ಅಮೆರಿಕದ ವಿರುದ್ಧ ಒಗ್ಗಟ್ಟಿಗೆ ಖಾಮಿನೈ ಕರೆ
ಅಂಕಾರ, ಎ. 26: ಅಮೆರಿಕದ ವಿರುದ್ಧ ಒಗ್ಗಟ್ಟಾಗುವಂತೆ ಮುಸ್ಲಿಮ್ ದೇಶಗಳಿಗೆ ಇರಾನ್ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಕರೆ ನೀಡಿದ್ದಾರೆ ಹಾಗೂ ಪೀಡನೆಗೆ ಇರಾನ್ ಎಂದೂ ತಲೆಬಾಗುವುದಿಲ್ಲ ಎಂದು ಹೇಳಿದ್ದಾರೆ ಎಂದು ಸರಕಾರಿ ಟೆಲಿವಿಶನ್ ಗುರುವಾರ ವರದಿ ಮಾಡಿದೆ.
‘‘ಅಮೆರಿಕ ಮತ್ತು ಇತರ ದುರಹಂಕಾರಿ ದೇಶಗಳ ಪೀಡಿಸುವ ಪ್ರವೃತ್ತಿಯನ್ನು ಇರಾನ್ ಯಶಸ್ವಿಯಾಗಿ ವಿರೋಧಿಸುತ್ತಾ ಬಂದಿದೆ. ನಾವು ಇನ್ನು ಮುಂದೆಯೂ ಅದನ್ನು ವಿರೋಧಿಸುತ್ತೇವೆ... ಅಮೆರಿಕ ಮತ್ತು ಇತರ ಶತ್ರುಗಳ ವಿರುದ್ಧ ಎಲ್ಲ ಮುಸ್ಲಿಮ್ ದೇಶಗಳು ಒಗ್ಗಟ್ಟಾಗಬೇಕು’’ ಎಂದು ಖಾಮಿನೈ ಹೇಳಿದರು.
Next Story