ಈ ದೇಶದಲ್ಲಿ ನೆಹರೂ, ಗಾಂಧಿ, ಇಂದಿರಾ ಗಾಂಧಿ, ವಾಜಪೇಯಿ, ಸೋನಿಯಾ, ನರೇಂದ್ರ ಮೋದಿ, ತೆಂಡುಲ್ಕರ್ ಹೆಸರನ್ನು ಕೇಳದವರು ಹುಡುಕಿದರೆ ಕಾಣಬಹುದು. ಆದರೆ, ಟಾಟಾ ಹೆಸರನ್ನು ಕೇಳದವರು ಯಾರೂ ಇಲ್ಲ. ಅಷ್ಟರಮಟ್ಟಿಗೆ ಭಾರತೀಯರಲ್ಲಿ ಮತ್ತು ಭಾರತೀಯ ಉದ್ಯಮರಂಗದಲ್ಲಿ ಟಾಟಾ ಹೆಸರು ಮನೆಮಾತು. ಆರ್ಥಿಕ ಪತ್ರಿಕೆಗಳು ಬಣ್ಣಿಸುವಂತೆ, ಇದು ಖಚ್ಝಠಿ ಟ ಖಟ್ಛಠಿಡಿಚ್ಟಛಿ ಉದ್ಯಮವಾಗಿದೆ. ಇದು 1868 ರಲ್ಲಿ ಸರ್ ಜಮ್ ಶೇಟ್‌ಜಿ ಟಾಟಾರವರಿಂದ ಸ್ಥಾಪಿತಗೊಂಡ, ಜಗತ್ತಿನಾಧ್ಯಂತ ಆರು ಖಂಡಗಳಲ್ಲಿ, 100 ದೇಶಗಳಲ್ಲಿ ಕಾರ್ಯ ಚಟುವಟಿಕೆ ಹೊಂದಿದ, ಸುಮಾರು 6 ಲಕ್ಷ ಉದ್ಯೋಗಿಗಳನ್ನು ಹೊಂದಿದ ಬೃಹತ್ ಉದ್ಯಮ. 2014-15 ರಲ್ಲಿ ಈ ಕಂಪೆನಿಯ ಟರ್ನ್ ಓವರ 108.76 ಬಿಲಿಯನ್ ಡಾಲರ್ ಅಗಿದ್ದು, ಇದರ ಶೇ.70ಕ್ಕಿಂತ ಹೆಚ್ಚು ಆದಾಯ ಸಾಗರೋತ್ತರ ಚಟುವಟಿಕೆಗಳಿಂದಲೇ ಬರುತ್ತದೆ. ಇದು 29 ಸಹ-ಪಬ್ಲಿಕ್ ಲಿಮಿಟೆಡ್ ಕಂಪೆನಿಗಳನ್ನು ಹೊಂದಿದ್ದು, ಮಾರ್ಚ್ 2016ರ ಹೊತ್ತಿಗೆ ಇದರ ಞಚ್ಟಛಿಠಿ ್ಚಜಿಠಿಚ್ಝಜ್ಢಿಠಿಜಿಟ್ಞ  116.41 ಬಿಲಿಯನ್ ಡಾಲರ್ ಗೆ ಏರಿತ್ತು. ಚೀನಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳೂ ಸೇರಿ ಸುಮಾರು 26 ದೇಶಗಳಲ್ಲಿ ಅದು ತನ್ನ ಉಕ್ಕು ಉದ್ಯಮವನ್ನು ಹೊಂದಿದ್ದು, ಜಗತ್ತಿನಲ್ಲಿ ಉಕ್ಕು ಉತ್ಪಾದಿಸುವ ದೇಶಗಳಲ್ಲಿ 11ನೆ ಸ್ಥಾನದಲ್ಲಿ ಇದೆ.
            ಇಂತಹ ಉದ್ಯಮ ಇಂದು ಜಗತ್ತಿನಾದ್ಯಂತ ಸುದ್ದಿಯಲ್ಲಿದೆ. ಇಂತಹ ಸಂದರ್ಭಗಳಲ್ಲಿ ಜನಸಾಮಾನ್ಯರು ಭಾವಿಸುವಂತೆ ಈ ಸುದ್ದಿ ಭ್ರಷ್ಟಾಚಾರ, ಹಣಕಾಸು ಅವ್ಯವಹಾರ ಗಳಿಗೆ ಸಂಬಂಧಿಸಿದ್ದಲ್ಲ. ಅದು 2007ರಲ್ಲಿ ಅತಿ ತುರುಸಿನ ಅಂತಾರಾಷ್ಟ್ರೀಯ ಬಿಡ್‌ನಲ್ಲಿ ಇಂಗ್ಲೆಂಡ್‌ನ ಕೋರಸ್ ಸ್ಟೀಲ್ ಕಂಪೆನಿಯನ್ನು ( ಈ ಕಂಪೆನಿಯನ್ನು ಟಾಟಾ ಖರೀದಿಸಿದ ಮೇಲೆ ಅದನ್ನು ಟಾಟಾ ಸ್ಟೀಲ್ ಯುರೋಪ್ ಎಂದು ಬದಲಿಸಲಾಗಿದೆ) 40,000 ಕೋಟಿಗೆ ಖರೀದಿಸಿದ್ದು, ಈಗ ಅದು ನಷ್ಟ ಅನುಭವಿಸುತ್ತಿದ್ದು, ನಿರ್ವಹಿಸಲಾಗದೇ ಮಾರುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಇಂಗ್ಲೆಂಡ್‌ನ ಗ್ರೇಬುಲ್ ಕ್ಯಾಪಿಟಲ್ ಸಂಸ್ಥೆ ಜೊತೆ ಆರಂಭಿಕ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರಾಟದ ಪ್ರಕ್ರಿಯೆ ಒಂದೆರಡು ತಿಂಗಳಿನಲ್ಲಿ ಪೂರ್ಣಗೊಂಡು ಟಾಟಾ ಸ್ಟೀಲ್ ಇಂಗ್ಲೆಂಡ್‌ನಿಂದ ಕಾಲು ಕೀಳುತ್ತದೆ. ಅಂದು, ಭಾರತದಂತಹ ಅಭಿವೃದ್ಧ್ದಿ ಶೀಲ ದೇಶ, ಬೃಹತ್ ಮುಂದುವರಿದ ದೇಶಗಳನ್ನು ಹಿಂದೂಡಿ, ಈ ಕಂಪೆನಿಯನ್ನು ಖರೀದಿಸಿದ್ದನ್ನು ಜಗತ್ತಿನ ಉದ್ಯಮ ರಂಗ ನಂಬಲಾಗದೇ ನಂಬಿತ್ತು. 2009 ರಿಂದ 2013ರ ವರೆಗೆ ಈ ಕಂಪೆನಿ ಚೆನ್ನಾಗಿ ನಡೆಯುತ್ತಿತ್ತು. ಉದ್ಯಮ ನಿರ್ವಹಣೆಯಲ್ಲಿ ಟಾಟಾ ಪ್ರಶ್ನಾತೀತ ಮತ್ತು ಎತ್ತಿದ ಕೈ. ಟಾಟಾ ಕೈಯಲ್ಲಿ ಯಾವ ಉದ್ಯಮವೂ ನಷ್ಟ ಹೊಂದಿದ ದಾಖಲೆಗಳಿಲ್ಲ. ಟಾಟಾ ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಎಳೆದುಕೊಂಡ ಉದಾಹರಣೆಗಳಿಲ್ಲ. ಆದರೂ ಟಾಟಾ ಏಕೆ ಈ ನಿರ್ಧಾರ ಕೈಕೊಂಡರು ಎನ್ನುವುದು ಜಗತ್ತಿನಾದ್ಯಂತ ಚರ್ಚೆಯ ವಿಷಯವಾಗಿದೆ.
                ಉದ್ಯಮಿಗಳು, ರಾಜಕಾರಿಣಿಗಳು, ಔದ್ಯಮಿಕ ಪಂಡಿತರು ಮತ್ತು ಆರ್ಥಿಕ ಮಾಧ್ಯಮದವರು ಏನೇ ಅಭಿಪ್ರಾಯ ವ್ಯಕ್ತ ಮಾಡಲಿ, ಇದು ‘‘ಚೀನಾ ಪರಿಣಾಮ’’ ಎಂದು ವಿಶ್ಲೇಷಕರು ಭಾವಿಸುತ್ತಾರೆ. 2014-15 ರಲ್ಲಿ ಚೀನಾ ಭಾರೀ ಪ್ರಮಾಣದಲ್ಲಿ ಉಕ್ಕನ್ನು ಉತ್ಪಾದಿಸಿದ್ದು, ಸುಮಾರು 44.10 ಕೋಟಿ ಟನ್ ಉಕ್ಕನ್ನು, ಅರ್ಧ ದರದಲ್ಲಿ ಯುರೋಪ್‌ನಲ್ಲಿ ಮಾರಿದ್ದು, ಇದು ಟಾಟಾ ಸ್ಟೀಲ್‌ಗೆ ಹೊಡೆತ ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಏರುತ್ತಿರುವ ಉತ್ಪಾದನಾ ವೆಚ್ಚ, ಅಸ್ಥಿರ ಕರೆನ್ಸಿ ಮೌಲ್ಯ, ಕಂಪೆನಿ ಪ್ರತಿದಿನ ಸುಮಾರು 9 ಕೋಟಿ ನಷ್ಟ ಅನುಭವಿಸುವಂತಾಯಿತು. ಈ ನಷ್ಟವನ್ನು ಸರಿದೂಗಿಸಲು 2015ರಲ್ಲಿ 500 ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿತು. ಮತ್ತು 2016 ರಲ್ಲಿ ಸುಮಾರು 1000 ಕಾರ್ಮಿಕರನ್ನು ತೆಗೆಯುವ ವಿಚಾರದಲ್ಲಿತ್ತು. ಇಂಗ್ಲೆಂಡ್‌ನಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದು ಅಷ್ಟು ಸುಲಭವಲ್ಲ. ಈ ನಿಟ್ಟಿನಲ್ಲಿ ಕಾನೂನು ತುಂಬಾ ಬಿಗಿಯಾಗಿದೆ. ಹಾಗೆಯೇ ಕಾನೂನಿನ ಅರ್ಥೈಸುವಿಕೆಯಲ್ಲಿಯೂ ತುಂಬಾ ನಿಖರತೆ ಮತ್ತು ಸ್ಪಷ್ಟತೆ ಇದೆ. ಈ ಕಂಪೆನಿಯಲ್ಲಿ 25,000 ನೇರ ಮತ್ತು 40,000 ಪರೋಕ್ಷ ಸಿಬ್ಬಂದಿಯಿದ್ದು, ಟಾಟಾ ಸ್ಟೀಲ್‌ನ ಒಟ್ಟು 75,000 ಕೋಟಿ ಸಾಲದಲ್ಲಿ 26,000 ಕೋಟಿ ಟಾಟಾ ಸ್ಟೀಲ್ ಯುರೋಪ್‌ಗೆ ಸಂಬಂಧ ಪಟ್ಟಿದೆ. ಟಾಟಾ ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳುವುದಿಲ್ಲ. ನಿರ್ಣಯ ಯಾವುದೇ ಇರಲಿ ಅದರ ಹಿಂದೆ ಸಾಧ್ಯತೆ-ಭಾದ್ಯತೆಗಳ ಮ್ಯಾರಥಾನ್ ಚಿಂತನ ಮಂಥನ ಇರುತ್ತದೆ. ಅವರ ಹಿಂದೆ ಬಲವಾದ ಮತ್ತು ನಂಬಲರ್ಹ ಠಿಜ್ಞಿ ಠಿಚ್ಞ ಇರುತ್ತದೆ. ತಮ್ಮ ಸಮೂಹ ಕಂಪೆನಿಯ ವರ್ಚಸ್ಸಿಗೇ ಧಕ್ಕೆ ತರುವ, ಇಂತಹ ನಿರ್ಣಯ ತೆಗೆದುಕೊಳ್ಳಬೇಕಾದರೆ, ಅವರು ಈ ಕಂಪೆನಿಯನ್ನು ಮುಂದುವರಿಸದಿರುವುದರಲ್ಲಿ ಅರ್ಥಪೂರ್ಣ ಮತ್ತು ದೂರದರ್ಶಿತ್ವದ ಕಾರಣಗಳನ್ನು ಕಂಡಿರಬೇಕು ಅಥವಾ ಬೇರೆ ಯೋಜನೆಗೆ ಅಡಿಗಲ್ಲನ್ನು ಸಿದ್ಧಪಡಿಸುತ್ತಿರಬೇಕು. ಅವರು ಮನಸ್ಸು ಮಾಡಿದ್ದರೆ ಇಂಗ್ಲೆಂಡ್‌ಗೆ ಹೋಗಿ ಕಾರ್ಖಾನೆಯನ್ನು ಖರೀದಿಸುವುದಕ್ಕಿಂತ, ಭಾರತದಲ್ಲಿಯೇ ಗ್ರೀನ್ ಫೀಲ್ಡ್ ಸ್ಟೀಲ್ ಕಂಪೆನಿಯನ್ನು ಸ್ಥಾಪಿಸಬಹುದಿತ್ತು. ಟಾಟಾರಂತಹ ಅನುಭವಿ, ಪ್ರಭಾವಶಾಲಿ, ವರ್ಚಸ್ವೀ, ವಿವಾದಗಳಿಂದ ದೂರವಿದ್ದ ಮತ್ತು ಕ್ಲೀನ್ ಉದ್ಯಮಪತಿ ಎಂದು ಹೆಸರು ಪಡೆದವರಿಗೆ ಇದೇನೂ ದೊಡ್ಡ ಚಾಲೆಂಜ್ ಆಗಿರಲಿಲ್ಲ. ‘ಹಣ್ಣಡಿಕೆ ನೆಟ್ಟು ಹಸಿರಡಿಕೆ ಬೆಳೆಯುವದಕ್ಕಿಂತ, ಹಸಿರು ಅಡಿಕೆ ನೀಡುವ ಗಿಡವನ್ನೇ ಖರೀದಿಸುವುದು ಒಳ್ಳೆಯದು’’ ಎಂದು ಭಾವಿಸಿದರೇನೋ? ಬಹುಶಃ ಈ ತರ್ಕವೇ ಅವರಿಗೆ ಕೈಕೊಟ್ಟಿರಬಹುದು ಎನ್ನುವ ಮಾತು ಉದ್ಯಮದ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಟಾಟಾಗೆ ಇದೊಂದು ಸೆಟ್ ಬ್ಯಾಕ್ ಎಂದು ಕೆಲವರು ಕರೆಯಬಹುದು. ಕೆಲವು ಮಾಧ್ಯಮದವರು ಟಾಟಾ ಕೂಡಾ ಎಡವಿದರೇ ಎಂದು ಪ್ರಶ್ನಿಸಬಹುದು. ಆದರೆ, ವಾಸ್ತವದಲ್ಲಿ ಇದೊಂದು, ಡಿಛ್ಝ್ಝಿ ್ಚಚ್ಝ್ಚ್ಠ್ಝಠಿಛಿ ಞಟಛಿ ಎಂದು ಉದ್ಯಮದ ಜ್ಞಿ ಚ್ಞ ಟ್ಠಠಿ    ತಿಳಿದವರು ಬಣ್ಣಿಸುತ್ತಾರೆ. ಉದ್ಯಮದ ಏರು- ಇಳಿವು ಮತ್ತು ತಿರುವುಗಳನ್ನು ಚೆನ್ನಾಗಿ ತಿಳಿದವರು, ಈ ಕಂಪೆನಿಯನ್ನು ಮುಂದುವರಿಸುವುದರಿಂದ ತಮ್ಮ ಸಮೂಹ ಕಂಪೆನಿಗಳ ವರ್ಚಸ್ಸಿಗೆ ಆಗಬಹುದಾದ ದೂರಗಾಮಿ ಪರಿಣಾಮವನ್ನು ತಡೆದಿದ್ದಾರೆ. ಇದನ್ನು ಒಂದು ಕೆಟ್ಟ ಕನಸು ಎಂದು ಟಾಟಾ ಮರೆಯಬಹುದು. ತಮ್ಮ ಶಕ್ತಿಯನ್ನು ಸಮೂಹ ಕಂಪೆನಿಗಳ ಬಲವರ್ಧನೆಗೆ ಮೀಸಲಾಗಿಡಬಹುದು. ಅರ್ಧ ದರದಲ್ಲಿ ತನ್ನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಛ್ಠಞ ಮಾಡಿ ಸ್ಥಳೀಯ ಉದ್ಯಮವನ್ನು ಬುಡ ಸಹಿತ ನಾಶ ಪಡಿಸುವ ಚೀನಾದ ತಂತ್ರಗಾರಿಕೆಗೆ, ಆಕ್ರಮಣ ಶೀಲ ಔದ್ಯಮಿಕ ಚಟುವಟಿಕೆಗಳಿಗೆ ಟಾಟಾ ದಂತಹ ಕಂಪೆನಿಗಳು ಬಲಿ ಬೀಳಬೇಕಾದರೆ, ಉಳಿದ ಕಂಪೆನಿಗಳ ಪಾಡೇನು ಎಂದು ಉದ್ಯಮ ರಂಗ ಪ್ರಶ್ನಿಸುವಂತಾಗಿದೆ. ಈ ನಿಟ್ಟಿನಲ್ಲಿ ಸರಕಾರ ಚಿಂತಿಸುವ ಅನಿವಾರ್ಯತೆ ಮತ್ತು ಅಗತ್ಯತೆ ಮತ್ತು ಅರ್ಜೆನ್ಸಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅಸೋಚಮ್, ಫಿಕಿ, ಸಿಐಐ (ಅಟ್ಚಞ, ಊಜ್ಚ್ಚಿಜಿ, ಚ್ಞ ಇಐಐ) ಗಳಂತಹ ಜವಾಬ್ದಾರಿ ವ್ಯಾಪಾರೋದ್ಯಮ ಸಂಘಗಳು ಸ್ಥಳೀಯ ಉದ್ಯಮದ ಒಳಿತಿಗಾಗಿ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ.