ಪಾಕ್: ಪತ್ರಿಕಾ ಸ್ವಾತಂತ್ರದ ಮೇಲೆ ನಿರ್ಬಂಧ
ಲಾಹೋರ್, ಎ. 19: ಪಾಕಿಸ್ತಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ಈಗ ವಿಧಿಸಲಾಗುತ್ತಿರುವ ನಿರ್ಬಂಧಗಳನ್ನು ವಿರೋಧಿಸುವ ಪತ್ರವೊಂದಕ್ಕೆ 50ಕ್ಕೂ ಅಧಿಕ ಪತ್ರಕರ್ತರು ಸಹಿ ಹಾಕಿದ್ದಾರೆ.
ಸುದ್ದಿಯನ್ನು ಸುದ್ದಿ ಸಂಸ್ಥೆಗಳಿಗೆ ‘ಕೊಡುವ’ ಪ್ರವೃತ್ತಿ ಹೆಚ್ಚಾಗಿದೆ ಹಾಗೂ ಪತ್ರಕರ್ತರಿಗೆ ಸ್ವತಂತ್ರವಾಗಿ ಸುದ್ದಿ ಮಾಡಲು ಅವಕಾಶ ನೀಡಲಾಗುತ್ತಿಲ್ಲ ಎಂಬುದಾಗಿ ಪತ್ರಕರ್ತೆ ಬೀನಾ ಸರ್ವಾರ್ ಆರಂಭಿಸಿದ ಪತ್ರ ಹೇಳಿದೆ.
ನಿಜವಾಗಿಯೂ ನಡೆಯುವ ಘಟನೆಗಳು ವರದಿಯಾಗುತ್ತಿಲ್ಲ ಅಥವಾ ಅವುಗಳು ವರದಿಯಾಗದಂತೆ ತಡೆಯಲಾಗುತ್ತದೆ ಎಂದು ಪತ್ರ ಹೇಳುತ್ತದೆ ಎಂದು ‘ಡಾನ್ ಆನ್ಲೈನ್’ ಗುರುವಾರ ವರದಿ ಮಾಡಿದೆ.
Next Story