10 ಮಿಲಿಯನ್ ಎಲ್ಇಡಿ ಬೀದಿ ದೀಪಗಳ ಅಳವಡಿಕೆಯಿಂದ ರಾಷ್ಟ್ರಕ್ಕೆ ಇಂಧನ ಉಳಿತಾಯ

ಆರ್.ಕೆ.ಸಿಂಗ್

ಇಂಧನ ದಕ್ಷತೆಯು ಬಲವಾದ, ಸ್ವಾವಲಂಬಿ ಮತ್ತು ಸುಸ್ಥಿರ ಆರ್ಥಿಕತೆಯ ಅಡಿಪಾಯವಾಗಿದೆ. ಇಂಧನ ದಕ್ಷತೆಯ ಪರಿಹಾರಗಳ ಕೈಗೆಟುಕುವಿಕೆಯನ್ನು ಉತ್ತೇಜಿಸುವ ರಾಷ್ಟ್ರವ್ಯಾಪಿ ಉಪಕ್ರಮಗಳ ಮೂಲಕ, ಭಾರತ ಸರ್ಕಾರವು ಸುಸ್ಥಿರತೆಯ ಮೂಲಭೂತ ವಿಷಯಗಳಿಗೆ ತನ್ನ ಬಲವಾದ ಬದ್ಧತೆಯನ್ನು ಪ್ರದರ್ಶಿಸಿದೆ. ನಾವು ವಿಶ್ವದ ಅತಿದೊಡ್ಡ ಇಂಧನ ದಕ್ಷತೆಯ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುತ್ತಿದ್ದೇವೆ. ಪ್ರತಿಯೊಬ್ಬ ಭಾರತೀಯನಿಗೂ ಇಂಧನ ದಕ್ಷತೆಯನ್ನು ಜೀವನ ವಿಧಾನವಾಗಿ ಉತ್ತೇಜಿಸುವುದು ನಮ್ಮ ಅಂತಿಮ ಉದ್ದೇಶ. ಈ ದೃಷ್ಟಿಕೋನವು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಮಾಡಿದ ನಮ್ಮ ಬದ್ಧತೆಗಳೊಂದಿಗೆ ಹೊಂದಿಕೆಯಾಗುತ್ತದೆ.

ನಮ್ಮ ಉದ್ದೇಶಿತ, ರಾಷ್ಟ್ರೀಯವಾಗಿ ನಿರ್ಧರಿಸಲ್ಪಟ್ಟ ಕೊಡುಗೆ (ಐಎನ್‌ಡಿಸಿ) ಅಡಿಯಲ್ಲಿ, ಕಡಿಮೆ ಇಂಗಾಲದ ಹೊರಸೂಸುವಿಕೆಯತ್ತ ಕೆಲಸ ಮಾಡಲು ಭಾರತವು ದೃಢ ಸಂಕಲ್ಪವನ್ನು ವ್ಯಕ್ತಪಡಿಸಿದೆ, ಅದೇ ಸಂದರ್ಭದಲ್ಲಿ ಎಲ್ಲಾ ಅಭಿವೃದ್ಧಿ ಗುರಿಗಳನ್ನು ಸಾಧಿಸುತ್ತದೆ. 2030 ರ ವೇಳೆಗೆ ಜಿಡಿಪಿಯ ಹೊರಸೂಸುವಿಕೆಯ ತೀವ್ರತೆಯನ್ನು ಶೇಕಡಾ 35 ರಿಂದ 33 ಕ್ಕೆ ಇಳಿಸುವ ಗುರಿ ಹೊಂದಿದ್ದೇವೆ. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದ ಬಡವರು ಮತ್ತು ದುರ್ಬಲರನ್ನು ರಕ್ಷಿಸಲು, ಜಗತ್ತು ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಭಾರತದ ಐಎನ್‌ಡಿಸಿ ಪ್ರಸ್ತಾವನೆಯು ಹವಾಮಾನ ಬದಲಾವಣೆಗೆ ಅವಿಭಾಜ್ಯ ಪರಿಹಾರಗಳಲ್ಲಿ ಒಂದಾಗಿ ಸುಸ್ಥಿರ ಜೀವನಶೈಲಿಯ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಎಲ್ಲಾ ರಾಜಕೀಯ ಪಾಲುದಾರರಿಂದ ಬಲವಾದ ರಾಜಕೀಯ ಬದ್ಧತೆ ಮತ್ತು ಸಂಘಟಿತ ಪ್ರಯತ್ನಗಳಿಂದ ಪ್ರೇರೇಪಿಸಲ್ಪಟ್ಟ ನಾವು ನಮ್ಮ ಐಎನ್‌ಡಿಸಿ ಗುರಿಗಳಿಗೆ ಹತ್ತಿರವಾಗುತ್ತಿದ್ದೇವೆ.

ವರ್ಧಿತ ಇಂಧನ ದಕ್ಷತೆಗಾಗಿನ ರಾಷ್ಟ್ರೀಯ ಅಭಿಯಾನ (ಎನ್‌ಎಂಇಇಇ)ವು ಒಟ್ಟು ತಪ್ಪಿಸಿದ ಸಾಮರ್ಥ್ಯದ ಸೇರ್ಪಡೆ 19,598 ಮೆಗಾವ್ಯಾಟ್, ವಾರ್ಷಿಕ ಇಂಧನ ಉಳಿತಾಯ ಸುಮಾರು 23 ಮಿಲಿಯನ್ ಟನ್ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ವರ್ಷಕ್ಕೆ 98.55 ಮಿಲಿಯನ್ ಟನ್ ಗಳಷ್ಟು ಕಡಿಮೆಗೊಳಿಸುವುದನ್ನು ಪೂರ್ಣ ಅನುಷ್ಠಾನದಲ್ಲಿ ಸಾಧಿಸಲು ಪ್ರಯತ್ನಿಸುತ್ತದೆ.* ಈ ಗುರಿಗಳನ್ನು ಸಾಧಿಸಲು, ಇಂಧನ ದಕ್ಷತೆಯ ಭಾರತದತ್ತ ಪ್ರಗತಿಯನ್ನು ವೇಗಗೊಳಿಸಲು ನಾವು ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಈ ಉಪಕ್ರಮಗಳು ಮಾನದಂಡಗಳನ್ನು ಮತ್ತು ಇಂಧನ ದಕ್ಷ ಗ್ರಾಹಕ ಬಾಳಿಕೆಗಳ ಲೇಬಲಿಂಗ್ ಅನ್ನು ವಿಸ್ತರಿಸುತ್ತವೆ; ಭಾರತದ ಮೊದಲ ಸೂಪರ್ ಇಂಧನ ಸೇವಾ ಕಂಪನಿ - ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ ಅನ್ನು ಉತ್ತೇಜಿಸುತ್ತದೆ; DISCOM ಗಳು ಮತ್ತು ರಾಜ್ಯಗಳ ಸಂಸ್ಥೆಗಳ ಸಾಮರ್ಥ್ಯ ವೃದ್ಧಿ; ದ್ವಿಪಕ್ಷೀಯ ನಿಧಿಗೆ ಲಭ್ಯತೆಯನ್ನು ಸುಗಮಗೊಳಿಸುವುದು ಮತ್ತು ಇ-ವಾಹನಗಳು ಮತ್ತು ಸ್ಮಾರ್ಟ್ ಮೀಟರ್‌ಗಳಂತಹ ನವೀನ ಪರಿಹಾರಗಳನ್ನು ಉತ್ತೇಜಿಸುವುದು.

ಮಾನದಂಡಗಳು ಮತ್ತು ಲೇಬಲಿಂಗ್ ಕಾರ್ಯಕ್ರಮವು ಗ್ರಾಹಕರಿಗೆ ಇಂಧನ ಉಳಿತಾಯದ ಬಗ್ಗೆ ತಿಳುವಳಿಕೆಯುಳ್ಳ ಆಯ್ಕೆಯನ್ನು ಒದಗಿಸುತ್ತದೆ ಮತ್ತು ಆ ಮೂಲಕ ಉತ್ಪನ್ನಗಳ ವೆಚ್ಚ ಉಳಿತಾಯ ಸಾಮರ್ಥ್ಯವನ್ನು ನೀಡುತ್ತದೆ. ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಕಡಿಮೆ ಮಾಡಲು ನೆರವಾಗಲು ನಾವು ಡಿಸ್ಕಾಮ್‌ಗಳ ಸಾಮರ್ಥ್ಯವನ್ನು ಸಹ ನಿರ್ಮಿಸುತ್ತಿದ್ದೇವೆ. ಇಂಧನ ತೀವ್ರತೆಯ ಕೈಗಾರಿಕೆಗಳಲ್ಲಿ ದಕ್ಷತೆಯನ್ನು ಉತ್ತೇಜಿಸಲು, ಇಂಧನ ಉಳಿತಾಯ ಪ್ರಮಾಣಪತ್ರಗಳ ವ್ಯಾಪಾರಕ್ಕೆ ಅನುವು ಮಾಡಿಕೊಡುವ ‘ಸಾಧಿಸಿ ಮತ್ತು ವ್ಯಾಪಾರ ಮಾಡಿ’ ಯೋಜನೆ ಎಂಬ ಮಾರುಕಟ್ಟೆ ಆಧಾರಿತ ಯೋಜನೆಯನ್ನು ನಾವು ಪ್ರಾರಂಭಿಸಿದ್ದೇವೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಚಾರ್ಜರ್‌ಗಳು ಪ್ರತಿಯೊಂದು ರಾಜ್ಯಕ್ಕೂ ಬಂದಿವೆ ಮತ್ತು ಸ್ಮಾರ್ಟ್ ಮೀಟರ್‌ಗಳು ತ್ವರಿತಗತಿಯಲ್ಲಿ ಮನೆಗಳಲ್ಲಿ ಅಳವಡಿಕೆಯಾಗುತ್ತಿವೆ.

ಇಂಧನ ದಕ್ಷತೆಯ ಉಪಕ್ರಮಗಳ ಪೈಕಿ ಬೀದಿ ದೀಪಗಳ ರಾಷ್ಟ್ರೀಯ ಕಾರ್ಯಕ್ರಮ (ಎಸ್‌ಎಲ್‌ಎನ್‌ಪಿ) ಇಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ. ಎಸ್‌ಎಲ್‌ಎನ್‌ ಅಡಿಯಲ್ಲಿ ಇಂಧನ ದಕ್ಷತೆಯ ಎಲ್‌ಇಡಿ ಬೀದಿ ದೀಪಗಳ ಸ್ಥಾಪನೆ ಮತ್ತು ಅಳವಡಿಕೆಯು 10 ಮಿಲಿಯನ್ (1 ಕೋಟಿ) ದಾಟಿದೆ. ಈ ಉಪಕ್ರಮವು ವಾರ್ಷಿಕ 6.71 ಶತಕೋಟಿ ಕಿಲೋವ್ಯಾಟ್ ಇಂಧನ ಉಳಿತಾಯ ಮಾಡಿದೆ ಹಾಗೂ  4.63 ಮಿಲಿಯನ್ ಟನ್ CO2 ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ. ಇದರ ಪರಿಣಾಮವಾಗಿ ಇಂಧನ ಉಳಿತಾಯವು ಗರಿಷ್ಠ ಸಮಯದಲ್ಲಿ 1,119.40 ಮೆಗಾವ್ಯಾಟ್ ಸಾಮರ್ಥ್ಯವನ್ನು ಮುಕ್ತಗೊಳಿಸಲು ದೇಶವನ್ನು ಶಕ್ತಗೊಳಿಸಿದೆ. ಇದಲ್ಲದೆ, ಈ ಇಂಧನ ದಕ್ಷತೆಯ ದೀಪಗಳು ಭಾರತದಲ್ಲಿ 270,000 ಕಿ.ಮೀ ರಸ್ತೆಗಳನ್ನು ಬೆಳಗಿಸಿವೆ ಮತ್ತು 13,000 ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ. ಇದಲ್ಲದೆ, ನಾಗರಿಕರ ತೃಪ್ತಿ ಮಟ್ಟವನ್ನು ಕಂಡುಹಿಡಿಯಲು ನಡೆಸಿದ ವಿವಿಧ ಸಮೀಕ್ಷೆಗಳಿಂದ, ಸುಮಾರು 99 ಪ್ರತಿಶತದಷ್ಟು ಜನರು ಹೊಸ ಎಲ್ಇಡಿ ಅಳವಡಿಕೆಯೊಂದಿಗೆ ಹೆಚ್ಚು ಹಾಯಾಗಿರುತ್ತಾರೆ ಎಂದು ತಿಳಿದುಬಂದಿದೆ. ಸುರಕ್ಷತೆ ಮತ್ತು ವ್ಯವಹಾರ ಚಟುವಟಿಕೆಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ಅವರು ಹೇಳುತ್ತಾರೆ.

ಎಸ್‌ಎಲ್‌ಎನ್‌ಪಿ ವಿಶ್ವದ ಅತಿದೊಡ್ಡ ಬೀದಿ ದೀಪ ಕಾರ್ಯಕ್ರಮವಾಗಿದ್ದು, ಇದನ್ನು ಈಗ ಇತರ ದೇಶಗಳು ಮಾದರಿಯಾಗಿ ಅಳವಡಿಸಿಕೊಳ್ಳುತ್ತಿವೆ. ಎಸ್‌ಎಲ್‌ಎನ್‌ಪಿ ಅಡಿಯಲ್ಲಿ ಪೇ-ಆಸ್-ಯು-ಸೇವ್ (PAYS) ಅನನ್ಯ ಮಾದರಿಯು ಅದರ ದೊಡ್ಡ ಯಶಸ್ಸಿಗೆ ಕಾರಣವಾಗಿದೆ. ಈ ಇಂಧನ ದಕ್ಷತೆ ಕಾರ್ಯಕ್ರಮದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಭಾಗವಹಿಸುವಿಕೆಯನ್ನು PAYS ಮಾದರಿಯು ಉತ್ತೇಜಿಸುತ್ತದೆ. 1500 ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಸೇರಿಕೊಂಡಿವೆ. ಎಲ್ಇಡಿ ಬೀದಿ ದೀಪಗಳು ಇಂಧನ ಉಳಿತಾಯದಿಂದಾಗಿ ವೆಚ್ಚ ಕಡಿತಕ್ಕೆ ಕಾರಣವಾಗುವುದರಿಂದ, ಹೆಚ್ಚುವರಿ ಬಜೆಟ್ ನ ಅಗತ್ಯವಿರುವುದಿಲ್ಲ.

ಇಂಧನ ದಕ್ಷತೆಯ ಎಲ್ಇಡಿ ದೀಪಗಳ ಕಾರಣದಿಂದಾಗಿ, ರಸ್ತೆಗಳಲ್ಲಿನ ಬೆಳಕಿನ ಪ್ರಮಾಣವು ನಾಗರಿಕರಲ್ಲಿ ಸುರಕ್ಷತೆಯ ಭಾವವನ್ನು ಹೆಚ್ಚಿಸುತ್ತದೆ. ಎಸ್‌ಎಲ್‌ಎನ್‌ಪಿ ಅಡಿಯಲ್ಲಿ ಸ್ಥಾಪಿಸಲಾದ ಈ ಸ್ಮಾರ್ಟ್ ಎಲ್‌ಇಡಿಗಳನ್ನು ಕೇಂದ್ರೀಯ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯ ಮೂಲಕ ದೂರದಿಂದಲೇ ಮೇಲ್ವಿಚಾರಣೆ ಮಾಡಬಹುದು ಮತ್ತು ನಿರ್ವಹಿಸಬಹುದು. ಇಂಧನ ದಕ್ಷತೆಯ ಮಹತ್ವವನ್ನು ಭಾರತ ಸರ್ಕಾರ ಗುರುತಿಸುತ್ತದೆ ಮತ್ತು ಈ ರೀತಿಯ ಮೈಲಿಗಲ್ಲುಗಳು ಉದ್ದೇಶಿತ ಗಡುವಿಗೂ ಮೊದಲೇ ನಾವು ನಮ್ಮ ಹವಾಮಾನ ಬದ್ಧತೆಗಳನ್ನು ಸಾಧಿಸುತ್ತೇವೆ ಎಂಬ ನನ್ನ ವಿಶ್ವಾಸವನ್ನು ಬಲಪಡಿಸುತ್ತವೆ.

ಯಾವುದೇ ಸುಧಾರಣೆಗೆ ಸಂಘಟಿತ ಪ್ರಯತ್ನಗಳು ಅವಶ್ಯಕ. ಇಂದು, ಪ್ರತಿಯೊಬ್ಬ ನಾಗರಿಕನು ಭಾರತದ ಇಂಧನ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ತಮ್ಮ ಕೊಡುಗೆ ನೀಡುವಂತೆ ನಾನು ಮನವಿ ಮಾಡುತ್ತೇನೆ. ಇಂಗಾಲವನ್ನು ಕಡಿಮೆ ಮಾಡುವುದನ್ನು ಮುಂದುವರೆಸುವ ಪ್ರತಿಜ್ಞೆ ಮಾಡೋಣ ಮತ್ತು ಅಭಿವೃದ್ಧಿಯು ಪಿರಮಿಡ್‌ನ ತಳಭಾಗಕ್ಕೆ ಇಳಿಯುವುದನ್ನು ಖಚಿತಪಡಿಸಿಕೊಳ್ಳೋಣ.

ಲೇಖಕರು: ಆರ್.ಕೆ.ಸಿಂಗ್. ಇಂಧನ, ನವೀನ ಮತ್ತು ನವೀಕರಿಸಬಹುದಾದ ಇಂಧನ (ಸ್ವತಂತ್ರ) ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರು

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top