ಪ್ರತಿ ದಿನ ನಿರ್ದಿಷ್ಟ ಸಮಯಕ್ಕೇ ದಣಿವಾಗುತ್ತಿದೆಯೇ...? ಎಚ್ಚರಿಕೆ, ಅದು ಈ ರೋಗದ ಸೂಚನೆಯಾಗಿರಬಹುದು...!

ಯಾವುದೇ ವ್ಯಕ್ತಿ ಎಷ್ಟೇ ಆರೋಗ್ಯವಂತನಾಗಿರಲಿ.....ಒಮ್ಮಿಮ್ಮೆ ತೀರ ಬಳಲಿಕೆಯನ್ನು ಅನುಭವಿಸುತ್ತಾನೆ ಅಲ್ಲವೇ? ಆರೋಗ್ಯವಂತ ವ್ಯಕ್ತಿಯ ಶರೀರ ಅತಿಯಾಗಿ ಶ್ರಮಿಸಿದಾಗ ಅಥವಾ ಮಾನಸಿಕ ಒತ್ತಡದಲ್ಲಿದ್ದಾಗ ಅದು ದಣಿವಿಗೆ ಕಾರಣವಾಗುತ್ತದೆ. ಆದರೆ ಬಳಲಿಕೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರೆ ಅದು ಅನಾರೋಗ್ಯದ ಸಂಕೇತವಾಗಬಹುದು.

ವಾಸ್ತವದಲ್ಲಿ ಬಳಲಿಕೆ ಹೆಚ್ಚಿನ ಕಾಯಿಲೆಗಳ ಲಕ್ಷಣಗಳಲ್ಲೊಂದಾಗಿದೆ. ಆದರೆ ಆಗಾಗ್ಗೆ ದಣಿವಾಗುತ್ತಿದ್ದರೆ ವೈದ್ಯರನ್ನು ಭೇಟಿಯಾದ ಹೊರತು ಅದು ಯಾವ ಕಾಯಿಲೆಯ ಲಕ್ಷಣ ಎನ್ನುವುದನ್ನು ನಿರ್ಧರಿಸುವುದು ಕಠಿಣವಾಗುತ್ತದೆ.

 ಮಧುಮೇಹ ಸಾಮಾನ್ಯ ಚಯಾಪಚಯ ಕಾಯಿಲೆ ಎನ್ನುವುದು ನಮಗೆ ಗೊತ್ತು. ವ್ಯಕ್ತಿ ವಿಶೇಷವಾಗಿ ಈ ರೋಗದ ಇತರ ಲಕ್ಷಣಗಳನ್ನೂ ಗಮನಿಸಿದ್ದರೆ ಮತ್ತು ದಿನದ ಒಂದು ನಿರ್ದಿಷ್ಟ ಅವಧಿಯಲ್ಲಿ ದಣಿವನ್ನು ಅನುಭವಿಸುತ್ತಿದ್ದರೆ ಅದು ಮಧುಮೇಹದ ಸೂಚನೆಯಾಗಿರುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿವೆ.

ವ್ಯಕ್ತಿಯು ಮಧುಮೇಹದಿಂದ ಬಳಲುತ್ತಿದ್ದಾಗ ರಕ್ತದಲ್ಲಿಯ ಸಕ್ಕರೆಯ ಮಟ್ಟವು ಅತಿಯಾಗಿರುತ್ತದೆ ಮತ್ತು ಈ ರೋಗಕ್ಕೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ. ವ್ಯಕ್ತಿ ದಿನದ ಮಧ್ಯಾವಧಿಯಲ್ಲಿ,ಅಂದರೆ ಮಧ್ಯಾಹ್ನ ಒಂದರಿಂದ ನಾಲ್ಕು ಗಂಟೆಯ ನಡುವೆ,ವಿಶೇಷವಾಗಿ ಊಟದ ಬಳಿಕ ದಣಿವನ್ನು ಅನುಭವಿಸುತ್ತಿದ್ದರೆ ಅದು ಆತ ಮಧುಮೇಹ ಹೊಂದಿದ್ದಾನೆ ಎನ್ನುವುದನ್ನು ಸೂಚಿಸಬಹುದು. ಏಕೆಂದರೆ ದಿನದ ಈ ಅವಧಿಯಲ್ಲಿ,ವಿಶೇಷವಾಗಿ ವ್ಯಕ್ತಿ ಆಗಷ್ಟೇ ಊಟವನ್ನು ಸೇವಿಸಿದ್ದರೆ ರಕ್ತದಲ್ಲಿ ಮೊದಲೇ ಹೆಚ್ಚಿನ ಮಟ್ಟದಲ್ಲಿರುವ ಸಕ್ಕರೆಯ ಪ್ರಮಾಣ ಇನ್ನಷ್ಟು ಏರಿಕೆಯಾಗುತ್ತದೆ. ಮಧುಮೇಹಿಗಳಲ್ಲಿ ಇನ್ಸುಲಿನ್ ಮಟ್ಟ ಕಡಿಮೆಯಿರುವುದರಿಂದ ಈ ಹೆಚ್ಚುವರಿ ಸಕ್ಕರೆಯನ್ನು ಸಂಸ್ಕರಿಸಲು ಶರೀರವು ಕಠಿಣವಾಗಿ ಶ್ರಮಿಸಬೇಕಾಗುತ್ತದೆ. ಇದು ವ್ಯಕ್ತಿಯು ಯಾವುದೇ ಶ್ರಮದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರದಿದ್ದರೂ ಆತನಲ್ಲಿ ದಿಢೀರ್ ದಣಿವಿಗೆ ಕಾರಣವಾಗುತ್ತದೆ.

 ದಿನದ ಯಾವುದೇ ಹೊತ್ತಿನ ಊಟದ ನಂತರ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಇನ್ನಷ್ಟು ಹೆಚ್ಚುವುದರಿಂದ ಮಧುಮೇಹ ದಣಿವನ್ನುಂಟು ಮಾಡುತ್ತದೆ ನಿಜ. ಆದರೆ ದಿನದ ಮಧ್ಯಾವಧಿಯಲ್ಲಿ ದಣಿವಾಗುವುದು ಮಧುಮೇಹದ ಪ್ರಬಲ ಲಕ್ಷಣವಾಗುತ್ತದೆ. ಏಕೆಂದರೆ ಮಧುಮೇಹ ಇಲ್ಲದವರಲ್ಲಿ ಈ ಅವಧಿಯಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟವು ತುಲನಾತ್ಮಕವಾಗಿ ಕಡಿಮೆಯಾಗಿರುತ್ತದೆ ಮತ್ತು ಊಟದ ಬಳಿ ಅವರಲ್ಲಿ ದಣಿವು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಈ ಅವಧಿಯಲ್ಲಿ ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಏರಿಕೆಯು ವ್ಯಕ್ತಿಯು ಮಧುಮೇಹದಿಂದ ಪೀಡಿತನಾಗಿರಬಹುದು ಎನ್ನುವುದಕ್ಕೆ ಒತ್ತು ನೀಡುತ್ತದೆ.

 ಆದರೆ ದಿನದ ಮಧ್ಯಾವಧಿಯಲ್ಲಿ ದಣಿವು ಕಾಣಿಸಿಕೊಳ್ಳುವ ಇದೊಂದೇ ಲಕ್ಷಣವು ವ್ಯಕ್ತಿಗೆ ಮಧುಮೇಹವಿದೆ ಎನ್ನುವುದನ್ನು ಕರಾರುವಾಕ್ಕಾಗಿ ನಿರ್ಧರಿಸಲು ಸಾಲುವುದಿಲ್ಲ. ಇದರೊಂದಿಗೆ ಅತಿಯಾದ ಬಾಯಾರಿಕೆ,ಪದೇ ಪದೇ ಮೂತ್ರವಿಸರ್ಜನೆ, ದಿಢೀರ್ ಆಗಿ ದೇಹದ ತೂಕ ಇಳಿಕೆ,ಮಸುಕಾದ ದೃಷ್ಟಿ,ಹಸಿವಿನಲ್ಲಿ ಏರಿಳಿತಗಳು,ಕುಂದಿದ ನಿರೋಧಕ ಶಕ್ತಿ,ಗಾಯಗಳು ಮಾಯಲು ವಿಳಂಬ,ಕಾಯಿಲೆಗಳು ನಿಧಾನವಾಗಿ ವಾಸಿಯಾಗುವುದು,ಕುಂದಿದ ಚಯಾಪಚಯ, ಕೆರಳುವಿಕೆ,ಚರ್ಮದಲ್ಲಿ ತುರಿಕೆ,ಕೈಕಾಲುಗಳು ಮರಗಟ್ಟಿದ ಮತ್ತು ಜುಮುಗುಡುವ ಅನುಭವ ಇತ್ಯಾದಿಗಳಂತಹ ಒಂದೆರಡು ಲಕ್ಷಣಗಳೂ ಇದ್ದರೆ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top