ರಾಷ್ಟ್ರಪತಿ ಚುನಾವಣೆಯೂ, ಜಾತಿ ಲೆಕ್ಕಾಚಾರಗಳೂ!

ನಾವು ಒಪ್ಪಲಿ ಬಿಡಲಿ ಇಂಡಿಯಾದ ಚುನಾವಣಾ ರಾಜಕೀಯದಲ್ಲಿ ಜಾತಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತಲೇ ಇರುವುದಂತೂ ಸತ್ಯ. ಬಹುಶ: ಈ ಕಟುಸತ್ಯವನ್ನು ಅರಗಿಸಿಕೊಂಡೇ ರಾಜಕೀಯ ಮಾಡಬೇಕಾದ ಅನಿವಾರ್ಯತೆಗೆ ಎಲ್ಲ ಪಕ್ಷಗಳು ಒಗ್ಗಿಹೋಗಿವೆ. ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಈ ನೆಲದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಚುನಾವಣೆಯವರೆಗೂ ಈ ಜಾತಿಯ ಪ್ರಭಾವ ದಟ್ಟವಾಗಿದ್ದು, ಅದನ್ನು ನಿರಾಕರಿಸಿ ಇಲ್ಲ ತಿರಸ್ಕರಿಸಿ ರಾಜಕಾರಣ ಮಾಡುವ ಗಟ್ಟಿತನವನ್ನು ನಮ್ಮ ರಾಜಕೀಯ ಪಕ್ಷಗಳು ಯಾವತ್ತಿಗೂ ತೋರಿಸಿಲ್ಲ. ಇದಕ್ಕೆ ಈ ಬಾರಿಯ ರಾಷ್ಟ್ರಪತಿ ಚುನಾವಣೆಯೇನು ಅಪವಾದವಾಗಿ ಉಳಿದಿಲ್ಲ. ಇದೀಗ ಈ ಜಾತಿ ರಾಜಕಾರಣದ ಭಾಗವಾಗಿಯೇ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾಜಪ ರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿಯ ಆಯ್ಕೆಯನ್ನು ಮಾಡಿದೆ.

ಆದರಿಲ್ಲಿ ಒಂದು ಬಹುಮುಖ್ಯವಾದ ವಿಚಾರವಿದೆ. ರಾಮನಾಥ್ ಕೋವಿಂದ್ ಕೇವಲ ದಲಿತರೆಂಬ ಕಾರಣಕ್ಕೆ ಮಾತ್ರ ಅವರನ್ನು ಈ ಹುದ್ದೆಗೆ ಭಾಜಪ ಆಯ್ಕೆ ಮಾಡಿದೆ ಎಂಬ ಸಾಮಾನ್ಯ ಅಭಿಪ್ರಾಯ ದೇಶದ ವಿರೋಧಪಕ್ಷಗಳು ಮತ್ತು ಜನರಲ್ಲಿ ಮೂಡಿದ್ದರೆ ಅದು ಭಾಗಶ: ಸತ್ಯವಷ್ಟೆ! ಭಾಜಪದ ನಿಜವಾದ ಉದ್ದೇಶ ಬೇರೆಯದೇ ಇದೆ. ಕೋವಿಂದ್ ಅವರ ಆಯ್ಕೆಯ ಹಿಂದೆ ಗುಜರಾತ್ ರಾಜ್ಯವನ್ನು ಮತ್ತೆ ಗೆಲ್ಲುವ ಭಾಜಪದ ಮಹತ್ವಾಕಾಂಕ್ಷೆಯೂ ಈ ಆಯ್ಕೆಯಲ್ಲಿ ಅಡಗಿರುವುದನ್ನು ನಾವು ಕಾಣಬಹುದು.

 ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಕೋಲಿ ಸಮುದಾಯವನ್ನು ಸಂಪೂರ್ಣವಾಗಿ ತನ್ನತ್ತ ಸೆಳೆಯುವುದು ಭಾಜಪದ ಮೊದಲ ಉದ್ದೇಶವಾಗಿದೆ. ಭಾಜಪಕ್ಕೆ ಉತ್ತರಪ್ರದೇಶ ಎಷ್ಟು ಮುಖ್ಯವೋ ಗುಜರಾತ್ ಸಹ ಅದಕ್ಕೆ ಅಷ್ಟೇ ಮಹತ್ವದ್ದಾಗಿದೆ. ಪ್ರಧಾನಮಂತ್ರಿಯವರ ಸ್ವರಾಜ್ಯದಲ್ಲಿ ಸೋಲಲು ಅದು ಬಯಸುವುದಿಲ್ಲ. ಯಾಕೆಂದರೆ ಗುಜರಾತಿನ ಒಟ್ಟು ಮತದಾರರಲ್ಲಿ ಕೋಲಿ ಜನಾಂಗದ ಪಾಲು ಶೇ. 24ರಷ್ಟಿದೆ. ಗುಜರಾತಿನಲ್ಲಿ ಕೋಲಿಗಳು ಇತರ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ದಿಲ್ಲಿ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಿಗೂ ಅನ್ವಯವಾಗುವಂತೆ ಕೇಂದ್ರವು ಕೋಲಿ ಜನಾಂಗವನ್ನು ದಲಿತವರ್ಗಕ್ಕೆ ಸೇರಿಸಿದೆ. ಗುಜರಾತಿನಲ್ಲಿ ಸುಮಾರು 136 ಹಿಂದುಳಿದ ಜಾತಿಗಳಿದ್ದು ಇವುಗಳ ಒಟ್ಟು ಜನಸಂಖ್ಯೆಯಲ್ಲಿ ಕೋಲಿ ಸಮುದಾಯವೇ ಶೇ. 40ರಷ್ಟಿದೆ.

1998ರವರೆಗೂ ಈ ಕೋಲಿ ಸಮುದಾಯವು ಕಾಂಗ್ರೆಸನ್ನು ಬೆಂಬಲಿಸುತ್ತಿತ್ತು. ಅದುವರೆಗೂ ಕಾಂಗ್ರೆಸ್ ಕ್ಷತ್ರಿಯ, ಹರಿಜನ, ಆದಿವಾಸಿ ಮುಸ್ಲಿಂ(kham)ಕಾಮ್ ಬೆಂಬಲವನ್ನು ನಂಬಿಕೊಂಡಿದ್ದು ಕೋಲಿ ಜನಾಂಗವು ಕ್ಷತ್ರಿಯರಿಗೆ ಸಮಾನವಾದ ಪ್ರಾಮುಖ್ಯತೆಯನ್ನು ಪಡೆದಿತ್ತು. ಗುಜರಾತಿನ ಮೇಲ್ವರ್ಗಗಳ ರಾಜಕಾರಣಕ್ಕೆ ಸವಾಲೊಡ್ಡಿ ಪ್ರತಿರೋಧ ಒಡ್ಡಲು ಕಾಮ್ ಅನ್ನು ಕಾಂಗ್ರೆಸ್ ಯಶಸ್ವಿಯಾಗಿ ಬಳಸಿಕೊಳ್ಳುತ್ತಿತ್ತು. ಆದರೆ ನಂತರ ಗುಜರಾತಿನಲ್ಲಿ ತಲೆ ಎತ್ತಿದ ಹಿಂದುತ್ವದ ಅಲೆ ಈ ಕಾಮ್ ಅನ್ನು ಒಡೆಯುವಲ್ಲಿ ಸಫಲವಾಗಿ ಕೋಲಿ ಮತಬ್ಯಾಂಕ್ ಕಾಂಗ್ರೆಸ್ ಮತ್ತು ಭಾಜಪದ ನಡುವೆ ಹಂಚಿಹೋಯಿತು. ಇನ್ನು ಪ್ರಬಲವಾದ ಪಟೇಲ್( ಪಾಟೀದಾರ್) ಸಮುದಾಯ ಭಾಜಪದ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿತು.

ಆದರೀಗ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಮೀಸಲಾತಿಯ ಬೇಡಿಕೆಯನ್ನಿಟ್ಟುಕೊಂಡು ಪ್ರತಿಭಟನೆಗಳನ್ನು ಮಾಡಿದ ಪಾಟೀದಾರ್ ಸಮುದಾಯ ಬಹುತೇಕ ಭಾಜಪದ ವಿರುದ್ಧವಾಗಿ ಹೋಗುತ್ತಿರುವಂತೆ ಮೇಲ್ನೋಟಕ್ಕಂತೂ ಕಾಣುತ್ತಿದೆ. ಎಲ್ಲಿ ಕೋಲಿ ಮತ್ತು ಪಾಟೀದಾರ್ ಸಮುದಾಯಗಳು ಜೊತೆಯಾಗಿ ಕಾಂಗ್ರೆಸ್ ಪರ ನಿಲ್ಲುತ್ತವೆಯೊ ಎಂಬ ಭಯ ಭಾಜಪವನ್ನು ಕಾಡುತ್ತಿದೆ. ಯಾವುದೇ ಕಾರಣಕ್ಕೂ ಕೋಲಿ ಸಮುದಾಯವು ಪಾಟೀದಾರರ ಜೊತೆ ಸೇರಿ ಕಾಂಗ್ರೆಸನ್ನು ಬೆಂಬಲಿಸಲು ಬಿಡಬಾರದೆಂಬುದು ಭಾಜಪದ ಆಶಯವಾಗಿದೆ. ಯಾಕೆಂದರೆ ಗುಜರಾತ್ ಮಟ್ಟಿಗೆ ಈ ಸಮೀಕರಣ ಭಾಜಪದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಅಕಸ್ಮಾತ್ ಕೋಲಿ ಮತ್ತು ಪಾಟೀದಾರ್ ಸಮುದಾಯಗಳು ಮುಸ್ಲಿಂ ಸಮುದಾಯದ ಜೊತೆ ಸೇರಿ ಕಾಂಗ್ರೆಸ್‌ನ ಪರ ನಿಂತಿದ್ದೇ ಆದರೆ ಭಾಜಪಕ್ಕೆ ಅದು ಆಘಾತಕಾರಿಯಾಗಲಿರುವುದು ನಿಶ್ಚಿತ. ಇಷ್ಟಲ್ಲದೆ ಪಕ್ಕದ ಮಹಾರಾಷ್ಟ್ರದಲ್ಲಿಯೂ ಕೋಲಿ ಸಮುದಾಯ ಗಣನೀಯ ಸಂಖ್ಯೆಯಲ್ಲಿದೆ. ಮಹಾರಾಷ್ಟ್ರದ ಮಟ್ಟಿಗೆ ಶಿವಸೇನೆಯನ್ನು ನಂಬಿಕೊಂಡು ಅಧಿಕಾರ ನಡೆಸುತ್ತಿರುವ ಭಾಜಪಕ್ಕೆ ರಾಜಕೀಯ ಅನಿಶ್ಚಿತತೆ ಕಾಡುತ್ತಿದೆ. ಶಿವಸೇನೆ ಯಾವಾಗ ಬೇಕಾದರೂ ತನ್ನ ಬೆಂಬಲ ಹಿಂಪಡೆಯಬಲ್ಲಂತಹ ತಿಕ್ಕಲು ರಾಜಕಾರಣಕ್ಕೆ ಹೆಸರಾಗಿದೆ. ಹಾಗೇನಾದರೂ ಆದರೆ ಮಹಾರಾಷ್ಟ್ರದಲ್ಲಿ ಚುನಾವಣೆ ಎದುರಿಸಲು ಭಾಜಪಕ್ಕೆ ಕೋಲಿ ಸಮುದಾಯದ ಬೆಂಬಲ ಅಗತ್ಯವಿರುತ್ತದೆ.

ಇವೆಲ್ಲವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಹೋದರೆ ಭಾಜಪ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ತಂತ್ರಗಾರಿಕೆಗೆ ಕೈ ಹಾಕಿದೆ:

ಮೊದಲನೆಯದು, ಇತ್ತೀಚೆಗೆ ನಡೆದ ಹಲವಾರು ಘಟನೆಗಳಿಂದಾಗಿ ಭಾಜಪಕ್ಕೆ ‘ದಲಿತ ವಿರೋಧಿ’ ಎಂಬ ಹಣೆಪಟ್ಟಿ ಅಂಟಿಕೊಂಡಿದ್ದು, ಅದನ್ನು ನಿವಾರಿಸಿಕೊಳ್ಳಲು ಈ ದಲಿತ ರಾಷ್ಟ್ರಪತಿಯ ನಡೆಯನ್ನು ಅದು ನಡೆಸುತ್ತಿದೆ.

ಎರಡನೆಯದು, ರಾಷ್ಟ್ರಮಟ್ಟದಲ್ಲಿ ಕೋವಿಂದ್ ಅವರನ್ನು ದಲಿತ ಅಭ್ಯರ್ಥಿ ಎಂದು ಬಿಂಬಿಸಿ ರಾಷ್ಟ್ರಾದ್ಯಂತ ದಲಿತ ಮತಬ್ಯಾಂಕನ್ನು ತನ್ನತ್ತ ಸೆಳೆೆಯಲು ಪ್ರಯತ್ನಿಸುವುದು. ಮುಂದಿನ ವರ್ಷದ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಗಳಲ್ಲಿ ದಲಿತ ಸಮುದಾಯವನ್ನು ಭಾಜಪದತ್ತ ಸೆಳೆಯಲು ಇದನ್ನು ಬಳಸಿಕೊಳ್ಳುವುದು. ಹಾಗೆಯೇ 2019ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ತಾನು ದಲಿತರೊಬ್ಬರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇನೆಂದು ಹೇಳಿಕೊಂಡು ರಾಷ್ಟ್ರ ಮಟ್ಟದಲ್ಲಿಯೂ ದಲಿತರನ್ನು ತನ್ನತ್ತ ಸೆಳೆಯುವ ಹುನ್ನಾರವೂ ಇದರಲ್ಲಿ ಅಡಗಿದೆ.

ರಾಮನಾಥ್ ಕೋವಿಂದ್ ಕೇವಲ ದಲಿತರೆಂಬ ಕಾರಣಕ್ಕೆ ಮಾತ್ರ ಅವರನ್ನು ಈ ಹುದ್ದೆಗೆ ಭಾಜಪ ಆಯ್ಕೆ ಮಾಡಿದೆ ಎಂಬ ಸಾಮಾನ್ಯ ಅಭಿಪ್ರಾಯ ದೇಶದ ವಿರೋಧಪಕ್ಷಗಳು ಮತ್ತು ಜನರಲ್ಲಿ ಮೂಡಿದ್ದರೆ ಅದು ಭಾಗಶಃ ಸತ್ಯವಷ್ಟೆ! ಭಾಜಪದ ನಿಜವಾದ ಉದ್ದೇಶ ಬೇರೆಯದೇ ಇದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top