ಅಫ್ಘಾನ್: ಮಸೀದಿಯಲ್ಲಿ ಸ್ಫೋಟ; 14 ಸಾವು
ಕಾಬೂಲ್, ಮೇ 6: ಅಫ್ಘಾನಿಸ್ತಾನದ ಖೋಸ್ತ್ ಪ್ರಾಂತದ ಪೂರ್ವ ಭಾಗದಲ್ಲಿರುವ ಮಸೀದಿಯೊಂದರಲ್ಲಿ ರವಿವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಹಾಗೂ 33 ಮಂದಿ ಗಾಯಗೊಂಡಿದ್ದಾರೆ.
ಈ ಮಸೀದಿಯನ್ನು ಮತದಾರರ ನೋಂದಣಿ ಕೇಂದ್ರವಾಗಿ ಬಳಸಲಾಗುತ್ತಿತ್ತು.
ಯಾವುದೇ ಗುಂಪು ಈ ಸ್ಫೋಟದ ಹೊಣೆ ಹೊತ್ತಿಲ್ಲ. ಆದರೆ, ಈ ವಲಯದಲ್ಲಿ ಸಕ್ರಿಯವಾಗಿರುವ ತಾಲಿಬಾನ್ ಮತ್ತು ಐಸಿಸ್ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ವಿರೋಧಿಸುತ್ತದೆ ಹಾಗೂ ಚುನಾವಣೆಯಲ್ಲಿ ತೊಡಗಿರುವ ಜನರ ಮೇಲೆ ಈ ಹಿಂದೆಯೂ ದಾಳಿ ನಡೆಸಿದ್ದವು.
Next Story