ಸ್ವಯಂಚಾಲಿತ ವಾಹನಕ್ಕೆ ಅಮೆರಿಕದಲ್ಲಿ ಮೊದಲ ಬಲಿ: ಘಟನೆ ಕ್ಯಾಮರಾದಲ್ಲಿ ಸೆರೆ
ಸ್ಯಾನ್ ಫ್ರಾನ್ಸಿಸ್ಕೋ,ಮಾ.22 : ಉಬರ್ ಸ್ವಯಂಚಾಲಿತ ವಾಹನವೊಂದು ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದ ವೀಡಿಯೋವೊಂದನ್ನು ಅರಿಝೋನಾ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಸ್ವಯಂಚಾಲಿತ ವಾಹನಗಳು ಎಷ್ಟು ಸುರಕ್ಷಿತ ಎಂಬ ವಿಚಾರವೂ ಈ ಅಪಘಾತದ ನಂತರ ಹೆಚ್ಚು ಚರ್ಚಿತವಾಗುತ್ತಿದೆ.
ಉಬರ್ ಪರೀಕ್ಷಾರ್ಥವಾಗಿ ಉಪಯೋಗಿಸಿದ ವೋಲ್ವೋ ಸ್ಪೋರ್ಟ್ಸ್ ಯುಟಿಲಿಟಿ ವಾಹನದ ಒಳಗಿನಿಂದ ಈ ವೀಡಿಯೋ ತೆಗೆಯಲಾಗಿದ್ದು ವಾಹನವು ಕತ್ತಲು ಆವರಿಸಿದ್ದ ರಸ್ತೆಯಲ್ಲಿ ಸಂಚರಿಸುತ್ತಿದ್ದಂತೆಯೇ ಬೈಸಿಕಲ್ ಅನ್ನು ನೂಕುತ್ತಾ ಸಾಗುತ್ತಿದ್ದ ಮಹಿಳೆಯೊಬ್ಬಳು ಕಾಣಿಸುತ್ತಾಳೆ. ಆ ಮಹಿಳೆ, 49 ವರ್ಷದ ಎಲೈನ್ ಹರ್ಝ್ಬರ್ಗ್ ನಂತರ ತನಗಾದ ಗಂಭೀರ ಗಾಯಗಳಿಂದಾಗಿ ಮೃತಪಟ್ಟಿದ್ದರು.
ಫೀನಿಕ್ಸ್ ಉಪನಗರಿಯಾದ ಟೆಂಪೆ ಎಂಬಲ್ಲಿ ರವಿವಾರ ರಾತ್ರಿ ಈ ಘಟನೆ ನಡೆದಿತ್ತು. ಈ ಘಟನೆಯ ನಂತರ ಉಬರ್ ತನ್ನ ಸ್ವಯಂಚಾಲಿತ ವಾಹನದ ಪ್ರಯೋಗವನ್ನು ಉತ್ತರ ಅಮೆರಿಕಾದಲ್ಲಿ ನಿಲ್ಲಿಸಿದೆ.
Tempe Police Vehicular Crimes Unit is actively investigating
— Tempe Police (@TempePolice) March 21, 2018
the details of this incident that occurred on March 18th. We will provide updated information regarding the investigation once it is available. pic.twitter.com/2dVP72TziQ