ಮುಗಾಬೆಗೆ ಬಂಧನದಿಂದ ರಕ್ಷಣೆ, ಭದ್ರತೆ
ಹರಾರೆ (ಜಿಂಬಾಬ್ವೆ), ನ. 23: ಜಿಂಬಾಬ್ವೆಯ ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆಗೆ ಬಂಧನದಿಂದ ರಕ್ಷಣೆ ನೀಡಲಾಗಿದೆ ಹಾಗೂ ದೇಶದಲ್ಲಿ ಅವರ ರಕ್ಷಣೆಯ ಖಾತರಿಯನ್ನು ನೀಡಲಾಗಿದೆ ಎಂದು ಮೂಲಗಳು ಗುರುವಾರ ಹೇಳಿವೆ.
ಮುಗಾಬೆ ರಾಜೀನಾಮೆ ನೀಡುವುದಕ್ಕೆ ಮುನ್ನ ಅವರೊಂದಿಗೆ ಈ ಸಂಬಂಧ ಒಪ್ಪಂದವೊಂದಕ್ಕೆ ಬರಲಾಗಿದೆ ಎನ್ನಲಾಗಿದೆ.
ಮಾಜಿ ಉಪಾಧ್ಯಕ್ಷ ಎಮರ್ಸನ್ ಮನಂಗಾಗ್ವ ಶುಕ್ರವಾರ ದೇಶದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Next Story