ಅಫ್ಘಾನ್: ತಾಲಿಬಾನ್ ಉಗ್ರರಿಂದ 6 ಪೊಲೀಸರ ಹತ್ಯೆ
ಕಾಬೂಲ್, ಜೂ. 21: ದಕ್ಷಿಣ ಅಫ್ಘಾನಿಸ್ತಾನದ ಘಝ್ನಿ ಪ್ರಾಂತದಲ್ಲಿ ತಾಲಿಬಾನ್ ಉಗ್ರರು ಆರು ಪೊಲೀಸರನ್ನು ಕೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಾಲಿಬಾನಿಗಳು ಗುರುವಾರ ಮುಂಜಾನೆ ಭದ್ರತಾ ಪಡೆಗಳ ಮೇಲೆ ನಡೆಸಿದ ದಾಳಿಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಗವರ್ನರ್ರ ವಕ್ತಾರರೊಬ್ಬರು ತಿಳಿಸಿದರು.
ಹಲವು ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ 7 ಉಗ್ರರನ್ನು ಕೊಲ್ಲಲಾಗಿದೆ ಎಂದರು.
ಕಳೆದ ವಾರಾಂತ್ಯದಲ್ಲಿ ಈದುಲ್ ಫಿತ್ರ್ ರಜೆಯ ಸಂದರ್ಭದಲ್ಲಿ 3 ದಿನಗಳ ಯುದ್ಧವಿರಾಮ ಆಚರಿಸಿದ ಬಳಿಕ, ತಾಲಿಬಾನಿಗಳು ತಮ್ಮ ಹತ್ಯೆಗಳನ್ನು ಮುಂದುವರಿಸಿದ್ದಾರೆ.
Next Story