ವೀಸಾ ಲಾಟರಿ ವ್ಯವಸ್ಥೆಗೆ ಕೊನೆ: ಟ್ರಂಪ್ ಇಂಗಿತ
ವಾಶಿಂಗ್ಟನ್, ಜ. 26: ಅತ್ಯುನ್ನತ ಕೌಶಲ ಹೊಂದಿರುವ ಕೆಲಸಗಾರರಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ, ವೀಸಾ ಲಾಟರಿ ವ್ಯವಸ್ಥೆಯನ್ನು ಕೊನೆಗೊಳಿಸುವ ಇಂಗಿತವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.
ಈ ಕ್ರಮವು ಗ್ರೀನ್ ಕಾರ್ಡ್ (ಅಮೆರಿಕ ಪೌರತ್ವ)ಗಳಿಗಾಗಿ ದಶಕಗಳಿಂದ ಕಾಯುತ್ತಿರುವ ಸಾವಿರಾರು ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ಲಾಭ ತರಲಿದೆ.
ಇದು ಕಾಂಗ್ರೆಸ್ನಿಂದ ಅಂಗೀಕಾರಗೊಂಡು ಕಾನೂನಾದರೆ, ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಗ್ರೀನ್ ಕಾರ್ಡ್ ಸರದಿಯನ್ನು ಕಡಿಮೆಗೊಳಿಸುತ್ತದೆ.
Next Story