ಬಿಲ್ ಗೇಟ್ಸ್ರನ್ನು ಹಿಂದಿಕ್ಕಿದ ಅಮೆಝಾನ್ ಸಿಇಒ 5 ದಿನಗಳಲ್ಲಿ ಗಳಿಸಿದ್ದು ಎಷ್ಟು ಸಾವಿರ ಕೋಟಿ ರೂ. ಗೊತ್ತೆ?
ವಾಶಿಂಗ್ಟನ್, ಜ. 10: 2018ರಲ್ಲಿ ಕೇವಲ 5 ವ್ಯವಹಾರ ದಿನಗಳಲ್ಲಿ 6.1 ಬಿಲಿಯ ಡಾಲರ್ (ಸುಮಾರು 38,866 ಕೋಟಿ ರೂಪಾಯಿ) ಗಳಿಸಿದ ಬಳಿಕ, ಅಮೆರಿಕದ ಅಮೆಝಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ ಬೆಝೋಸ್ ಜಗತ್ತಿನ ಅತ್ಯಂತ ಶ್ರೀಮಂತನಾಗಿದ್ದಾರೆ ಎಂದು ‘ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್’ ಹೇಳಿದೆ. ಅವರ ಹಾಲಿ ಸಂಪತ್ತು 105 ಬಿಲಿಯ ಡಾಲರ್ (6.69 ಲಕ್ಷ ಕೋಟಿ ರೂಪಾಯಿ).
ಜೆಫ್ ಸೋಮವಾರ ಸಂಪತ್ತು ಗಳಿಕೆಯಲ್ಲಿ ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ರನ್ನು ಎರಡನೆ ಸ್ಥಾನಕ್ಕೆ ತಳ್ಳಿದರು. ಅಮೆಝಾನ್ನ ಶೇರು ಮೌಲ್ಯದಲ್ಲಿ ಸೋಮವಾರ 1.4 ಶೇಕಡ ಹೆಚ್ಚಳವಾದ ಹಿನ್ನೆಲೆಯಲ್ಲಿ ನ್ಯೂಮೆಕ್ಸಿಕೊ ಸಂಜಾತ ಉದ್ಯಮಿ ಸೋಮವಾರ 1.4 ಬಿಲಿಯ ಡಾಲರ್ (8920 ಕೋಟಿ ರೂಪಾಯಿ) ಲಾಭ ಗಳಿಸಿದರು.
Next Story