ಬಸ್ನಲ್ಲಿ ಬೆಂಕಿ ಅವಘಡ: 52 ಮಂದಿ ಮೃತ್ಯು
ಮಾಸ್ಕೊ, ಜ. 18: ಕಝಕ್ಸ್ತಾನದಲ್ಲಿ ಬಸ್ಸೊಂದಕ್ಕೆ ಬೆಂಕಿ ಹೊತ್ತಿಕೊಂಡು ಅದರಲ್ಲಿ ಪ್ರಯಾಣಿಸುತ್ತಿದ್ದ 52 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ಅಕ್ಟೋಬ್ ವಲಯದಲ್ಲಿ ಗುರುವಾರ ನಡೆದ ದುರಂತದಲ್ಲಿ ಕೇವಲ ಐದು ಮಂದಿ ಸಾವಿನಿಂದ ಪಾರಾಗಿದ್ದಾರೆ.
ಮೃತಪಟ್ಟವರ ಪೈಕಿ ಕೆಲವರು ನೆರೆಯ ಉಝ್ಬೆಕಿಸ್ತಾನದ ಪ್ರಜೆಗಳು ಎಂದು ತುರ್ತು ಪರಿಸ್ಥಿತಿ ಸಚಿವಾಲಯ ತಿಳಿಸಿದೆ.
Next Story