ಇರಾಕ್: ಶವಸಂಸ್ಕಾರದ ವೇಳೆ ಸ್ಫೋಟ; 25 ಸಾವು
ಸಮಾರ (ಇರಾಕ್), ಎ. 13: ಗುರುವಾರ ಐಸಿಸ್ ಭಯೋತ್ಪಾದಕರಿಂದ ಹತರಾದ ಇರಾಕಿ ಹೋರಾಟಗಾರರ ಶವ ಸಂಸ್ಕಾರದ ವೇಳೆ ಬಾಂಬ್ ಸ್ಫೋಟಿಸಿ ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ ಹಾಗೂ 18 ಮಂದಿ ಗಾಯಗೊಂಡಿದ್ದಾರೆ.
‘‘ಅಸ್ದಿರ ಗ್ರಾಮದ ಸ್ಮಶಾನಕ್ಕೆ ಶವಗಳನ್ನು ಮೆರವಣಿಗೆಯಲ್ಲಿ ಕರೆತಂದಾಗ ಎರಡು ಬಾಂಬ್ಗಳು ಸ್ಫೋಟಿಸಿದವು ಎಂದು ಗ್ರಾಮಸ್ಥರೊಬ್ಬರು ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
Next Story