ಭಾರತೀಯ ಅಮೆರಿಕನ್ಗೆ ಟ್ರಂಪ್ರಿಂದ ಕ್ಷಮಾದಾನ
ವಾಶಿಂಗ್ಟನ್, ಜೂ. 1: ವಿವಾದಾತ್ಮಕ ಭಾರತೀಯ ಅಮೆರಿಕನ್ ರಾಜಕೀಯ ವೀಕ್ಷಕ ದಿನೇಶ್ ಡಿಸೋಜರಿಗೆ ಪೂರ್ಣ ಕ್ಷಮಾದಾನವನ್ನು ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಘೋಷಿಸಿದ್ದಾರೆ.
ನಿಧಿ ಸಂಗ್ರಹ ಅಭಿಯಾನದ ಕಾನೂನನ್ನು ಉಲ್ಲಂಘಿಸಿರುವುದನ್ನು ಡಿಸೋಜ 2014ರಲ್ಲಿ ಒಪ್ಪಿಕೊಂಡಿದ್ದರು.
‘‘ಇಂದು ದಿನೇಶ್ ಡಿಸೋಜರಿಗೆ ಪೂರ್ಣ ಕ್ಷಮಾದಾನವನ್ನು ನೀಡುತ್ತೇವೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ. ‘‘ನಮ್ಮ ಸರಕಾರ ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿತ್ತು’’ ಎಂದು ಅವರು ಹೇಳಿದ್ದಾರೆ.
ಮುಂಬೈಯಿಂದ ಅಮೆರಿಕಕ್ಕೆ ವಿದ್ಯಾರ್ಥಿಯಾಗಿ ಬಂದಿದ್ದ ಡಿಸೋಜ, ರೇಗನ್ರ ಶ್ವೇತಭವನದಲ್ಲಿ ಕೆಲಸ ಮಾಡಿದ್ದರು.
2012ರಲ್ಲಿ ತಾನು ನಿಧಿ ಸಂಗ್ರಹ ಕಾನೂನನ್ನು ಉಲ್ಲಂಘಿಸಿದ್ದನ್ನು ಅವರು ಒಪ್ಪಿಕೊಂಡಿದ್ದರು.
ನ್ಯೂಯಾರ್ಕ್ ರಾಜ್ಯದ ಸೆನೆಟ್ಗೆ ಸ್ಪರ್ಧಿಸಿದ್ದ ರಿಪಬ್ಲಿಕನ್ ಪಕ್ಷದ ವೆಂಡಿ ಲಾಂಗ್ ಪರವಾಗಿ ಅವರು ನಿಧಿ ಸಂಗ್ರಹ ಮಾಡಿದ್ದರು.
Next Story