ಸುದ್ದಿ ಓದುತ್ತಿದ್ದಂತೆ ಆ್ಯಂಕರ್ ತಲೆ ಮೇಲೆ ಕೂತ ಹಕ್ಕಿ!
ವಿಡಿಯೋ ವೈರಲ್
ಮಾಧ್ಯಮಗಳಲ್ಲಿ ಲೈವ್ ವರದಿ ಸಂದರ್ಭ ನಡೆಯುವ ಕೆಲ ಘಟನೆಗಳು ಪತ್ರಕರ್ತರನ್ನು ಮುಜುಗರಕ್ಕೀಡು ಮಾಡುತ್ತದೆ. ರೆಕಾರ್ಡೆಡ್ ವಿಡಿಯೋಗಳಾಗಿದ್ದಲ್ಲಿ ಎಡಿಟಿಂಗ್ ಸಂದರ್ಭ ಕತ್ತರಿ ಪ್ರಯೋಗಿಸಬಹುದು. ಆದರೆ ಲೈವ್ ವಿಡಿಯೋಗಳ ಕಥೆ ಹೀಗಿರುವುದಿಲ್ಲ.
ಸದ್ಯ ಇಂಟರ್ ನೆಟ್ ನಲ್ಲಿ ಇಂತಹದ್ದೇ ಕುತೂಹಲಕಾರಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ಘಟನೆ ನಡೆದದ್ದು ಕೆಎಫ್ ಎಂಬಿ ಎನ್ನುವ ಹೆಸರಿನ ಚಾನೆಲ್ ಸ್ಟುಡಿಯೋದಲ್ಲಿ. ಸುದ್ದಿ ಓದುತ್ತಿದ್ದ ನಿರೂಪಕಿ ಇನ್ನೇನು ವಿರಾಮ ಹೇಳಬೇಕು ಎನ್ನುವಷ್ಟರಲ್ಲಿ ಹಕ್ಕಿಯೊಂದು ಹಾರಿ ಬಂದು ನಿರೂಪಕಿಯ ತಲೆಯ ಮೇಲೆ ಕೂತಿದೆ.
ಆದರೆ ಸ್ವಲ್ಪವೂ ವಿಚಲಿತರಾಗದೆ ನಿರೂಪಕಿ ಕುಳಿತಿದ್ದರೆ, ಅವರೊಂದಿಗಿದ್ದ ಸಹ ನಿರೂಪಕ ನಕ್ಕು ಸುಸ್ತಾಗಿದ್ದಾರೆ. ಸದ್ಯ ಟ್ವಿಟರ್, ಯುಟ್ಯೂಬ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ.
Next Story