ಡಾ. ಅಂಬೇಡ್ಕರ್ ಸ್ವಾತಂತ್ರ್ಯ ಚಳವಳಿಯಲ್ಲಿ ಯಾಕೆ ಭಾಗವಹಿಸಿಲ್ಲವೆಂದರೆ...

ಭಾರತದ ಚರಿತ್ರೆಯನ್ನು ಓದುವ ಯಾರಿಗಾದರೂ ಹುಟ್ಟುವ ಗಂಭೀರ ಪ್ರಶ್ನೆ: ಸ್ವಾತಂತ್ರ್ಯ ಚಳವಳಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಏಕೆ ಭಾಗವಹಿಸಲಿಲ್ಲ ಎಂಬುದಾಗಿದೆ. ಅಷ್ಟಲ್ಲದೆ ಈ ಪ್ರಶ್ನೆಯ ಬಗ್ಗೆ ಈ ವರೆಗೆ ಸಾಕಷ್ಟು ಚರ್ಚೆ ನಡೆದಿದೆ ಅದರೆ ದುರದೃಷ್ಟವಶಾತ್ ಈ ಬಗ್ಗೆ ನಡೆದಿರುವ ಬಹುತೇಕ ಚರ್ಚೆಗಳಲ್ಲಿ ಖಚಿತ, ದೃಢ ಸತ್ಯವೆನ್ನಬಹುದಾದ ಉತ್ತರವನ್ನು ಹೇಳಲು ಬಹುತೇಕರು ಹಿಂದೇಟು ಹಾಕುತ್ತಾರೆ. ವಿಚಿತ್ರವೆಂದರೆ ತಿಲಕ್-ಗಾಂಧಿ-ನೆಹರೂ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾರತದ ಬಹುತೇಕರು ತಮ್ಮ ಸರ್ವಸ್ವವನ್ನೂ ಅರ್ಪಿಸಿ ಧನ್ಯರಾಗುತ್ತಿದ್ದ ವೇಳೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರವರು ಮಾತ್ರ ಭಾಗವಹಿಸಲಿಲ್ಲ. ಬದಲಿಗೆ ಈ ಸ್ವಾತಂತ್ರ್ಯ ಹೋರಾಟಗಾರರನ್ನೇ ಟೀಕಿಸುತ್ತಿದ್ದರು ಎಂಬುದು ಬಹುತೇಕ ಇತಿಹಾಸ ಪಂಡಿತರಿಗೂ ಇತಿಹಾಸದ ವಿದ್ಯಾರ್ಥಿಗಳಿಗೂ ತಿಳಿದಿರುವ ಸಂಗತಿಯಾಗಿದೆ. ಆದರೂ, ಅವರಾರೂ ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರವಿರೋಧಿ ದೇಶದ್ರೋಹಿ ಎಂದು ಹೇಳುವ ಧೈರ್ಯ ಮಾಡಲಿಲ್ಲ. ಭಾರತದಲ್ಲಿ ಬ್ರಿಟಿಷರು ಅಳ್ವಿಕೆ ಮಾಡುತ್ತಿದ್ದ ಅವಧಿಯಲ್ಲಿ ಎರಡು ಮುಖ್ಯ ಚಳವಳಿಗಳು ಪ್ರಾರಂಭವಾದವು. ಅವುಗಳಲ್ಲಿ ಮೊದಲನೆಯದು ಬ್ರಾಹ್ಮಣೇತರ ಅಥವಾ ಹಿಂದುಳಿದ ವರ್ಗಗಳ ಚಳವಳಿ. ಇದರ ಸೃಷ್ಟಿಕರ್ತರು ಮಹಾತ್ಮ ಜ್ಯೋತಿ ಬಾಪುಲೆಯವರು. ಕ್ರಿ.ಶ 1848ರಿಂದ ಪ್ರಾರಂಭವಾದ ಈ ಚಳವಳಿಗಳು ಕಾಲಾನಂತರ ದಲ್ಲಿ ಮಹಾರಾಷ್ಟ್ರವನ್ನು ದಾಟಿ ಕರ್ನಾಟಕ - ತಮಿಳುನಾಡುಗಳಿಗೂ ವ್ಯಾಪಕವಾಗಿ ಹರಡಿಕೊಂಡಿತ್ತು. ಈ ಚಳವಳಿಯಲ್ಲಿ ಮಹಾತ್ಮ ಬಾಪುಲೆಯವರ ಜೊತೆಗೆ ಛತ್ರಪತಿ ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ನಾರಾಯಣ ಗುರುಗಳು ಇವರು ಪ್ರದಾನವಾಗಿ ಕಂಡು ಬರುತ್ತಾರೆ. ಮುಂದೆ ಈ ಎಲ್ಲರೂ ಪ್ರಾಂತೀಯವಾಗಿ ನಡೆಸಿದ ಚಳವಳಿಯ ಉತ್ತರಾಧಿಕಾರಿಯಾಗಿ ಡಾ. ಬಿ.ಆರ್. ಅಂಬೇಡ್ಕರ್‌ರವರು ಬರುತ್ತಾರೆ.

ಇನ್ನು ರಾಜಾರಾಂ ಮೋಹನ್ ರಾಯ್, ದಯಾನಂದ ಸರಸ್ವತಿ, ಅತ್ಮರಾಮ ಪಾಂಡುರಂಗ, ಸುರೇಂದ್ರನಾಥ್ ಬ್ಯಾನರ್ಜಿ ಇವರಿಂದ ಪ್ರಾರಂಭವಾದ ಧಾರ್ಮಿಕ ಸುಧಾರಣಾ ಚಳವಳಿಗಳು ಹಾಗೂ ಅವುಗಳಿಗೊಂದು ರಾಜಕೀಯ ಸ್ವರೂಪ ನೀಡಿದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್, ಈ ಎಲ್ಲಾ ಸುಧಾರಣಾವಾದಿಗಳ ಉತ್ತರಾಧಿಕಾರಿಯೆಂಬಂತೆ ಮೋಹನ್‌ದಾಸ್ ಕರಮಚಂದ ಗಾಂಧಿ ಬಂದರು. ಇಲ್ಲಿ ಬಾಲಗಂಗಾಧರ ತಿಲಕ್ ಹಾಗೂ ಜವಹರಲಾಲ್ ನೆಹರೂ ಅವರೂ ಕೂಡ ಮುಖ್ಯರು. ಈ ಹಿಂದುಳಿದ ವರ್ಗಗಳ ಚಳವಳಿ ಹಾಗೂ ಭಾರತ ಕಾಂಗ್ರೆಸ್ ಚಳವಳಿಗಳು ಹಿಂದೆಂದೂ ಇಲ್ಲದೆ ಬ್ರಿಟಿಷ್ ಆಡಳಿತದಲ್ಲಿಯೇ ಹುಟ್ಟಿಕೊಳ್ಳಲು ಕೆಲವು ಮುಖ್ಯ ಕಾರಣಗಳಿವೆ.

 ಅವುಗಳೆಂದರೆ, ಬ್ರಿಟಿಷರು ಭಾರತದ ಕೆಳವರ್ಗಗಳನ್ನು ಮಿಲಿಟರಿಗೆ ಸೇರಿಸಿಕೊಂಡು ನೌಕರಿ ನೀಡಿದರು. ಇದು ಸಾವಿರಾರು ವರ್ಷಗಳಿಂದ ಯಾವ ಸಣ್ಣ ಸೌಲಭ್ಯವೂ ಇಲ್ಲದೆ ಪ್ರಾಣಿಗಳಂತೆ ಬದುಕುತ್ತಿದ್ದ ಕೆಳವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಆಗಾಧವಾದ ಬದಲಾವಣೆಯನ್ನು ತಂದಿತ್ತು. ಇದರ ಜೊತೆಗೆ ಬ್ರಿಟಿಷರು ಕ್ರಿ.ಶ 1835ರಲ್ಲಿ ಸಾರ್ವತ್ರಿಕ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದು ಎಲ್ಲ ವರ್ಗಗಳಿಗೂ ವಿದ್ಯೆ ಕಲಿಯಲು ಅವಕಾಶ ಮಾಡಿಕೊಟ್ಟರು. ಇದರಿಂದಾಗಿ ಶೋಷಿತರಿಗೆ ವಿದ್ಯೆ ದೊರೆತು ತಾವು ಸಾವಿರಾರು ವರ್ಷಗಳಿಂದ ಈ ಬ್ರಾಹ್ಮಣ-ಬನಿಯಾಗಳಿಂದ ವಂಚನೆ-ಶೋಷಣೆಗೆ ಒಳಗಾಗಿದ್ದೇವೆ ಎಂಬುದು ಅರಿವಾಯಿತು ಇದರ ಪರಿಣಾಮವೇ ಹಿಂದುಳಿದ ವರ್ಗಗಳ ಚಳವಳಿ ಅಥವಾ ಬ್ರಾಹ್ಮಣೇತರ ಚಳವಳಿ ಆರಂಭವಾಯಿತು.

ಸಾಮಾನ್ಯವಾಗಿ ಈ ಹಿಂದುಳಿದ ವರ್ಗಗಳ ಚಳವಳಿಯಲ್ಲಿ ಮಹಾರಾಷ್ಟ್ರದಲ್ಲಿ ಮಾಲಿ, ಕೋಳಿ, ಮಾರಾಠ ಮುಂತಾದವರು, ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ, ಮುಸಲ್ಮಾನ, ಅಸ್ಪಶ್ಯರು, ಹಾಗೂ ತಮಿಳುನಾಡು, ಕೇರಳಗಳಲ್ಲಿ ಮೊದಲಿಯಾರ್, ಚೆಟ್ಟಿಯಾರ್, ನಾಯರ್, ಕೇಳವ ಮುಂತಾದ ವರ್ಗಗಳು ಭಾಗವಹಿಸಿದ್ದವು ಈ ಎಲ್ಲಾ ಸಮುದಾಯಗಳ ಜನರಿಗೆ ಭಾರತದ ಬ್ರಾಹ್ಮಣ-ಬನಿಯಾಗಳೇ ಕಡು ವೈರಿಗಳಾಗಿದ್ದು ಬ್ರಿಟಿಷರು ಬಹಳ ಹತ್ತಿರದವರಂತೆ ಗೋಚರಿಸುತ್ತಿದ್ದರು. ಬ್ರಿಟಿಷರು ನೀಡಿದ ಶಿಕ್ಷಣ ಉದ್ಯೋಗಗಳಿಂದ ಎಚ್ಚೆತ್ತ ಇವರು ಬ್ರಿಟಿಷರ ಪರವಾಗಿಯೂ ಬ್ರಾಹ್ಮಣ -ಬನಿಯಾಗಳ ವಿರುದ್ಧವಾಗಿಯೂ ಚಿಂತಿಸಲಾರಂಭಿಸಿದರು.

ಇನ್ನು ಅಖಿಲ ಭಾರತ ಕಾಂಗ್ರೆಸ್‌ನ ಮುಂಚೂಣಿ ನಾಯಕರೆಲ್ಲರೂ ಹೆಚ್ಚು ಬ್ರಾಹ್ಮಣ-ಬನಿಯಾ ವರ್ಗಕ್ಕೆ ಸೇರಿದವರಾಗಿದ್ದು ಇವರೂ ಕೂಡ ಹಿಂದೆಂದೂ ಇಲ್ಲದ ಸ್ವಾತಂತ್ರ್ಯ ಚಳವಳಿಯನ್ನು ಬ್ರಿಟಿಷರ ಅವಧಿಯಲ್ಲೆ ಆರಂಭಿಸಿದ್ದರು. ಇದಕ್ಕೂ ಸಹ ಬ್ರಿಟಿಷರು ಜಾರಿಗೆ ತಂದ ಸಾರ್ವತ್ರಿಕ ಶಿಕ್ಷಣ ಪದ್ಧತಿ ಹಾಗೂ ಅಸ್ಪಶ್ಯರಿಗೆ ಮಿಲಿಟರಿ ಉದ್ಯೋಗ ನೀಡಿದ್ದು ಬಹುಮುಖ್ಯ ಕಾರಣ. ಇದು ಯಾರಿಗಾದರೂ ಅತ್ಯಂತ ಕುತೂಹಲವನ್ನುಂಟು ಮಾಡುವ ಸಂಗತಿ. ಬ್ರಿಟಿಷರ ಈ ಸುಧಾರಣಾತ್ಮಕ ಕಾನೂನುಗಳಿಂದ ಎಚ್ಚೆತ್ತ ಹಿಂದುಳಿದ ವರ್ಗಗಳು ಇನ್ನೂ ಹೆಚ್ಚಿನ ಸವಲತ್ತು ಹಕ್ಕುಗಳಿಗಾಗಿ ಚಳವಳಿ ಮಾಡಿದ್ದೇನೋ ಸರಿ, ಅದರೆ ಬ್ರಿಟಿಷರ ಈ ಸುಧಾರಣಾತ್ಮಕ ಕಾನೂನುಗಳಿಂದ ಬೇಸರಗೊಂಡು ಅವರ ಅಳ್ವಿಕೆ ಸರಿಯಿಲ್ಲ ಇವರು ನಮ್ಮ ದೇಶದಲ್ಲಿ ಇರಕೂಡದೆಂದು ಸ್ವಾತಂತ್ರ್ಯ ಹೋರಾಟವನ್ನು ಬ್ರಾಹ್ಮಣ -ಬನಿಯಾಗಳು ಮಾಡಿದರು.

ಬ್ರಿಟಿಷರು ತಂದ ಸುಧಾರಣೆಗಳಿಂದ ಇವರಿಗಾದ ತೊಂದರೆ ಯೇನು? ಇದು ಬಹಳ ಮುಖ್ಯ ಮತ್ತು ಐತಿಹಾಸಿಕ ಪ್ರಶ್ನೆ. ಏಕೆಂದರೆ, ಈ ಹಿಂದಿನ ಯಾವ ವಿದೇಶಿಯರ ಆಳ್ವಿಕೆಯಲ್ಲೂ ಸ್ವಾತಂತ್ರ್ಯ ಹೋರಾಟ ಮಾಡದ ಇವರು ಬ್ರಿಟಿಷರ ಅವಧಿಯಲ್ಲೇ ಏಕೆ ಮಾಡಿದರು? ದಿಲ್ಲಿ ಸುಲ್ತಾನರ, ಮೊಗಲರ ಆಳ್ವಿಕೆಗಳಲ್ಲಿ ಮೂಡದ ದೇಶ ಪ್ರೇಮ, ರಾಷ್ಟ್ರ ಪ್ರೇಮ ಇವರಿಗೆ ಬ್ರಿಟಿಷರ ಅವಧಿ ಯಲ್ಲೇ ಎಕೆ ಮೊಳೆಯಿತು? ಈ ಮುಖ್ಯ ಪ್ರಶ್ನೆಗಳಿಗೆ ಉತ್ತರವಿಷ್ಟೇ:

ಬ್ರಾಹ್ಮಣ- ಕ್ಷತ್ರಿಯ-ವೈಶ್ಯ(ಬನಿಯಾ)ರು ಕ್ರಿ.ಶ 185ರಿಂದ ವಿದ್ಯೆ-ಆಸ್ತಿ-ಅಧಿಕಾರಗಳ ಮೇಲೆ ಶೇ. 100ರಷ್ಟು ಏಕಸ್ವಾಮ್ಯವನ್ನು ಹೊಂದಿದ್ದರು. ಭಾರತದ ಸಕಲವೂ ಅವರಿಗೆ ಮೀಸಲಾಗಿತ್ತು. ಇನ್ನುಳಿದ ಶೂದ್ರ, ಅಸ್ಪಶ್ಯರು ಇವರಿಗೆ ಸೇವೆ ಮಾಡುತ್ತಿದ್ದರು.

ಇದು ಮನುಸ್ಮತಿಯನ್ನಾಧರಿಸಿದ ಕಾನೂನಾಗಿದ್ದು, ಭಾರತದ ಬಹುತೇಕ ರಾಜರೆಲ್ಲರೂ ಇದನ್ನು ಪಾಲಿಸಿದ್ದರು. ದಿಲ್ಲಿ ಸುಲ್ತಾನರು ಹಾಗೂ ಮೊಗಲರು ಕೂಡ ಇದನ್ನು ಬದಲಾಯಿಸುವ ಗೋಜಿಗೆ ಹೋಗಲಿಲ್ಲ. ಅದರೆ ಬ್ರಿಟಿಷರು ಹಾಗೇ ಸುಮ್ಮನಿರಲಿಲ್ಲ ಅತ್ಯಂತ ಆಧುನಿಕ ಹಾಗೂ ಪ್ರಜಾಪ್ರಭುತ್ವವಾದಿ ಧೋರಣೆಯುಳ್ಳ ಅವರು ಭಾರತದಲ್ಲೂ ಹಲವು ಮಹತ್ವದ ಸುಧಾರಣೆ ಮಾಡಿದರು. ಶಿಕ್ಷಣ-ಉದ್ಯೋಗ-ನ್ಯಾಯಾಲಯ, ಸಾರಿಗೆ ಸಂಪರ್ಕ ಮುಂತಾದ ಕ್ಷೇತ್ರಗಳಲ್ಲಿ ಅವರು ಅಗಾಧವಾದ ಬದಲಾವಣೆಯನ್ನು ತಂದರು. ಇವೆಲ್ಲವೂ ಬ್ರಾಹ್ಮಣ-ಬನಿಯಾಗಳು ಸಾವಿರಾರು ವರ್ಷಗಳಿಂದ ಭಾರತದ ಹಕ್ಕು-ಅಧಿಕಾರಗಳ ಮೇಲೆ ಹೊಂದಿದ್ದ ಏಕಸ್ವಾಮಕ್ಕೆ ಬಲವಾದ ಪೆಟ್ಟು ನೀಡಿದವು. ಇದರಿಂದಾಗಿ ಬ್ರಿಟಿಷರು ಈ ಹಿಂದಿನ ಇನ್ನಾವುದೇ ವಿದೇಶಿಯರಿಗಿಂತ ಅಪಾಯಕಾರಿಗಳಂತೆ ಬ್ರಾಹ್ಮಣ-ಬನಿಯಗಳಿಗೆ ಕಂಡರು. ಇದರ ಪರಿಣಾಮವೇ ಭಾರತದಲ್ಲಿ ಸ್ವಾತಂತ್ರ್ಯ ಚಳವಳಿಯ ಉಗಮವಾಯಿತು.

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top