ಅಮೆರಿಕವು ತನ್ನ ನೀತಿಗಳನ್ನು ಇತರರ ಮೇಲೆ ಹೇರಲು ಯತ್ನಿಸುತ್ತಿದೆ: ರೂಹಾನಿ ಆಕ್ರೋಶ
ರೂಹಾನಿ,ಜೂ.10: ತನ್ನ ನೀತಿಗಳನ್ನು ಇತರ ದೇಶಗಳ ಮೇಲೆ ಹೇರಲು ಅಮೆರಿಕ ಶ್ರಮಿಸುತ್ತಿರುವುದು, ಜಗತ್ತಿನ ಎಲ್ಲಾ ದೇಶಗಳಿಗೆ ಒಂದು ಬೆದರಿಕೆಯಾಗಿದೆಯೆಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ವಿಂಗ್ಡಾವೊ ನಗರದಲ್ಲಿ ರವಿವಾರ ನಜೆದ ಶಾಂಘೈ ಸಹಕಾರ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಚೀನಾ ಹಾಗೂ ರಶ್ಯ ನೇತೃತ್ವದ ಭದ್ರತಾ ಕೂಟದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಇರಾನ್ ಹಾಗೂ ಅಮೆರಿಕದ ಏರ್ಪಟ್ಟಿದ್ದ ಅಣು ಒಪ್ಪಂದವನ್ನು ಉಳಿಸಿಕೊಳ್ಳಲು ಬೀಜಿಂಗ್ ಹಾಗೂ ಮಾಸ್ಕೊ ನಡೆಸಿದ್ದ ಪ್ರಯತ್ನಗಳನ್ನು ಪ್ರಶಂಸಿಸಿದರು. ಇರಾನ್ ಜೊತೆ ಏರ್ಪಟ್ಟ ಅಣು ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಕಳೆದ ತಿಂಗಳು ಘೋಷಿಸಿದ್ದರು.
Next Story