ಈಜಿಪ್ಟ್: ಉಗ್ರ ದಾಳಿಯಲ್ಲಿ 52 ಭದ್ರತಾ ಸಿಬ್ಬಂದಿ ಸಾವು
ಕೈರೋ (ಈಜಿಪ್ಟ್), ಅ. 21: ಈಜಿಪ್ಟ್ನ ಪಶ್ಚಿಮದ ಮರುಭೂಮಿಯಲ್ಲಿರುವ ಬಹಾರಿಯ ಓಯಸಿಸ್ನಲ್ಲಿ ಶುಕ್ರವಾರ ಉಗ್ರರೊಂದಿಗೆ ನಡೆದ ಘರ್ಷಣೆಯಲ್ಲಿ ಈಜಿಪ್ಟ್ನ ಕನಿಷ್ಠ 52 ಸೈನಿಕರು ಮತ್ತು ಪೊಲೀಸರು ಮೃತಪಟ್ಟಿದ್ದಾರೆ ಎಂದು ಭದ್ರತಾ ಮತ್ತು ವೈದ್ಯಕೀಯ ಮೂಲಗಳು ಹೇಳಿವೆ.
ಆಂತರಿಕ ಸಚಿವಾಲಯದ ಹೇಳಿಕೆಯೊಂದು ಈ ಘಟನೆಯನ್ನು ದೃಢೀಕರಿಸಿದೆ ಹಾಗೂ ಕೆಲವು ದಾಳಿಕೋರರೂ ಮೃತಪಟ್ಟಿದ್ದಾರೆ ಎಂದು ಹೇಳಿದೆ.
ಈ ವಲಯದಲ್ಲಿ ಉಗ್ರರ ಬೇಟೆಯಾಡುತ್ತಿರುವ ಭದ್ರತಾ ಪಡೆಗಳ ಮೇಲೆ ಶುಕ್ರವಾರ ರಾತ್ರಿ ಬಹಾರಿಯ ಓಯಸಿಸ್ಗೆ ಹೋಗುವ ರಸ್ತೆಯಲ್ಲಿ ಉಗ್ರರು ಹೊಂಚು ದಾಳಿ ನಡೆಸಿದರು ಎಂದು ಆಂತರಿಕ ಸಚಿವಾಲಯದ ಹೇಳಿಕೆ ತಿಳಿಸಿದೆ.
ಭದ್ರತಾ ಪಡೆಗಳ ವಾಹನಗಳ ಸಾಲಿನ ಮೇಲೆ ರಾಕೆಟ್ ದಾಳಿ ನಡೆಸಲಾಯಿತು ಹಾಗೂ ಉಗ್ರರು ಸ್ಫೋಟಕ ಸಾಧನಗಳನ್ನೂ ದಾಳಿಯಲ್ಲಿ ಬಳಸಿದರು ಎಂದು ಮೂಲವೊಂದು ತಿಳಿಸಿದೆ.
Next Story