ಮುಪ್ಪು: ನಿರ್ವಹಣೆ ಹೇಗೆ?

ಹುಟ್ಟು ಸಾವುಗಳ ನಡುವೆ, ಬಾಲ್ಯ, ಯೌವ್ವನ, ಮತ್ತು ಮುಪ್ಪುಒಂದರ ಹಿಂದೊಂದು ಬರುವುದು ಸಹಜವಾದರೂ, ಮುಪ್ಪು ಬರುವುದು ಬೇಡ ಎಂದೇ ನಮ್ಮೆಲ್ಲರ ಬಯಕೆ. ಮುಪ್ಪುಎಂದಾಕ್ಷಣ, ಸುಕ್ಕುಗಟ್ಟಿದ ಚರ್ಮ, ಸವೆದು ಹೋದ ದೇಹ, ಬಾಗಿದ ಬೆನ್ನು, ಕಣ್ಣು ಕಾಣದ, ಕಿವಿಕೇಳದ; ಅಸಹಾಯಕತೆಯ ಮೂರ್ತಿಯಾಗಿ ನಿಂತ ಜೀವಿಯ ಚಿತ್ರ ಕಣ್ಮುಂದೆ ನಿಲ್ಲುತ್ತದೆ. ವಾಸಿಯಾಗದ ರೋಗದಿಂದ ನರಳುತ್ತಾ, ಎಲ್ಲರ ಉದಾಸೀನ, ತಿರಸ್ಕಾರಕ್ಕೆ ಗುರಿಯಾಗಿ, ಕಂಡವರ ಕರುಣೆಯ ವಸ್ತುವಾಗಿ, ಹೆತ್ತ ಮಕ್ಕಳಿಗೆ, ಎಲ್ಲರಿಗೆ ಹೊರೆಯಾಗಿ ಬದುಕುವ ಮುಪ್ಪಿನ ಜೀವನ ನೆನೆದವರ ಮೈ ಮೇಲೆ ಮುಳ್ಳು ಬರಿಸುತ್ತದೆ. ದೇಹದ ಸಾಮರ್ಥ್ಯ ಕುಂದಿ ಹೋಗುವುದರ ಜೊತೆಗೆ ಮನಸ್ಸಿನ ಸಾಮರ್ಥ್ಯವೂ ಕುಂದಿ ನೆನಪು, ಬುದ್ಧಿ ಶಕ್ತಿ ಮತ್ತು ಚತುರತೆಗಳು ಅಡ್ಡಾದಿಡ್ಡಿಯಾಗಿ ‘‘ಪಾಪ ಅರಳು ಮರಳು’’ ಎನಿಸಿಕೊಳ್ಳುವುದಕ್ಕೆ ಯಾರೂ ಇಷ್ಟಪಡುವುದಿಲ್ಲ.

‘‘ಗಟ್ಟಿಮುಟ್ಟಿಯಾಗಿ ಇದ್ದಂತೆಯೇ, ನೋಯಿಸದೆ, ನರಳಿಸದೆ-ಒಳ್ಳೆಯ ಸಾವು ಕೊಡಪ್ಪಾ’’ ಎಂದು ಹಲವರು ಭಗವಂತನಲ್ಲಿ ಮೊರೆಯಿಡುತ್ತಾರೆ. ಹೀಗೆ ಯಾರೂ ಇಷ್ಟಪಡದ, ಆದರೆ ಅನಿವಾರ್ಯವಾಗಿ ಬರುವ ಮುಪ್ಪು, ಮನುಷ್ಯನ ಅಧ್ಯಯನ ಶೀಲತೆಗೆ, ಸಾಹಸ ಪ್ರವೃತ್ತಿಗೆ ಸವಾಲಾಗಿ ಮುಂದುವರಿದಿದೆ. ಮುಪ್ಪುಏಕೆ ಬರುತ್ತದೆ. ಅದನ್ನು ತಡೆಗಟ್ಟಲು ಸಾಧ್ಯವೇ ಎಂದು ಅನಾದಿ ಕಾಲದಿಂದ ಮಾನವ ಚಿಂತಿಸುತ್ತಾ ಬಂದಿದ್ದಾನೆ. ಕಾಯಕಲ್ಪದ ಕಲ್ಪನೆ ಇಂದು ನಿನ್ನೆಯದಲ್ಲ. ಮುಪ್ಪಿನ ಹಿಡಿತದಿಂದ ಬಿಡುಗಡೆ ಹೊಂದಿ, ಮತ್ತೆ ಯೌವ್ವನದ ತೆಕ್ಕೆಗೆ ಬೀಳುವ ಯಯಾತಿ ನಮ್ಮೆಲ್ಲರ ಆಸೆಯ ಪ್ರತೀಕ.

ಮುಪ್ಪುಕೇವಲ ಸಮಸ್ಯೆ ಸಂಕಷ್ಟಗಳನ್ನು ಮಾತ್ರ ತರುವುದಿಲ್ಲ. ಜೊತೆಗೆ ಜೀವನದುದ್ದಕ್ಕೂ ಅನುಭವಿಸಿದ ಅನುಭವಗಳ, ಸುಖ ದುಃಖಗಳ ನಡುವೆಯಿಂದ ಹುಟ್ಟಿ ಬರುವ ಅಮೃತವನ್ನೂ ನಮಗೆ ನೀಡಿ, ನಮ್ಮ ಬಾಳಿಗೆ ಒಂದು ಅರ್ಥವನ್ನು ತರುತ್ತದೆ ಎಂಬುದು ಗಮನಾರ್ಹ. ಕೆಲವರು ವೃದ್ಧಾಪ್ಯದಲ್ಲಿ ತಮ್ಮ ಜೀವನದ ಅತ್ಯುನ್ನತ ಮಟ್ಟವನ್ನು ಮುಟ್ಟುತ್ತಾರೆ. ಅದುವರೆಗೆ ಸಾಧಿಸದ್ದನ್ನು ಸಾಧಿಸುತ್ತಾರೆ.

ಮುಪ್ಪುಎಂದರೇನು?

ಮನುಷ್ಯನಿಗೆ ಅರವತ್ತು ವರ್ಷಗಳ ನಂತರ ಮುಪ್ಪು ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ.ಸೂತ್ರದಂತೆ ನಮ್ಮ ದೇಶದಲ್ಲಿ ಪ್ರತಿ ನೂರು ಜನರಿಗೆ ಆರು ಮಂದಿ ವೃದ್ಧರಿದ್ದಾರೆ. ಅಂದರೆ ಅವರ ಸಂಖ್ಯೆ ಐದು ಕೋಟಿಗೂ ಹೆಚ್ಚು. ಆರೋಗ್ಯ ಸೌಲಭ್ಯ, ಸಾಂಕ್ರಾಮಿಕ ರೋಗಗಳ ಹತೋಟಿ, ಮರಣ ಸಂಖ್ಯೆಯ ಇಳಿಮುಖ - ಈ ಎಲ್ಲ ಕಾರಣಗಳಿಂದ, ಜಗತ್ತಿನ ಇತರ ಕಡೆಗಳಂತೆ, ನಮ್ಮಲ್ಲೂ ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದು 2020ನೇ ಇಸವಿಯ ವೇಳೆಗೆ ಅದು ಏಳು ಕೋಟಿ ಮುಟ್ಟುವ ಅಂದಾಜಿದೆ. ಜನಸಂಖ್ಯೆಯ ಗಮನಾರ್ಹ ಭಾಗವಾಗಿರುವ ಈ ವೃದ್ಧರ ಲಕ್ಷಣಗಳೇನು ನೋಡೋಣ.

ಮುಪ್ಪಿನ ಲಕ್ಷಣಗಳನ್ನು ಶಾರೀರಿಕ ಮತ್ತು ಮಾನಸಿಕ ಎಂದು ವಿಂಗಡಿಸಲಾಗುತ್ತದೆ.

ಶಾರೀರಿಕ ಲಕ್ಷಣಗಳು:

ಮುಪ್ಪಿನ ಶಾರೀರಿಕ ಬದಲಾವಣೆಗಳು ಕಣ್ಣಿಗೆ ಕಟ್ಟುತ್ತವೆ. ಚರ್ಮ ತೆಳುವಾಗಿ, ಸುಕ್ಕುಗಟ್ಟುತ್ತವೆ.

ಮಾಂಸ ಖಂಡಗಳು ನಶಿಸಿ ಹರಳೆಯಂತಾಗುತ್ತದೆ. ಹಲ್ಲುಗಳು ಬಿದ್ದು ಹೋಗುತ್ತವೆ. ಕಣ್ಣು ಮಂಜಾಗು ತ್ತದೆ. ಕಿವಿ ಮಂದವಾಗುತ್ತವೆ. ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಅಲ್ಪಆಘಾತಕ್ಕೂ ಮೂಳೆ ಮುರಿಯುತ್ತದೆ. ಕೀಲುಗಳು ಸವೆದು, ನೋಯಲಾರಂಭಿಸುತ್ತದೆ. ದೇಹದ ಚಲನೆ ನಿಧಾನವಾಗಿ, ಸಮತೋಲನ ತಪ್ಪುತ್ತದೆ. ಕೈಕಾಲುಗಳಲ್ಲಿ ಶಕ್ತಿ ಉಡುಗಿ ನಡುಗಲಾರಂಭಿಸುತ್ತವೆ.

ಶರೀರದ ಪ್ರತಿಯೊಂದು ಅಂಗಾಂಗದ ಜೀವಕೋಶಗಳಲ್ಲಿ ಬದಲಾವಣೆ ಕಾಣತೊಡಗುತ್ತದೆ. ಕ್ರಿಯಾಪೂರ್ಣ-ಜೀವಕೋಶಗಳ ಸಂಖ್ಯೆ ಕಡಿಮೆಯಾಗ ತೊಡಗುತ್ತದೆ. ಕಿಣ್ವಗಳ ಕ್ರಿಯಾಶೀಲತೆಯಲ್ಲಿ ನ್ಯೂನತೆಯುಂಟಾಗಿ, ಪ್ರೊಟೀನ್ ಉತ್ಪತ್ತಿಗೆ ಧಕ್ಕೆಯಾಗುತ್ತದೆ. ತತ್ಫಲವಾಗಿ ಜೀವಕೋಶಗಳು ಸಾಯತೊಡಗುತ್ತವೆ. ಹೊಸ ಜೀವಕೋಶಗಳ ಉತ್ಪಾದನೆ ಸರಿ ಪ್ರಮಾಣದಲ್ಲಿ ಆಗದೇ ಹೋಗುವುದರಿಂದ ಪ್ರತಿ ಅಂಗಾಂಗದ ಕಾರ್ಯ ಸಾಮರ್ಥ್ಯ ಕುಂದತೊಡಗುತ್ತದೆ. ಅಂಗಾಂಗಗಳು ನಶಿಸಿ, ಸಣ್ಣಗಾಗ ತೊಡಗುತ್ತವೆ. ತತ್ಪರಿಣಾಮವಾಗಿ ಹೃದಯದಿಂದ ಹೊರಬರುವ ರಕ್ತದ ಪ್ರಮಾಣ ಕುಗ್ಗುತ್ತದೆ. ಮೂತ್ರ ಕೋಶದೊಳಕ್ಕೆ, ಮಿದುಳಿಗೆ ಹರಿಯುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಆಮ್ಲಜನಕ ಉಪಯೋಗದ ವೇಗ ತಗ್ಗುತ್ತದೆ. ಮಿದುಳಿನ ನರಕೋಶಗಳ ಇಳಿಮುಖವಾಗುತ್ತದೆ. ಮಿದುಳಿನ ಗಾತ್ರ, ತೂಕ ಇಳಿಯುತ್ತದೆ. ಮಿದುಳಿನಲ್ಲಿ ನಾರಿನಂತಹ ವಸ್ತು ಹೆಚ್ಚುತ್ತದೆ. ರಕ್ತನಾಳಗಳು ಪೆಡುಸಾಗಿ, ರಕ್ತಸಂಚಾರ ನಿಧಾನವಾಗುತ್ತದೆ, ರಕ್ತದ ಒತ್ತಡ ಹೆಚ್ಚುತ್ತದೆ. ಹೃದಯ ಈ ಏರು ಒತ್ತಡದ ವಿರುದ್ಧ ಕೆಲಸ ಮಾಡಿ ದಣಿಯುತ್ತದೆ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top