ಒಮನ್: 300 ವಿದೇಶಿ ಮಹಿಳೆಯರ ಬಂಧನ
ಮಸ್ಕತ್, ಜೂ. 26: ಒಮನ್ನಲ್ಲಿ ಈ ವರ್ಷ ವಿವಿಧ ಅಪರಾಧಗಳಿಗಾಗಿ 300ಕ್ಕೂ ಅಧಿಕ ವಿದೇಶಿ ಮಹಿಳೆಯರನ್ನು ಬಂಧಿಸಲಾಗಿದೆ.
ಬಂಧಿತ ಮಹಿಳೆಯರ ಪೈಕಿ ಹೆಚ್ಚಿನವರು ಆಫ್ರಿಕ ಮತ್ತು ಏಶ್ಯ ದೇಶಗಳ ಪ್ರಜೆಗಳು.
ಈ ಪೈಕಿ ಸುಮಾರು 104 ಮಂದಿಯನ್ನು ಅನೈತಿಕ ಚಟುವಟಿಕೆಗಳಿಗಾಗಿ ಬಂಧಿಸಲಾಗಿದೆ ಎಂದು ರಾಯಲ್ ಒಮನ್ ಪೊಲೀಸರನ್ನು ಉಲ್ಲೇಖಿಸಿ ‘ಟೈಮ್ಸ್ ಆಫ್ ಒಮನ್’ ವರದಿ ಮಾಡಿದೆ.
‘‘ಶಂಕಾಸ್ಪದ ಚಟುವಟಿಕೆಗಳು ನಡೆಯುತ್ತಿರುವ ಮನೆಗಳು, ಫ್ಲಾಟ್ಗಳು ಮತ್ತು ಸ್ಥಳಗಳ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಹಾಗಾಗಿ, ನಾವು ಈ ಸ್ಥಳಗಳ ಮೇಲೆ ನಿಗಾ ಇಟ್ಟೆವು. ಖಚಿತವಾದ ಬಳಿಕ ನಾವು ಕ್ರಮ ತೆಗೆದುಕೊಂಡೆವು ಹಾಗೂ ಈ ಮಹಿಳೆಯರನ್ನು ಬಂಧಿಸಿದೆವು’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಈ ವರ್ಷದ ಮಾರ್ಚ್ನಲ್ಲಿ ವೇಶ್ಯಾವಾಟಿಕೆ ಆರೋಪದಲ್ಲಿ 240 ವಿದೇಶಿ ಮಹಿಳೆಯರನ್ನು ಬಂಧಿಸಲಾಗಿತ್ತು ಎಂದು ವರದಿ ಹೇಳಿದೆ.
Next Story