ಫ್ರೀಝರ್ನಲ್ಲಿ ಮಹಿಳೆಯ ಶವ ಪತ್ತೆ
ಕುವೈತ್ ಸಿಟಿ, ಫೆ. 16: ಕುವೈತ್ನಲ್ಲಿನ ಜನವಾಸ್ತವ್ಯವಿಲ್ಲದ ಅಪಾರ್ಟ್ಮೆಂಟ್ ಒಂದರ ಫ್ರೀಝರ್ನಲ್ಲಿ ಫಿಲಿಪ್ಪೀನ್ಸ್ನ ಮನೆಗೆಲಸದ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.
ಜೋನಾ ಡೇನಿಯೇಲಾ ಡೆಮಫೆಲಿಸ್ರ ಶವವನ್ನು ಶುಕ್ರವಾರ ಫಿಲಿಪ್ಪೀನ್ಸ್ಗೆ ಕಳುಹಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಫಿಲಿಪ್ಪೀನ್ಸ್ನ ಮಹಿಳೆಯೊಬ್ಬರು ಕುವೈತ್ನಲ್ಲಿ ಕೊಲೆಯಾಗಿರುವ ಎರಡನೆ ಪ್ರಕರಣ ಇದಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಫಿಲಿಪ್ಪೀನ್ಸ್ ಪ್ರಜೆಗಳು ಕುವೈತ್ನಲ್ಲಿ ಕೆಲಸ ಮಾಡುವುದನ್ನು ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ನಿಷೇಧಿಸಿದ್ದಾರೆ.
Next Story