ಆಸ್ಟ್ರೇಲಿಯ ಸಂಸತ್ತಿನಲ್ಲಿ ಯೋಗಾಭ್ಯಾಸ
ಮೆಲ್ಬರ್ನ್, ಜೂ. 18: ಆಸ್ಟ್ರೇಲಿಯ ಸಂಸತ್ತಿನಲ್ಲಿ ಸೋಮವಾರ ಮೊದಲ ಬಾರಿಗೆ ಯೋಗಾಭ್ಯಾಸವನ್ನು ಏರ್ಪಡಿಸಲಾಗಿತ್ತು. ಮಾಜಿ ಪ್ರಧಾನಿ ಟೋನಿ ಅಬಾಟ್ ಸೇರಿದಂತೆ ಹಲವಾರು ಸಂಸದರು ವಿವಿಧ ಯೋಗಾಸನಗಳನ್ನು ಮಾಡಿದರು.
ಜೂನ್ 21ರಂದು ನಡೆಯಲಿರುವ ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಕ್ಯಾನ್ಬೆರದಲ್ಲಿರುವ ಸಂಸತ್ತಿನ ಸಮುದಾಯ ಭವನದಲ್ಲಿ ಮೆಲ್ಬರ್ನ್ನ ವಾಸುದೇವ ಕ್ರಿಯಾ ಯೋಗ ಗುಂಪು ಎರಡು ಗಂಟೆಗಳ ಯೋಗಾಭ್ಯಾಸವನ್ನು ಏರ್ಪಡಿಸಿತ್ತು.
50ಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Next Story