ಉತ್ತರ ಕೊರಿಯಾ ಜೊತೆಗಿನ ಐತಿಹಾಸಿಕ ಶೃಂಗಸಭೆ ರದ್ದುಗೊಳಿಸಿದ ಟ್ರಂಪ್
ವಾಷಿಂಗ್ಟನ್, ಮೇ 24: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಜೊತೆ ನಡೆಸಲು ಉದ್ದೇಶಿಸಿದ್ದ ಐತಿಹಾಸಿಕ ಪರಮಾಣು ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ರದ್ದುಗೊಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಹಾಗು ಕಿಮ್ ಜಾಂಗ್ ಉನ್ ನಡುವಿನ ಮುಖಾಮುಖಿ ಭೇಟಿಯು ಜೂನ್ 12ರಂದು ಸಿಂಗಾಪುರದಲ್ಲಿ ನಡೆಯಲಿದೆ ಎನ್ನಲಾಗಿತ್ತು.
“ನಿಮ್ಮ ಇತ್ತೀಚಿನ ಹೇಳಿಕೆಗಳಲ್ಲಿ ಮುಕ್ತ ಹಗೆತನ ವ್ಯಕ್ತವಾದ ನಂತರ ಹಾಗು ಕೋಪವನ್ನು ಆಧರಿಸಿ ಈ ಸಮಯದಲ್ಲಿ ದೀರ್ಘಕಾಲದಿಂದ ಯೋಜಿಸಿದ್ದ ಮಾತುಕತೆ ನಡೆಸುವುದು ಈಗ ಸೂಕ್ತವಲ್ಲ” ಎಂದು ಟ್ರಂಪ್ ಕಿಮ್ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
Next Story