ್ನು ಶಾಸನಸಭೆಯಲ್ಲಿನ ‘ಬ್ರೂಟ್ ಮೆಜಾರಿಟಿ’ ಮೂಲಕ ನಿಯಂತ್ರಿಸ ಹೊರಟಿರುವ ಅಮಿತ್ ಶಾ ಇತ್ತೀಚೆಗೆ ಜನಜೀವನವನ್ನು ಹದಗೆಡಿಸುವ ಮೂರು ಜನವಿರೋಧಿ ಕಾಯ್ದೆಗಳನ್ನು (ಸಿಎಎ, ಎನ್‌ಪಿಆರ್, ಎನ್‌ಆರ್‌ಸಿ) ಸಮರ್ಥಿಸಿಕೊಳ್ಳುತ್ತಾ, ದೇಶವ್ಯಾಪಿಯಾಗಿ ಆ ಕಾಯ್ದೆಗಳಿಗೆ ವಿರುದ್ಧವಾಗಿ, ಇತರ ರಾಜ್ಯಗಳಲ್ಲಿ, ಪ್ರದೇಶಗಳಲ್ಲಿ ನ್ಯಾಯಯುತವಾಗಿದ್ದ ಪ್ರತಿರೋಧಗಳ ಸಂದರ್ಭದಲ್ಲಿ ಮಾಡಿದ ಪ್ರಕಟನೆಗಳು ಸಹ ಹುಣ್ಣಿನ ಮೇಲೆ ಬರೆ ಎಳೆದಂತೆ ಇದ್ದವು. ಎಷ್ಟಾದರೂ ಪೌರರೆಂದರೆ-ಸಂವಿಧಾನ ಗುರುತಿಸಿದ ಸರ್ವಮತ, ಸರ್ವವಿಶ್ವಾಸಗಳ ಸಮ್ಮಿಲನವಾಗಿ ನೆಲೆಗೊಂಡು ಮುಂದುವರಿಯುತ್ತಿರುವ ಸೆಕ್ಯುಲರ್ ವ್ಯವಸ್ಥೆ ಎಂಬ ಪ್ರಜ್ಞೆ ಇಲ್ಲದೆ, ಶತಮಾನಗಳಿಂದ ಒಂದಾಗಿ ಬಾಳುತ್ತಿರುವ ವಿವಿಧ ಮತಸ್ಥರ ಲೌಕಿಕ ಬದುಕುಗಳಿಗೆ ಕಿಚ್ಚಿಟ್ಟು ದೇಶದ ಸಮೈಕ್ಯತಾ ವ್ಯವಸ್ಥೆಯ ನರನಾಡಿಗಳನ್ನು ಕತ್ತರಿಸುವ ಧೋರಣೆಯನ್ನು ಆಳುವವರು ಅನುಸರಿಸುತ್ತಿದ್ದಾರೆ.

ಬೇರೆಯಾಗಿ ನೋಡುವುದೇ ವಂಶವಾಹಿ ಲಕ್ಷಣವೇ?

ಮಧ್ಯ ಏಶ್ಯದ ವೊಲ್ಗಾದಿಂದ ಗಂಗಾ ತೀರದವರೆಗೆ, ಸಿಂಧೂನಾಗರಿಕತೆಯವರೆಗೂ ಮೊಗ್ಗಾಗಿ ವಿಕಸಿಸುತ್ತಾ ಸಾಗಿದ-ಸಕಲ ವಿಶ್ವಾಸಗಳ ಸಮ್ಮಿಲನವಾಗಿ ಸಾಗಿದ ಖಂಡಗಳ, ಉಪಖಂಡಗಳ ಮಾನವಯಾತ್ರೆಗಳು- ಒಗ್ಗಟ್ಟಾಗಿ ನೆಲೆಗೊಂಡಿರುವವೇ ಎಂಬ ವೌಲಿಕ ಸತ್ಯವನ್ನು ಮರೆಯಬಾರದು. ಆದರೂ ಈ ಮಾನವ ವಲಸೆ ಯಾತ್ರೆಯ ಭಾಗವಾಗಿ ಅಷ್ಟಕಷ್ಟಗಳ ಮಧ್ಯೆ ಭಾರತ ಉಪಖಂಡದಲ್ಲಿ ನೆಲೆಗೊಂಡವರು ಶಾ ಭಾವಿಸುತ್ತಿರುವಂತೆ ಕೇವಲ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರಷ್ಟೇ ಅಲ್ಲ, ಮುಸ್ಲಿಮರೂ ಇದ್ದಾರೆ.

ಅಸಲು ‘ಹಿಂದೂ’ ಪದವೇ ‘ಸಿಂಧೂ’ ಪದದಿಂದ ಹುಟ್ಟಿದೆ. ಭಾರತ ದೇಶದಲ್ಲಿ ಪ್ರವೇಶಿಸಿದ ಪರ್ಷಿಯನ್ಸ್ (ಮಧ್ಯ ಏಶ್ಯದವರು) ‘ಸ’ ಅಕ್ಷರವನ್ನು ನುಡಿಯಲಾರರು. ಹಾಗಾಗಿಯೇ ‘ಸ’ನ ‘ಹ’ ಎಂದು ಅವರು ನುಡಿದಿದ್ದರಿಂದ ಕ್ರಮೇಣ ಸಿಂಧೂ ನಾಗರಿಕತೆ ‘ಹಿಂದೂ’ ನಾಗರಿಕತೆ ಎಂದು ಹೆಸರಾಯಿತು ಎಂದು ಮಹಾಪಂಡಿತ ರಾಹುಲ್ ಸಾಂಕೃತ್ಯಾಯನ ಉಲ್ಲೇಖಿಸಿದ್ದಾರೆ. ಆದರೂ, ಹಿಂದೂ ಮಹಾಸಭಾ ನಾಯಕ ಡಾ. ಮೂಂಜೆ ಮಹಾಶಯ ಎರಡನೇ ವಿಶ್ವಸಮರ ಕಾಲದಲ್ಲಿ ಫ್ಯಾಶಿಸ್ಟರಾದ ಮುಸ್ಸೋಲಿನಿ, ಹಿಟ್ಲರ್‌ಗಳನ್ನು ಕಂಡು ಬಂದಾಗಿನಿಂದ, ಗೋಳ್ವಾಲ್ಕರ್‌ವರೆಗೂ, ಮತಾಧಾರಿತವಾಗಿ ದೇಶ ವಿಭಜನೆಗೆ ‘ಮುಹೂರ್ತ’ ಇಡುವ ತನಕ, ಆಗಿನಿಂದ ಈ ಕ್ಷಣದವರೆಗೂ ಭಾರತದೇಶದಲ್ಲಿ ಇಷ್ಟು ಕಾಲ ಅಂತರ್ಭಾಗವಾದ ಮುಸ್ಲಿಮರನ್ನು ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರಿಂದ ಬೇರೆಯಾಗಿ ನೋಡುವುದು ನಡೆಯುತ್ತಿದೆ. ಅದೊಂದು ವಂಶವಾಹಿ ಲಕ್ಷಣವಾಗಿ ಬದಲಾಗಿದೆ. ಹಾಗಾಗಿಯೇ ಅಮಿತ್ ಶಾ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಿರುಚಿ ಹೊಸ ಟ್ವಿಸ್ಟ್ ನೀಡುವುದಕ್ಕೆ ಪ್ರಯತ್ನಿಸಿದ್ದಾರೆ.

‘‘ದೇಶ ವಿಭಜನಾ ನಂತರ ನಿರಾಶ್ರಿತರಾದವರು ದಾಖಲೆಗಳ ಸಾಕ್ಷಗಳನ್ನು ತೋರಿಸಬೇಕಾಗಿರುತ್ತದೆ ಎಂದು ಕೆಲವರು ಭಯಗೊಳಿಸುತ್ತಿದ್ದಾರೆ. ಅಂತಹದ್ದೇನೂ ಇಲ್ಲ’’ ಎನ್ನುತ್ತಲೇ ಅಮಿತ್ ಶಾ ‘‘ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು ಎಂತಹ ಪೌರತ್ವ ನಿರೂಪಣಾ ಪತ್ರಗಳ ತೋರಿಸುವ ಅಗತ್ಯವೂ ಇಲ್ಲ’’ ಎನ್ನುತ್ತಿದ್ದಾರೆ. ಆದರೆ ಅದೇ ಸೂತ್ರವನ್ನು ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನದಿಂದ ಬರುವ ನಿರಾಶ್ರಿತರಿಗೆ ಅನ್ವಯಗೊಳಿಸಲು ನಿರಾಕರಿಸುತ್ತಿದ್ದಾರೆ.

ಸುದೀರ್ಘ ಚರಿತ್ರೆಯಲ್ಲಿ ವಿಸ್ತರಿಸಿರುವ ಮಾನವೇತಿಹಾಸದಲ್ಲಿ ಮುಸ್ಲಿಮರನ್ನು ಹಿಂದೂ, ಸಿಖ್, ಬೌದ್ಧ, ಜೈನರಿಂದ ಬೇರ್ಪಡಿಸಿ ಸಾಮರಸ್ಯಕ್ಕೆ ಬೆಂಕಿ ಇಡುತ್ತಾ ‘ಸೆಕ್ಯುಲರ್ ವ್ಯವಸ್ಥೆ’ಯನ್ನು ನಾಶಮಾಡಹೊರಟಿರುವ ಈ ವಿಭಜನಾ ಸಿದ್ಧಾಂತವನ್ನು ಪ್ರಜೆಗಳು ಬಹಿಷ್ಕರಿಸಬೇಕಾದ ಸಮಯ ಬಂದಿದೆ. ಈ ವಿಧ್ವಂಸಕ ಶಕ್ತಿಗಳಿಂದ ಎಲ್ಲಾ ರೀತಿಯ ವಸಾಹತು ಸಾಮ್ರಾಜ್ಯ ಪಾಲಕರು ದೇಶದ ಸ್ವಾತಂತ್ರಯೋಧರ ಮೇಲೆ, ಪ್ರತಿಭಟನಾ ಶಕ್ತಿಗಳ ಮೇಲೆ ‘ದೇಶದ್ರೋಹ’ ಅಪರಾಧದ ಕಾಯ್ದೆಗಳನ್ನು ನಿರಂಕುಶವಾಗಿ ಪ್ರಯೋಗಿಸುತ್ತಾ ಬಂದರು. ಆ ‘ಎಂಜಲು’ ಕಾಯ್ದೆಗಳನ್ನೇ ಇದಕ್ಕೆ ಮುನ್ನ ಕಾಂಗ್ರೆಸ್ (ಎಮರ್ಜೆನ್ಸಿ), ಈಗ ಬಿಜೆಪಿಯವರು ದೇಶದ ಪ್ರಜೆಗಳ ಬಾಯಿ ಅಮುಕುವುದಕ್ಕೆ, ಸೆಕ್ಯುಲರ್ ವ್ಯವಸ್ಥೆಯ ರಕ್ಷಣೆಗೋಸ್ಕರ ಬೀದಿ ಬೀದಿಗಳಲ್ಲೂ ಹೋರಾಡುತ್ತಿರುವ ಯುವ ಜನರನ್ನು, ಪ್ರಜಾಪ್ರಭುತ್ವವಾದಿಗಳನ್ನು ಹತ್ತಿಕ್ಕುವುದಕ್ಕೋಸ್ಕರ ಬಳಸುತ್ತಿದ್ದಾರೆ. ಯಾವುದೇ ವಿಚಾರಣೆ ಇಲ್ಲದೆ ವಿದ್ಯಾಸಂಸ್ಥೆಗಳ, ವಿಶ್ವವಿದ್ಯಾನಿಲಯಗಳ ಜಾಗೃತ ಪ್ರಜೆಗಳ ಬೆನ್ನು ಮೂಳೆ ಮುರಿಯುವುದಕ್ಕೆ ವಸಾಹತು ಕಾಯ್ದೆಗಳನ್ನೇ ಬಳಸುತ್ತಿದ್ದಾರೆ.

ಸಾಮಾನ್ಯರ ಯುದ್ಧಭೇರಿಗಳು ಬೀದಿಗಳಲ್ಲೇ ಮೊಳಗುವವು

ಫ್ರೆಂಚ್ ವಿಪ್ಲವ ಕಾಲದಲ್ಲಿ ಬಾಸ್ಡಿಲ್ಲಿ ದುರ್ಗ ಕ್ರಾಂತಿಕಾರಕ ಆಕ್ರೋಶದಿಂದ ಧ್ವಂಸಗೊಂಡಾಗ, ಫ್ರೆಂಚ್ ಮಹಾಮೇಧಾವಿ ವಾಲ್ತೇರ್‌ನನ್ನು ವಿಚಾರಣೆ ಇಲ್ಲದೇ ನಿರ್ಬಂಧಿಸಿದಾಗ ಅವನ ವಾದವನ್ನು ಕೇಳಿಸುವ ಅವಕಾಶವನ್ನು ಆತನಿಗೆ ಆಡಳಿತ ವರ್ಗಗಳು ನಿರಾಕರಿಸಿದವು. ಆ ಅನುಭವದಿಂದಲೇ ಆತ ಸಮಗ್ರ ಕಾನೂನು ವ್ಯವಸ್ಥೆಯನ್ನೇ ಬೇರುಸಮೇತ ಸುಧಾರಿಸುವುದಕ್ಕೆ ಕಟಿಬದ್ಧನಾದ ಎಂಬುದನ್ನು ಮರೆಯಬಾರದು. ಏಕೆಂದರೆ ದೇಶದ ಪರಿಸ್ಥಿತಿಗಳು ಕಷ್ಟಕಾಲದಲ್ಲೇ ಪ್ರಜೆಗಳನ್ನು, ಯುವಜನರನ್ನು ಜಾಗೃತಿಯೊಳಗೆ ನಡೆಸಿ, ಧರ್ಮ ಹೋರಾಟಕ್ಕೆ ಸಿದ್ಧಗೊಳಿಸುತ್ತವೆ. ಬೀದಿಗಳಿಂದಲೇ ಜನಸಾಮಾನ್ಯರು ಯುದ್ಧಭೇರಿಗಳನ್ನು ಮೊಳಗಿಸುತ್ತಾರೆ. ಅನ್ಯಾಯವನ್ನು, ದರಿದ್ರ ಜನವಿರೋಧಿ ಕಾಯ್ದೆಗಳನ್ನು ಬಲವಾಗಿ ವಿರೋಧಿಸುತ್ತಾರೆ. ಈ ಬದಲಾವಣೆ ಮಿಣಕ್ ಮಿಣಕ್ ಎನ್ನುತ್ತಾ ಅಜ್ಞಾತದೊಳಗೆ ಜಾರಿಕೊಳ್ಳುತ್ತಿರುವ ಕಾನೂನು ವ್ಯವಸ್ಥೆಯನ್ನು ಸಹ ನಿದ್ರೆಯಿಂದ ಎಚ್ಚರಗೊಳಿಸುತ್ತದೆ. ಏಕೆಂದರೆ ಸೋಲನ್ ಹೇಳಿದಂತೆ ‘ಈ ಕಾನೂನುಗಳು ಎನ್ನುವವು ಜೇಡರಬಲೆಯಂತಹವು. ಆ ಗೂಡಿನೊಳಗೆ ದುರ್ಬಲ ಪ್ರಾಣಿ ತೂರಿತು ಎಂದರೆ, ಅದು ಅಲ್ಲಿ ಸಿಕ್ಕಿಹಾಕಿಕೊಂಡು ಹೊರಗೆ ಬರಲಾರದು. ಆದರೆ ಅದೇ ಜೇಡರಬಲೆಯೊಳಗೆ ಒಂದು ದೊಡ್ಡ ಪ್ರಾಣಿ ತೂರಿದರೆ ಬಲೆಯೇ ಹರಿಯುತ್ತದೆ. ಅಂತಹದ್ದೇ ಕಾನೂನಿನ ಬಲೆ!’ ಹಾಗೆ ಜನವಿರೋಧಿ ಕಬ್ಬಿಣದ ಕಾಯ್ದೆಗಳ ಹಿಂದೆ ನಲುಗಿ ಹೋಗುತ್ತಿರುವ ಬಡವರ ರೋಷಾವೇಶ ಹೀಗೇ ಮುಂದುವರಿಯಲು ಬಿಟ್ಟರೆ ಹೇಗಿರುತ್ತದೆಂದು ಒಬ್ಬ ಕವಿ ಕಾವ್ಯಾತ್ಮಕವಾಗಿ ಹೇಳುತ್ತಾನೆ ಕೇಳಿ:

‘‘ಒಬ್ಬ ಮನುಷ್ಯನನ್ನು ಹತ್ತು ಮಕ್ಕಳನ್ನಾಗಿ ಸೀಳುವ ಆಕ್ರೋಶ

ಹತ್ತು ಮಕ್ಕಳನ್ನು ನೂರು ಹೂಗಳಾಗಿ ಕೂರಿಸುವ ರೋಷ

ನೂರು ಹೂವುಗಳನ್ನು ಸಾವಿರ ಕತ್ತಿಗಳಾಗಿ ಬದಲಿಸುವ ಆವೇಶ

ಬಡವರ ಆಗ್ರಹ ಎರಡು ಅಗ್ನಿ ಪರ್ವತಗಳ ಎದುರು

ಒಂದು ಭೂಕಂಪನವನ್ನು ನಿಲ್ಲಿಸುತ್ತದೆ.

ನೂರು ಹೊಟ್ಟೆಗಳನ್ನು ಒಂದು ತೋಳಾಗಿಸುವ ಆಗ್ರಹ

ಲಕ್ಷ ಚುಕ್ಕೆಗಳನ್ನು ಒಂದು ಹಾಡಾಗಿ ಹರಿಸುವ ರೋಷ

ಬಡವರ ಸಿಟ್ಟು ಎರಡು ಪೊಲೀಸ್ ಟೋಪಿಗಳ ಎದುರು

ಈ ಗೀತೆಯನ್ನು ನಿಲ್ಲಿಸುತ್ತದೆ’’.

ಹಾಗೆ ನಿಂತ ಗೀತೆ ಲಕ್ಷ ಕಂಠಗಳನ್ನು ಕುದಿಸಿ ಕೂಡಿಸುತ್ತದೆ.

 (ಕೃಪೆ: sakshi )

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top