ಚೀನಾ ಮಾದರಿಯ ವೀಸಾ ಭಾರತಕ್ಕಿಲ್ಲ: ಬ್ರಿಟನ್
ಲಂಡನ್, ನ. 21: ಚೀನಾ ಪ್ರಜೆಗಳಿಗೆ ಸುಲಭವಾಗಿ, ದೀರ್ಘಾವಧಿಯ ಮತ್ತು ಅಗ್ಗದ ಬ್ರಿಟಿಶ್ ವೀಸಾಗಳನ್ನು ನೀಡುವ, 2016ರ ಜನವರಿಯಲ್ಲಿ ಜಾರಿಗೆ ಬಂದ ತನ್ನ ಯೋಜನೆಯನ್ನು ಬ್ರಿಟನ್ ಖಾಯಂಗೊಳಿಸುವ ಸಾಧ್ಯತೆಯಿದೆ. ಆದರೆ, ಇದೇ ಸೌಲಭ್ಯವನ್ನು ಭಾರತೀಯರಿಗೆ ವಿಸ್ತರಿಸುವ ಯೋಜನೆ ಸದ್ಯಕ್ಕಿಲ್ಲ ಎಂದು ಬ್ರಿಟನ್ನ ವಲಸೆ ಸಚಿವ ಬ್ರಾಂಡನ್ ಲೂಯಿಸ್ ಹೇಳಿದ್ದಾರೆ.
ಸೋಮವಾರ ಹೌಸ್ ಆಫ್ ಕಾಮನ್ಸ್ನಲ್ಲಿ ಲೇಬರ್ ಸಂಸದ ವೀರೇಂದ್ರ ಶರ್ಮರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲೂಯಿಸ್, ಭಾರತದಲ್ಲಿನ ಪರಿಸ್ಥಿತಿ ಚೀನಾಕ್ಕಿಂತ ಭಿನ್ನವಾಗಿದೆ ಎಂದು ಹೇಳಿದರು.
Next Story