ಇಸ್ರೇಲ್ ಸೈನಿಕರ ಗುಂಡಿಗೆ 2 ಫೆಲೆಸ್ತೀನೀಯರು ಬಲಿ: 60 ಮಂದಿಗೆ ಗಾಯ
ಜೆರುಸಲೇಂ, ಡಿ. 23: ಜೆರುಸಲೇಮನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ಫೆಲೆಸ್ತೀನೀಯರ ಮೇಲೆ ಇಸ್ರೇಲಿ ಸೈನಿಕರು ಗೋಲಿಬಾರ್ ನಡೆಸಿದ್ದು ಇಬ್ಬರು ಮೃತಪಟ್ಟಿದ್ದಾರೆ ಹಾಗೂ 60 ಮಂದಿ ಗಾಯಗೊಂಡಿದ್ದಾರೆ.
ಆಕ್ರಮಿತ ಪಶ್ಚಿಮ ದಂಡೆಯ ಎಲ್ಲ ಏಳು ಪಟ್ಟಣಗಳು ಮತ್ತು ಪೂರ್ವ ಜೆರುಸಲೇಮ್ನಲ್ಲಿ ಗಾಝಾ ಗಡಿ ಬೇಲಿಯುದ್ದಕ್ಕೂ ಸಾವಿರಾರು ಫೆಲೆಸ್ತೀನಿ ಪ್ರತಿಭಟನಕಾರರು ಇಸ್ರೇಲಿ ಸೈನಿಕರನ್ನು ಎದುರಿಸಿದರು.
ಪ್ರತಿಭಟನಕಾರರ ವಿರುದ್ಧ ಅಧಿಕ ಬಲಪ್ರಯೋಗ ಮಾಡದಂತೆ ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಇಸ್ರೇಲ್ ಅಧಿಕಾರಿಗಳಿಗೆ ಕರೆ ನೀಡಿದೆ.
Next Story