ಜು. 16: ಹೆಲ್ಸಿಂಕಿಯಲ್ಲಿ ಟ್ರಂಪ್, ಪುಟಿನ್ ಭೇಟಿ
ವಾಶಿಂಗ್ಟನ್, ಜೂ. 28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜುಲೈ 16ರಂದು ಫಿನ್ಲ್ಯಾಂಡ್ ರಾಜಧಾನಿ ಹೆಲ್ಸಿಂಕಿಯಲ್ಲಿ ಶೃಂಗ ಸಮ್ಮೇಳನ ನಡೆಸಲಿದ್ದಾರೆ.
ಈ ವಿಷಯವನ್ನು ರಶ್ಯ ಸರಕಾರದ ಪೀಠ ಕ್ರೆಮ್ಲಿನ್ ಮತ್ತು ಅಮೆರಿಕ ಸರಕಾರದ ಪೀಠ ಶ್ವೇತಭವನ ಗುರುವಾರ ಪ್ರಕಟಿಸಿವೆ. ‘‘ಉಭಯ ನಾಯಕರು ಅಮೆರಿಕ ಮತ್ತು ರಶ್ಯಗಳ ನಡುವಿನ ಬಾಂಧವ್ಯ ಹಾಗೂ ಇತರ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಬಗ್ಗೆ ಮಾತುಕತೆ ನಡೆಸುವರು’’ ಎಂದು ಶ್ವೇತಭವನ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story