ಸಿರಿಯಾದಲ್ಲಿ ರಶ್ಯಾ ವಿಮಾನ ಪತನ: 32 ಮಂದಿ ಮೃತ್ಯು
ಮಾಸ್ಕೋ, ಮಾ.6: ರಶ್ಯಾದ ವಿಮಾನವೊಂದು ಸಿರಿಯಾದಲ್ಲಿ ಪತಗೊಂಡಿದ್ದು, ವಿಮಾನದಲ್ಲಿದ್ದ 32 ಮಂದಿ ಮೃತಪಟ್ಟಿದ್ದಾರೆ ಎಂದು ರಶ್ಯಾ ರಕ್ಷಣಾ ಸಚಿವಾಲಯ ಹೇಳಿರುವುದಾಗಿ ರಶ್ಯಾ ಸುದ್ದಿ ವಾಹಿನಿಗಳು ವರದಿ ಮಾಡಿವೆ.
ವಿಮಾನದಲ್ಲಿ 26 ಮಂದಿ ಪ್ರಯಾಣಿಕರು ಹಾಗು 6 ಮಂದಿ ಸಿಬ್ಬಂದಿಯಿದ್ದರು ಎನ್ನಲಾಗಿದೆ. “ತಾಂತ್ರಿಕ ಸಮಸ್ಯೆಗಳಿಂದಾಗಿ ಈ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ವಿಮಾನವು ಬೆಂಕಿಗೀಡಾಗಿರಲಿಲ್ಲ” ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ರನ್ ವೇಯಿಂದ 500 ಮೀಟರ್ ದೂರದಲ್ಲಿ ವಿಮಾನ ಪತನಗೊಂಡಿದೆ. ಈ ಘಟನೆಗೆ ಸಂಬಂಧಿಸಿದ ತನಿಖೆಯನ್ನು ವಿಶೇಷ ಸಮಿತಿಯೊಂದು ನಡೆಸಲಿದೆ.
Next Story