ಇಸ್ರೇಲ್ ಜೊತೆ ಕದನ ವಿರಾಮ ಘೋಷಿಸಿದ ಹಮಾಸ್
ಗಾಝಾ, ಮೇ 30: ಮಂಗಳವಾರ ರಾತ್ರಿಯಿಡೀ ನಡೆದ ಮೋರ್ಟಾರ್ ಮತ್ತು ಶೆಲ್ ದಾಳಿ ಹಾಗೂ ಆ ಕಡೆಯಿಂದ ನಡೆದ ರಾಕೆಟ್ ದಾಳಿಯ ನಂತರ ಬುಧವಾರದಂದು ಹಮಾಸ್ನ ಸಶಸ್ತ್ರ ಪಡೆ ಇಸ್ರೇಲ್ನೊಂದಿಗೆ ಈಜಿಪ್ಟ್ನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ವಕ್ತಾರ ದಾವೂದ್ ಶಿಹಬ್, ಕದನ ವಿರಾಮ ಘೋಷಣೆಗೆ ಹಮಾಸ್ ಮತ್ತು ಜಿಹಾದ್ ಸೇರಿದಂತೆ ಎಲ್ಲ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಬದ್ಧವಾಗಿವೆ. ಆದರೆ ಇಸ್ರೇಲ್ ಕೂಡಾ ಯಾವುದೇ ದಾಳಿಯನ್ನು ನಡೆಸಬಾರದು ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ಜಿಹಾದ್ ಮತ್ತು ಹಮಾಸ್ ಪಡೆ ಡಜನ್ಗಟ್ಟಲೆ ಮೋರ್ಟಾರ್ ಮತ್ತು ರಾಕೆಟ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಪಡೆಗಳು ಗಾಝಾದ ಉಗ್ರರ ಅಡಗುತಾಣಗಳ ಮೇಲೆ ರಾಕೆಟ್ ದಾಳಿ ನಡೆಸಿತ್ತು.
Next Story