ಮಲೇಶ್ಯ: ನಜೀಬ್ಗೆ ವಿದೇಶ ಪ್ರವಾಸ ನಿಷೇಧ
ಕೌಲಾಲಂಪುರ (ಮಲೇಶ್ಯ), ಮೇ 12: ಇತ್ತೀಚೆಗೆ ಮಲೇಶ್ಯದಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಪರಾಭವಗೊಂಡಿರುವ ಮಾಜಿ ಪ್ರಧಾನಿ ನಜೀಬ್ ರಝಾಕ್ ಮತ್ತು ಅವರ ಪತ್ನಿ ರುಸ್ಮಾ ಮನ್ಸೂರ್ ದೇಶದಿಂದ ಹೊರಹೋಗುವುದನ್ನು ನಿಷೇಧಿಸಲಾಗಿದೆ ಎಂದು ವಲಸೆ ಇಲಾಖೆ ಶನಿವಾರ ತಿಳಿಸಿದೆ.
ತಾನು ಮತ್ತು ತನ್ನ ಕುಟುಂಬ ಸದಸ್ಯರು ಶನಿವಾರ ವಿದೇಶ ಪ್ರವಾಸಕ್ಕೆ ತೆರಳುವುದಾಗಿಯೂ, ಮುಂದಿನ ವಾರ ಹಿಂದಿರುಗುವುದಾಗಿಯೂ ನಜೀಬ್ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ವಲಸೆ ವಿಭಾಗವು ತನ್ನ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಈ ಪ್ರಕಟನೆ ಹೊರಡಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ಈ ವಾರದ ಆದಿ ಭಾಗದಲ್ಲಿ ನಡೆದ ಚುನಾವಣೆಯಲ್ಲಿ ನಜೀಬ್ರ ಬಾರಿಸನ್ ನ್ಯಾಶನಲ್ ಮೈತ್ರಿಕೂಟವು ಸೋಲು ಕಂಡಿತ್ತು. ಮಾಜಿ ಪ್ರಧಾನಿ ಮಹಾತಿರ್ ಮುಹಮ್ಮದ್ ನೇತೃತ್ವದ ಮೈತ್ರಿಕೂಟವು ವಿಜಯಿಯಾಗಿತ್ತು.
Next Story