ಬ್ರಿಟನ್: ಭಾರತೀಯ ವಿದ್ವಾಂಸರ ಸಂಖ್ಯೆಯಲ್ಲಿ ಹೆಚ್ಚಳ
ಲಂಡನ್, ಜ. 20: 2010ರ ಬಳಿಕ ಬ್ರಿಟನ್ನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ, ‘ಬ್ರಿಟಿಶ್ ಇಂಡಿಯನ್’ ಎಂಬ ವರ್ಗದಲ್ಲಿ ಕೆಲಸ ಮಾಡುತ್ತಿರುವ ಶೈಕ್ಷಣಿಕ ಪರಿಣತರ ಸಂಖ್ಯೆ ಮೊದಲ ಬಾರಿಗೆ 5,000ದ ಗಡಿಯನ್ನು ದಾಟಿದೆ.
ಈ ವರ್ಗದಲ್ಲಿ ಭಾರತೀಯ ನಾಗರಿಕರು ಮತ್ತು ಭಾರತ ಮೂಲದ ಬ್ರಿಟಿಶ್ ನಾಗರಿಕರು ಬರುತ್ತಾರೆ.
2016-17ರ ಅವಧಿಯಲ್ಲಿ ಈ ವರ್ಗದಲ್ಲಿ 5,245 ವಿದ್ವಾಂಸರು ಕೆಲಸ ಮಾಡಿದ್ದು, ಆ ಪೈಕಿ 2,185 ಮಂದಿ ಭಾರತೀಯ ನಾಗರಿಕರು ಎಂದು ಹೈಯರ್ ಎಜುಕೇಶನ್ ಸ್ಟಾಟಿಸ್ಟಿಕ್ಸ್ ಏಜನ್ಸಿ (ಎಚ್ಇಎಸ್ಎ) ತಿಳಿಸಿದೆ.
Next Story