ಇಸ್ರೇಲಿ ರಾಯಭಾರಿಯೊಂದಿಗೆ ಊಟ ಮಾಡಿದ ಸಂಸದನ ಉಚ್ಚಾಟನೆ
ಕೈರೋ, ಮಾ. 3: ಇಸ್ರೇಲ್ನ ಈಜಿಪ್ಟ್ ರಾಯಭಾರಿಯನ್ನು ಊಟಕ್ಕೆ ಆಹ್ವಾನಿಸಿದ ಪಕ್ಷೇತರ ಸಂಸದರೊಬ್ಬರನ್ನು ಈಜಿಪ್ಟ್ ಸಂಸತ್ತು ಬುಧವಾರ ಉಚ್ಚಾಟಿಸಿದೆ.
ಸಂಸದ ತೌಫೀಕ್ ಒಕಾಶರನ್ನು ಸಂಸತ್ತಿನಿಂದ ಉಚ್ಚಾಟಿಸುವ ನಿರ್ಣಯವನ್ನು ಉಪಸ್ಥಿತರಿದ್ದ 490 ಸಂಸದರ ಪೈಕಿ 465 ಮಂದಿ ಅನುಮೋದಿಸಿದ್ದಾರೆ ಎಂದು ಸ್ಪೀಕರ್ ಅಲಿ ಅಬ್ದುಲಾಲ್ ಘೋಷಿಸಿದರು.
ಟಿವಿ ನಿರೂಪಕ ಹಾಗೂ ಸಂಸದ ತೌಫೀಕ್ ಕಳೆದ ವಾರ ಇಸ್ರೇಲ್ ರಾಯಭಾರಿ ಹೈಮ್ ಕೋರನ್ರನ್ನು ತನ್ನ ಮನೆಗೆ ಊಟಕ್ಕೆ ಆಹ್ವಾನಿಸಿದ್ದರು. ಈ ಆಹ್ವಾನವನ್ನು ಅವರು ತನ್ನ ಟೆಲಿವಿಶನ್ ಕಾರ್ಯಕ್ರಮದಲ್ಲೇ ನೀಡಿದ್ದರು..
Next Story