ಅಮೆರಿಕದಲ್ಲಿ ಹಿಮ ಬಿರುಗಾಳಿ, ಹಿಮಪಾತ: 3 ಸಾವು
ಸಾಂದರ್ಭಿಕ ಚಿತ್ರ
ಮಿನಪೊಲಿಸ್ (ಅಮೆರಿಕ), ಎ. 15: ಅಮೆರಿಕದ ಗಲ್ಫ್ ಕೋಸ್ಟ್ನಿಂದ ಗ್ರೇಟ್ ಲೇಕ್ಸ್ವರೆಗೆ ಬೀಸುತ್ತಿರುವ ಹಿಮ ಬಿರುಗಾಳಿಯಿಂದಾಗಿ ಮಧ್ಯ ಅಮೆರಿಕದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿದೆ ಹಾಗೂ ಮಳೆ ಮತ್ತು ಆಲಿಕಲ್ಲು ಮಳೆ ಬೀಳುತ್ತಿದೆ.
ಈ ವಲಯದ ಹಲವಾರು ವಿಮಾನ ಹಾರಾಟಗಳನ್ನು ರದ್ದುಪಡಿಸಲಾಗಿದೆ. ಪ್ರಾಕೃತಿಕ ವಿಕೋಪದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ.
ಮಿನಿಪೊಲಿಸ್- ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 400 ವಿಮಾನಗಳನ್ನು ರದ್ದುಪಡಿಸಲಾಗಿದೆ. ಇಲ್ಲಿ ಭಾರೀ ಹಿಮಪಾತದ ಹಿನ್ನೆಲೆಯಲ್ಲಿ ರನ್ವೇಗಳನ್ನು ಸರಿಯಾಗಿಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
Next Story