ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ; 6 ಸಾವು
ಕಾಬೂಲ್, ಡಿ. 25: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ ಗುಪ್ತಚರ ಸಂಸ್ಥೆ ಕಚೇರಿ ಬಳಿ ಸೋಮವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ 6 ಮಂದಿ ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ
ದಾಳಿ ವೇಳೆ ಗುಪ್ತಚರ ಸಂಸ್ಥೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಚೇರಿಗೆ ತೆರಳುವ ಹೊತ್ತಿಗೆ ಬಾಂಬ್ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳವನ್ನು ಅಫ್ಘಾನಿಸ್ತಾನದ ಸೇನಾ ಪಡೆ ಮತ್ತು ಪೊಲೀಸರು ಸುತ್ತುವರಿದಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ್ನು ಗುರಿಯಾಗಿರಿಸಿಕೊಂಡು ತಾಲಿಬಾನ್ ಸೇರಿದಂತೆ ಹಲವು ಉಗ್ರ ಸಂಘಟನೆಗಳು ದಾಳಿ ನಡೆಸುತ್ತಿದೆ.
ಇಂದು ನಡೆದ ದಾಳಿಗೆ ಸಂಬಂಧಿಸಿ ಯಾವುದೇ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ. ಕಳೆದ ಮೇ ತಿಂಗಳಲ್ಲಿ ರಾಯಭಾರ ಕಚೇರಿ ಬಳಿ ನಡೆದ ಬಾಂಬ್ ದಾಳಿಯಲ್ಲಿ 150 ಮಂದಿ ಮೃತಪಟ್ಟಿದ್ದರು.
Next Story