ಆಸ್ಟ್ರಿಯ ಅನಿಲ ಪೈಪ್ಲೈನ್ ಕೇಂದ್ರದಲ್ಲಿ ಸ್ಫೋಟ: 1 ಸಾವು
ವಿಯನ್ನ (ಆಸ್ಟ್ರಿಯ), ಡಿ. 12: ಆಸ್ಟ್ರಿಯದಲ್ಲಿರುವ ಯುರೋಪ್ನ ಅತಿ ದೊಡ್ಡ ಅನಿಲ ಪೈಪ್ಲೈನ್ ಕೇಂದ್ರವೊಂದರಲ್ಲಿ ಮಂಗಳವಾರ ಬಾಂಬ್ ಸ್ಫೋಟ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ.
ಪೂರ್ವ ವಿಯನ್ನದ ಬಾಮ್ಗಾರ್ಟನ್ನಲ್ಲಿರುವ ಆಸ್ಟ್ರಿಯದ ಅತಿ ದೊಡ್ಡ ಅನಿಲ ಸ್ವೀಕಾರ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ. ರಶ್ಯ, ನಾರ್ವೆ ಹಾಗೂ ಇತರ ದೇಶಗಳಿಗೆ ಹೋಗುವ ಅನಿಲದ ಪ್ರಧಾನ ವಿತರಣೆ ಕೇಂದ್ರ ಇದಾಗಿದೆ.
Next Story