ನವಾಝ್ ಶರೀಫ್ಗೆ ಹೊಡೆತದ ಮೇಲೆ ಹೊಡೆತ
ಇಸ್ಲಾಮಾಬಾದ್, ಜೂ. 28: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ನೇತೃತ್ವದ ಪಕ್ಷಕ್ಕೆ ಆ ದೇಶದ ಸುಪ್ರೀಂ ಕೋರ್ಟ್ ಗುರುವಾರ ಇನ್ನೊಂದು ಹೊಡೆತ ನೀಡಿದೆ.
ಜುಲೈ 25ರಂದು ನಡೆಯಲಿರುವ ಸಂಸದೀಯ ಚುನಾವಣೆಯಲ್ಲಿ ಮಾಜಿ ಖಾಸಗೀಕರಣ ಸಚಿವ ದಾನಿಯಲ್ ಅಝೀಝ್ ಸ್ಪರ್ಧಿಸುವುದನ್ನು ಅದು ನಿಷೇಧಿಸಿದೆ.
ನಿರ್ಗಮನ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ತನ್ನ ತವರು ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಚುನಾವಣಾ ಆಯೋಗದ ನ್ಯಾಯಮಂಡಳಿ ನಿಷೇಧಿಸಿದ ಒಂದು ದಿನದ ಬಳಿಕ ಅಝೀಝ್ ಮೇಲೆ ನಿಷೇದ ಹೇರಲಾಗಿದೆ.
ಆದಾಗ್ಯೂ, ಅಬ್ಬಾಸಿ ಇಸ್ಲಾಮಾಬಾದ್ನಲ್ಲಿ ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.
Next Story