ಮೇರಿಲ್ಯಾಂಡ್ ಹೈಸ್ಕೂಲ್ನಲ್ಲಿ ಗುಂಡು ಹಾರಾಟ: ಹಲವರಿಗೆ ಗಾಯ
ವಾಶಿಂಗ್ಟನ್, ಮಾ. 20: ಅಮೆರಿಕದ ಮೇರಿಲ್ಯಾಂಡ್ ಹೈಸ್ಕೂಲ್ನಲ್ಲಿ ಮಂಗಳವಾರ ನಡೆದ ಗುಂಡು ಹಾರಾಟದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶಾಲೆಯನ್ನು ಬಂದ್ ಮಾಡಲಾಗಿದೆ ಹಾಗೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಶಾಲಾ ಅಧಿಕಾರಿಗಳು ಹೇಳಿದ್ದಾರೆ.
ಗುಂಡು ಹಾರಾಟದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ, ಆದರೆ ಅವರ ಪರಿಸ್ಥಿತಿಯ ಬಗ್ಗೆ ತಿಳಿದಿಲ್ಲ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
‘‘ಅಲ್ಲಿ ದೊಡ್ಡ ಸದ್ದು ಕೇಳಿಸಿತು. ಆಗ ಎಲ್ಲರೂ ಕೂಗುತ್ತಾ ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದರು’’ ಎಂಬುದಾಗಿ ಶಾಲೆಯ ವಿದ್ಯಾರ್ಥಿನಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಟ್ವೀಟ್ ಮಾಡಿದ್ದಾರೆ.
Next Story