ಆಸ್ಟ್ರೇಲಿಯ: 2 ಕೋಟಿ ವಿದೇಶೀಯರ ತೆರಿಗೆ ಪರಿಶೋಧನೆ
ಸಿಡ್ನಿ (ಆಸ್ಟ್ರೇಲಿಯ), ಜ. 21: ತೆರಿಗೆ ವಂಚನೆ ಹಾಗೂ ಅವಧಿ ಮೀರಿದ ವೀಸಾಗಳನ್ನು ಪತ್ತೆಹಚ್ಚಲು 2 ಕೋಟಿಗೂ ಅಧಿಕ ಅಂತಾರಾಷ್ಟ್ರೀಯ ವೀಸಾದಾರರು ಮತ್ತು ವಿದೇಶಿ ವಿದ್ಯಾರ್ಥಿಗಳನ್ನು ಮಾಹಿತಿ-ಹೋಲಿಕೆ ಪರಿಶೋಧನೆಗೆ ಒಳಪಡಿಸಲು ಆಸ್ಟ್ರೇಲಿಯದ ತೆರಿಗೆ ಇಲಾಖೆ ನಿರ್ಧರಿಸಿದೆ.
ಈ ಪರಿಶೋಧನೆಯು 3 ವರ್ಷಗಳ ಕಾಲ ನಡೆಯಲಿದ್ದು, ಈ ಅವಧಿಯಲ್ಲಿ ಈ 2 ಕೋಟಿ ವ್ಯಕ್ತಿಗಳ ದಾಖಲೆಗಳನ್ನು ಪಡೆಯಲಾಗುವುದು ಎಂದು ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ರವಿವಾರ ‘ರಾಯ್ಟರ್ಸ್’ಗೆ ಹೇಳಿದ್ದಾರೆ.
Next Story