ನಿಮ್ಮ ಯಕೃತ್ತು ಆರೋಗ್ಯವಾಗಿರಬೇಕೇ?: ಹಾಗಿದ್ದರೆ ಕ್ಯಾಬೇಜ್ ತಿನ್ನಿ | Vartha Bharati- ವಾರ್ತಾ ಭಾರತಿ

ನಿಮ್ಮ ಯಕೃತ್ತು ಆರೋಗ್ಯವಾಗಿರಬೇಕೇ?: ಹಾಗಿದ್ದರೆ ಕ್ಯಾಬೇಜ್ ತಿನ್ನಿ

ನೀವು ಕ್ಯಾಬೇಜ್ ತಿನ್ನುವುದನ್ನು ಇಷ್ಟಪಡುತ್ತೀರಾ? ಇಲ್ಲದಿದ್ದರೆ ನಿಮ್ಮ ಯಕೃತ್ತಿನ ಸಲುವಾಗಿ ಅದರ ಸೇವನೆಯನ್ನು ಆರಂಭಿಸಿ,ಏಕೆಂದರೆ ಕ್ಯಾಬೇಜ್ ಸೇವನೆಯು ಮಾರಣಾಂತಿಕ ಪರಿಣಾಮಗಳನ್ನು ಬೀರಬಲ್ಲ ಫ್ಯಾಟಿ ಲಿವರ್ ಅಥವಾ ಯಕೃತ್ತು ದೊಡ್ಡದಾಗುವ ರೋಗವನ್ನು ತಡೆಯುತ್ತದೆ ಎನ್ನುವುದನ್ನು ಸಂಶೋಧನೆಯೊಂದು ತೋರಿಸಿದೆ. ಕ್ಯಾಬೇಜ್,ಕಾಲಿಫ್ಲವರ್,ಬ್ರೊಕೊಲಿಯಂತಹ ಒಂದು ವರ್ಗಕ್ಕೆ ಸೇರಿದ ತರಕಾರಿಗಳಲ್ಲಿರುವ ಇಂಡೋಲ್ ಎಂಬ ನೈಸರ್ಗಿಕ ಸಂಯುಕ್ತವು ಮದ್ಯಪಾನಕ್ಕೆ ಸಂಬಂಧಿಸದ ಫ್ಯಾಟಿ ಲಿವರ್ ರೋಗ (ಎನ್‌ಎಎಫ್‌ಎಲ್‌ಡಿ)ದ ಅಪಾಯವನ್ನು ತಗ್ಗಿಸುತ್ತದೆ ಎನ್ನುವುದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. ಎನ್‌ಎಎಫ್‌ಎಲ್‌ಡಿಯನ್ನು ತಡೆಯಲು ಮತ್ತು ಈಗಾಗಲೇ ಈ ರೋಗದಿಂದ ಬಳಲುತ್ತಿರುವವರು ಪರಿಣಾಮಕಾರಿಯಾಗಿ ಚೇತರಿಸಿಕೊಳ್ಳಲು ಅಧಿಕ ಇಂಡೋಲ್ ಉತ್ಪಾದನೆಯ ಸಾಮರ್ಥ್ಯವಿರುವ ಆಹಾರಗಳ ಸೇವನೆ ಅಗತ್ಯವಾಗಿದೆ.

ಆಹಾರ ಕ್ರಮದಲ್ಲಿ ಬದಲಾವಣೆಯು ಕಾಯಿಲೆಯೊಂದನ್ನು ತಡೆಯಲು ಅಥವಾ ಅದಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗಿಸುವ ಜೊತೆಗೆ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ ಎನ್ನುವುದಕ್ಕೆ ಇದು ಇನ್ನೊಂದು ಉದಾಹರಣೆಯಾಗಿದೆ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಅಮೆರಿಕದ ಟೆಕ್ಸಾಸ್ ಎ ಆ್ಯಂಡ್ ಎಂ ಅಗ್ರಿಲೈಫ್ ರೀಸರ್ಚ್‌ನ ಚಾವೊಡೊಂಗ್ ವು ವರದಿಯಲ್ಲಿ ಹೇಳಿದ್ದಾರೆ.

  ಕೆಲವೊಮ್ಮೆ ಸ್ಯಾಚ್ಯುರೇಟೆಡ್ ಫ್ಯಾಟ್‌ಗಳು,ಅನಾರೋಗ್ಯಕರ ಆಹಾರಗಳು ಮತ್ತು ಸಂಸ್ಕರಿತ ಆಹಾರಗಳ ಅತಿಯಾದ ಸೇವನೆ ಯಕೃತ್ತಿನ ಮೇಲೆ ಕೊಬ್ಬು ಸಂಗ್ರಹಗೊಳ್ಳಲು ಕಾರಣವಾಗುತ್ತದೆ ಮತ್ತು ಇದು ಎನ್‌ಎಎಫ್‌ಎಲ್‌ಡಿಯನ್ನು ಉಂಟು ಮಾಡುತ್ತದೆ. ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಮಾರಣಾಂತಿಕ ಯಕೃತ್ತಿನ ಕ್ಯಾನ್ಸರ್ ಅಥವಾ ಯಕೃತ್ತಿನ ಸಿರೊಸಿಸ್‌ನಂತಹ ಗಂಭೀರ ಯಕೃತ್ತಿನ ಕಾಯಿಲೆಗಳಿಗ ಕಾರಣವಾಗುತ್ತವೆ ಎಂದೂ ವು ಹೇಳಿದ್ದಾರೆ.

  ವಿಜ್ಞಾನಿಗಳು ಯಕೃತ್ತಿನ ಆರೋಗ್ಯದ ಮೇಲೆ ಇಂಡೋಲ್‌ನ ಪರಿಣಾಮ ಮತ್ತು ಎನ್‌ಎಎಫ್‌ಎಲ್‌ಡಿ ಚಿಕಿತ್ಸೆಯಲ್ಲಿ ಅದರ ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ನಡೆಸಿದ್ದರು. ಹೆಚ್ಚಿನ ಬಿಎಂಐ ಹೊಂದಿರುವವರಲ್ಲಿ ಇಂಡೋಲ್ ಪ್ರಮಾಣ ಕಡಿಮೆ ಇರುವುದನ್ನೂ ಸಂಶೋಧನೆಯು ಬೆಳಕಿಗೆ ತಂದಿದೆ. ಇಂಡೋಲ್ ಉರಿಯೂತವನ್ನುಂಟು ಮಾಡುವ ಶರೀರದ ಜೀವಕೋಶಗಳ ಮೇಲೆ ಪರಿಣಾಮವನ್ನು ಬೀರುತ್ತದೆ ಮತ್ತು ಯಕೃತ್ತಿನಲ್ಲಿ ಸಂಗ್ರಹಗೊಳ್ಳುವ ಕೊಬ್ಬಿನ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದೂ ಸಂಶೋಧಕರ ತಂಡವು ತಿಳಿಸಿದೆ.

ಫ್ಯಾಟಿ ಲಿವರ್ ರೋಗವನನ್ನು ತಡೆಗಟ್ಟಲು ಜಂಕ್‌ಫುಡ್‌ಗಳು ಅಥವಾ ಸಾತ್ಯುರೇಟೆಡ್ ಫ್ಯಾಟ್‌ಗಳನ್ನು ಒಳಗೊಂಡಿರುವ ಆಹಾರಗಳ ಅತಿಯಾದ ಸೇವನೆಯಿಂದ ದೂರವಿರಬೇಕು. ಏಕೆಂದರೆ ಈ ಆಹಾರಗಳು ವಿಭಜನೆಗೊಳ್ಳುವುದಿಲ್ಲ ಮತ್ತು ಯಕೃತ್ತಿನ ಮೇಲೆ ಸಂಗ್ರಹಗೊಳ್ಳುತ್ತವೆ. ಕ್ಯಾಬೇಜ್ ಅಥವಾ ಆ ವರ್ಗದ ತರಕಾರಿಗಳ ಸೇವನೆಯಿಂದ ಯಕೃತ್ತಿನ ಸಮಸ್ಯೆಗಳನ್ನು ಸುಲಭವಾಗಿ ತಡೆಯಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top