5,000 ಸಿರಿಯಾ ನಿರಾಶ್ರಿತರಿಗೆ ರಮಝಾನ್ ಆಹಾರ ಒದಗಿಸುತ್ತಿರುವ ಸಿಖ್ಖರು
ಮಾನವೀಯ ಸೇವೆಗೆ ಮತ್ತೊಂದು ಹೆಸರೇ 'ಖಾಲ್ಸಾ ಏಯ್ಡ್'
ಬೇರೂತ್, ಜೂ.14: ಲೆಬನಾನ್ ಮತ್ತು ಇರಾಕ್ ನಲ್ಲಿರುವ ಸಿರಿಯನ್ ನಿರಾಶ್ರಿತರಿಗೆ ಇಫ್ತಾರ್ ಆಹಾರವನ್ನು ಒದಗಿಸುವ ಕೈಂಕರ್ಯವನ್ನು ಇಂಗ್ಲೆಂಡ್ ಮೂಲದ ಅಂತಾರಾಷ್ಟ್ರೀಯ ಎನ್ಜಿಒ ಖಾಲ್ಸಾ ಏಯ್ಡ್ ಮಾಡುತ್ತಿದೆ. ಲೆಬನಾನ್ ಚಾರಿಟಿ ಸಂಸ್ಥೆ ಸವಾ ಫಾರ್ ಡೆವಲೆಪ್ಮೆಂಟ್ ಆ್ಯಂಡ್ ಏಯ್ಡ್ ಸಹಯೋಗದಿಂದ ಈ ಮಾನವೀಯ ಸೇವೆ ನಡೆಯುತ್ತಿದೆ.
ತಮ್ಮ ರಮಝಾನ್ ಕಿಚನ್ ಮೂಲಕ ಸವಾ ಫಾರ್ ಡೆವಲೆಪ್ಮೆಂಟ್ ಆ್ಯಂಡ್ ಏಯ್ಡ್ ಹಾಗು ಖಾಲ್ಸಾ ಏಯ್ಡ್ ಪ್ರತಿ ದಿನ 5,000ಕ್ಕೂ ಮಿಕ್ಕಿ ಸಿರಿಯಾದ ನಿರಾಶ್ರಿತರಿಗೆ ಆಹಾರವೊದಗಿಸುತ್ತಿದೆ. ಈ ರಮಝಾನ್ ಕಿಚನ್ ಕಳೆದ ಐದು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ದಾನಿಗಳ ಸಹಾಯದಿಂದ ನಡೆಯುತ್ತಿದೆ.
ತವರು ದೇಶದಲ್ಲಿ ದೌರ್ಜನ್ಯಕ್ಕೆ ಹೆದರಿ ಇತರ ರಾಷ್ಟ್ರಗಳಲ್ಲಿ ಆಶ್ರಯ ಪಡೆದಿರುವ ಸಿರಿಯಾದ ನಿರಾಶ್ರಿತರಿಗೆ ಈ ಕಾರ್ಯಕ್ರಮ ವರದಾನವಾಗಿ ಪರಿಣಮಿಸಿದೆ. ಖಾಲ್ಸಾ ಏಯ್ಡ್ ಸಿಕ್ಖ್ ತತ್ವಗಳ ಆಧಾರದಲ್ಲಿ ಕಾರ್ಯಾಚರಿಸುವ ಪ್ರಪ್ರಥಮ ಅಂತಾರಾಷ್ಟ್ರೀಯ ಸಹಾಯ ಸಂಘಟನೆಯಾಗಿದೆ. ಸಂಘಟನೆಯನ್ನು ರವೀಂದರ್ ಸಿಂಗ್ ಅವರು ಸ್ಥಾಪಿಸಿದ್ದರು.
We are funding #Ramadan Fresh food ( Iftar ) for 5000 #Syrian Refugees daily in Lebanon ! Food is freshly prepared & served. Our thx to our friends @SawaForDev for their wonderful support. #Iftar pic.twitter.com/YYU4lyfglQ
— Khalsa Aid (@Khalsa_Aid) June 12, 2018