ಪರಮಾಣು ಸಂಘರ್ಷ ಭೀತಿ ನಿವಾರಣೆಗೆ ವ್ಯಾಟಿಕನ್ನಲ್ಲಿ ಸಮ್ಮೇಳನ
ವ್ಯಾಟಿಕನ್ ಸಿಟಿ, ಅ. 30: ಅಮೆರಿಕ ಮತ್ತು ಉತ್ತರ ಕೊರಿಯಗಳ ನಡುವಿನ ಪರಮಾಣು ಸಂಘರ್ಷದ ಭೀತಿಯನ್ನು ನಿವಾರಿಸುವ ಉದ್ದೇಶದಿಂದ ಪೋಪ್ ಪೀಠ ವ್ಯಾಟಿಕನ್ ನವೆಂಬರ್ 10 ಮತ್ತು 11ರಂದು ಸಮ್ಮೇಳನವೊಂದನ್ನು ಏರ್ಪಡಿಸಿದೆ.
ಸಮ್ಮೇಳನದಲ್ಲಿ 11 ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರು, ವಿಶ್ವಸಂಸ್ಥೆ ಮತ್ತು ನ್ಯಾಟೊದ ಹಿರಿಯ ಅಧಿಕಾರಿಗಳು ಹಾಗೂ ಪ್ರಮುಖ ದೇಶಗಳ ರಾಯಭಾರಿಗಳು ಭಾಗವಹಿಸಲಿದ್ದಾರೆ.
Next Story