ಪಲ್ಮೈರದಲ್ಲಿ ಐಸಿಸ್ ದಾಳಿಗೆ ಕನಿಷ್ಟ ಮೂವತ್ತು ಬಲಿ
ಪಲ್ಮೈರ, ಮೇ 23: ಸಿರಿಯಾದ ಪಲ್ಮೈರದಲ್ಲಿರುವ ಸೇನಾ ಹೊರಠಾಣೆಯ ಮೇಲೆ ಐಸಿಸ್ ಉಗ್ರರು ಮಂಗಳವಾರ ನಡೆಸಿದ ದಾಳಿಯಲ್ಲಿ ಸಿರಿಯನ್ ಸೇನೆಯ ಹಾಗೂ ಇರಾನ್ ಬೆಂಬಲಿತ ಪಡೆಯ ಕನಿಷ್ಟ ಮೂವತ್ತು ಮಂದಿ ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಾಚೀನ ರೋಮ್ ನಗರಿಯ ಆಗ್ನೇಯ ಭಾಗದಲ್ಲಿರುವ ಅಣೆಕಟ್ಟಿನ ಸಮೀಪ ಸ್ಫೋಟ ನಡೆಸಲು ಉಗ್ರರು ಆತ್ಮಾಹುತಿ ದಾಳಿಕೋರರು ಮತ್ತು ಸ್ಫೋಟಕಗಳು ತುಂಬಿದ್ದ ವಾಹನಗಳನ್ನು ಬಳಸಿದ್ದಾರೆ. ವಾರಗಳ ಕಾಲ ನಡೆದ ಬಾಂಬ್ ದಾಳಿಯ ನಂತರ ದಕ್ಷಿಣ ಡಮಾಸ್ಕಸ್ನಲ್ಲಿ ಅಡಗಿದ್ದ ಉಗ್ರರನ್ನು ಓಡಿಸುವಲ್ಲಿ ಅಲ್ಲಿನ ಸರಕಾರ ಸಫಲವಾದ ಒಂದು ದಿನದ ನಂತರ ಈ ದಾಳಿ ನಡೆದಿದೆ. ಸಿರಿಯನ್ ಆಂತರ್ಯುದ್ಧದ ಸಮಯದಲ್ಲಿ ಎರಡು ಬಾರಿ ಪಲ್ಮೈರವನ್ನು ವಶಕ್ಕೆ ಪಡೆದುಕೊಂಡಿದ್ದ ಐಸಿಸ್ ಅಲ್ಲಿನ ಅಮೂಲ್ಯ ಸ್ಮಾರಕಗಳನ್ನು ಧ್ವಂಸಗೊಳಿಸಿತ್ತು.
Next Story