ಬಾಂಬ್ ಸ್ಫೋಟ: ಹಮಾಸ್ ನೆಲೆಗಳ ಮೇಲೆ ಇಸ್ರೇಲ್ ದಾಳಿ
ಸಾಂದರ್ಭಿಕ ಚಿತ್ರ
ಜೆರುಸಲೇಂ, ಎ. 11: ಇಸ್ರೇಲ್-ಗಾಝಾ ಗಡಿಯಲ್ಲಿ ಇಡಲಾಗಿದ್ದ ಬಾಂಬೊಂದು ಇಸ್ರೇಲ್ ಸೈನಿಕರ ಸಮೀಪ ಸ್ಫೋಟಗೊಂಡ ಬಳಿಕ, ಗಾಝಾದಲ್ಲಿರುವ ಹಲವು ಹಮಾಸ್ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಗಡಿಯಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆಯ ವೇಳೆ ಗಡಿಬೇಲಿ ಪ್ರದೇಶದಲ್ಲಿ ಸ್ಪೋಟಕವನ್ನು ಇರಿಸಲಾಗಿತ್ತು ಎಂದು ಅದು ಹೇಳಿದೆ. ಅದು ಬುಧವಾರ ಇಸ್ರೇಲಿ ಬುಲ್ಡೋಝರ್ ಪಕ್ಕ ಸ್ಫೋಟಿಸಿತು.
ಸ್ಫೋಟದಲ್ಲಿ ಯಾರೂ ಗಾಯಗೊಂಡಿಲ್ಲ ಹಾಗೂ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲೂ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
Next Story